• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಡಗಿನಿಂದ ಬಸ್ಸಿಗೆ : ದಕ್ಷಿಣ ಕನ್ನಡ ಸಾರಿಗೆ ವಲಯದಿ ರೈ ರೈ ರೈ !

By Staff
|

ಮಂಗಳೂರು : ಬಂದರು ಸಚಿವರಾಗಿದ್ದ ರಮಾನಾಥ ರೈ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ದಕ್ಷಿಣ ಕನ್ನಡ ಸಾರಿಗೆ ವಲಯದಲ್ಲಿ ಹೊಸ ಸಂಚಲನೆ ಕಾಣಿಸಿಕೊಂಡಿದೆ.

ರಮಾನಾಥ ರೈ ಬಂದರು ಸಚಿವರಾಗಿದ್ದಾಗಲೂ ಬಸ್ಸಿನ ಪರವಾನಿಗೆಯಂಥ ಸಣ್ಣ ಪುಟ್ಟದಾಗಿ ಗೋಚರಿಸುವ ಕೆಲಸಗಳಿಗೆ ಅವರಿಂದ ಶಿಫಾರಸು ಪತ್ರಗಳಿಗಾಗಿ ಸಹಜವಾಗಿಯೇ ಸಾಕಷ್ಟು ದೊಡ್ಡ ಕ್ಯೂ ನಿಲ್ಲುತ್ತಿತ್ತು. ಈಗ ಸಾರಿಗೆ ಖಾತೆಯೇ ಊರಿನ ರೈಗಳಿಗೆ ಬಂದ ಮೇಲೆ ಒಂದಷ್ಟಾದರೂ ಕೆಲಸಗಳನ್ನು ಮಾಡಿಸಿಕೊಳ್ಳದಿದ್ದರೆ ಹೇಗೆ ?

ಜಿಲ್ಲೆಯ ಸಾರಿಗೆ ವ್ಯವಸ್ಥೆಯ ಮುಂದಿರುವ ಸಮಸ್ಯೆಗಳ ಬಗ್ಗೆ ಸಚಿವರೊಂದಿಗೆ ಚರ್ಚಿಸಲು ಖಾಸಗಿ ಬಸ್‌ ನಿರ್ವಾಹಕರು ನಿರ್ಧರಿಸಿದ್ದಾರೆ. ಚರ್ಚೆಯ ದಿನ ಇನ್ನೂ ಅಂತಿಮವಾಗಿಲ್ಲ. ಆದರೆ ಬಸ್‌ ನಿರ್ವಾಹಕರ ಸಮಸ್ಯೆಯ ಬಗ್ಗೆ ಸಚಿವರ ಅನುಕೂಲಕರ ದಿನವನ್ನು ನೋಡಿಕೊಂಡು ಚರ್ಚಿಸಲಾಗುವುದು ಎಂದು ರಾಜ್ಯ ಬಸ್‌ ನಿರ್ವಾಹಕರ ಸಂಘಟನಾ ಮಂಡಳಿಯ ಅಧ್ಯಕ್ಷ ರಾಜವರ್ಮಾ ಬಲ್ಲಾಳ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರಿಂದ ವಸೂಲಿ ಮಾಡುವ ಟಿಕೇಟು ದರ ವಿಪರೀತ ಹೆಚ್ಚಾಗಿರುತ್ತದೆ. ಅದಕ್ಕೆ ಬಸ್‌ ನಿರ್ವಾಹಕರ ಮೇಲೆ ಸರಕಾರ ವಿಧಿಸುತ್ತಿರುವ ತೆರಿಗೆ ಭಾರವೇ ಕಾರಣ. 1995ರಿಂದ ಸರಕಾರ ಪ್ರಯಾಣ ದರವನ್ನು ಪರಿಶೀಲಿಸಿಲ್ಲ. ಇದರಿಂದಾಗಿ ಖಾಸಗಿ ಬಸ್‌ ದರದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು ಎಂದು ರಾಜವರ್ಮಾ ಹೇಳಿದರು.

ಮಂಗಳೂರು - ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಬಸ್‌ ಅಪಘಾತವನ್ನು ಪ್ರಸ್ತಾಪಿಸಿದ ವರ್ಮಾ ಅವರು ಬಸ್‌ ಮಾಲಿಕರು ಬಸ್‌ ಓಡಾಟದ ಸಮಯ ನಿರ್ವಹಣೆಯನ್ನು ಅನುಸರಿಸಲಿದೆ ಎಂದರು. ಸಮಯ ನಿರ್ವಹಣಾ ಸಮಿತಿ ಬಸ್‌ ಓಡಾಟದ ಕೇಂದ್ರಗಳಲ್ಲಿ ಸಮಯ ಪಾಲನೆಯ ಬಗ್ಗೆ ಸಮೀಕ್ಷೆ ನಡೆಸಲಿದೆ. ಇದರಿಂದ ಚಾಲಕರು ಮನಸ್ಸಿಗೆ ಬಂದಾಗ ಬಸ್‌ ಓಡಿಸುವ ಪರಿಪಾಠ ತಪ್ಪಿದಂತಾಗುತ್ತದೆ ಎಂದು ವರ್ಮಾ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X