ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರೇ, ಆದಾಯ ತೆರಿಗೆ ಪಾವತಿ ಫಾರಂ ಈಗ ಆನ್‌ಲೈನ್‌ನಲ್ಲಿ

By Staff
|
Google Oneindia Kannada News

ಬೆಂಗಳೂರು : ವರ್ಷ ವರ್ಷವೂ ನಗರದಲ್ಲಿ ಆದಾಯ ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ಸಂಬಳದಾರರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ತೆರಿಗೆ ಕಟ್ಟಲು ಕ್ಯೂ ನಿಲ್ಲಲು ಯಾರಿಗೆ ಟೈಂ ಇದೆ ಹೇಳಿ? ಅದಕ್ಕೆಂದೇ ರಜ ಹಾಕುವ ಪ್ರಮೇಯ. ಇದನ್ನು ತಪ್ಪಿಸಲು ಆದಾಯ ತೆರಿಗೆ ಇಲಾಖೆ ಆನ್‌ಲೈನ್‌ ಸೇವೆಯ ಶುರುಮಾಡಿದೆ.

ಇನ್ನು ಮುಂದೆ ನೀವು ಆದಾಯ ತೆರಿಗೆ ಕಟ್ಟುವ ಅರ್ಜಿ ಪಡೆಯಲು ತೆರಿಗೆ ಇಲಾಖೆಯ ಕಚೇರಿಯ ಮೆಟ್ಟಿಲನ್ನೇ ಹತ್ತಬೇಕಿಲ್ಲ. ನಿಮ್ಮ ಮುಂದಿನ ಕಂಪ್ಯೂಟರ್‌ನಲ್ಲಿ www.incometaxbangalore.org ವೆಬ್‌ಸೈಟ್‌ಗೆ ಹೋದರಾಯಿತು. ಅರ್ಜಿ ಸಿಗುತ್ತದೆ. ಅಷ್ಟೇ ಅಲ್ಲ, ಹೊಸ ತೆರಿಗೆ ದರಗಳು, ಸಮಸ್ಯೆಗಳಿಗೆ ಪರಿಹಾರ ಮೊದಲಾದ ಅಂಶಗಳೂ ವೆಬ್‌ಸೈಟಿನಲ್ಲುಂಟು.

ಅಂದಹಾಗೆ, ಸಂಬಳದಾರರು ತೆರಿಗೆ ಕಟ್ಟಲು ಕೊನೆಯ ದಿನಾಂಕ ಜುಲೈ 31. ತ್ವರೆ ಮಾಡಿ. ಏನಾದರೂ ಅನುಮಾನ ಇದ್ದರೆ (080) 2864273 ನಂಬರಿಗೆ ಫೋನಾಯಿಸಿ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X