ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಕ್ರಿಕೆಟಿಗ, ಕನ್ನಡಿಗ ಗುಂಡಪ್ಪ ವಿಶ್ವನಾಥ್‌ ಸಂದರ್ಶನ..

By Staff
|
Google Oneindia Kannada News

ಬೆಂಗಳೂರು : ‘ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್ಟಿನ ಜಯದ ಆ ಮಧುರ ಕ್ಷಣಗಳಲ್ಲಿ ನಾನು ಮಿಸ್‌ ಮಾಡಿಕೊಂಡಿದ್ದು ಶ್ರೀನಾಥ್‌ನನ್ನು.’
ನ್ಯಾಟ್‌ವೆಸ್ಟ್‌ ಕ್ರಿಕೆಟ್‌ ಸರಣಿಯ ಫೈನಲ್‌ ಪಂದ್ಯದ ರೋಮಾಂಚನದ ಕ್ಷಣಗಳನ್ನು ಮೆಲುಕು ಹಾಕುತ್ತಿರುವವರ ಪೈಕಿ ಗುಂಡಪ್ಪ ವಿಶ್ವನಾಥ್‌ ಉರುಫ್‌ ಜಿ.ಆರ್‌.ವಿಶ್ವನಾಥ್‌ ಕೂಡ ಒಬ್ಬರು. ತಮ್ಮ ಶೈಲಿಯಿಂದಲೇ ಮೋಡಿ ಮಾಡಿದ ಈ ‘ದಾಂಡಿ’ಗ ಆಗ ಆಟದಲ್ಲಿ ಹೇಗೋ, ಈಗ ಮಾತಿನಲ್ಲೂ ಹಾಗೆ. ಪ್ರಶ್ನೆಗಳ ಸುರಿಮಳೆಗೆ ಫಟಾಫಟ್‌ ಉತ್ತರ. ಬನ್ನಿ ವಿಶ್ವನಾಥ್‌ ಹತ್ತಿರ...

ಶ್ರೀನಾಥ್‌ ಯಾಕೆ ಬೇಕಿತ್ತು?
ಇಂಗ್ಲೆಂಡನ್ನು ಮಣಿಸಿದ ತಂಡವೇನೋ ಸೊಗಸಾಗಿದೆ. ಆದರೆ, ಬೌಲಿಂಗ್‌ ಡಿಪಾರ್ಟ್‌ಮೆಂಟ್‌ನಲ್ಲಿ ಶ್ರೀನಾಥ್‌ ಇದ್ದಿದ್ದರೆ ತಂಡ ಇನ್ನೂ ಬಲವಾಗುತ್ತಿತ್ತು.

ಶ್ರೀನಾಥ್‌ ರಿಟೈರಾಗಿದ್ದಾರಲ್ಲ ?
ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದೇ ತಡ, ಅವರನ್ನು ಇಂಗ್ಲೆಂಡ್‌ನ ಒಂದು ದಿನದ ಸರಣಿಗೆ ಪರಿಗಣಿಸಲೇ ಇಲ್ಲ. ತಂಡಕ್ಕೆ ಮರಳುವುದು ಶ್ರೀನಾಥ್‌ ಕೈಲೇ ಇದೆ. ಅವರ ನಿರ್ಣಯದ ಬಗ್ಗೆ ನಾನೇನೂ ಹೇಳಲಾರೆ. ಆದರೆ ಮೇನೇಜ್‌ಮೆಂಟ್‌ನವರು ಅದರ ಬಗ್ಗೆ ಯೋಚಿಸಬೇಕು. ಶ್ರೀನಾಥ್‌ ತಂಡಕ್ಕೆ ಮರಳಿದರೆ, ಅದು ಬೋನಸ್ಸು.

ಲಾರ್ಡ್ಸ್‌ನಲ್ಲಿನ ಭಾರತದ ಗೆಲುವು ಹೇಗಿತ್ತು ?
lovely and fantastic

ಈ ಗೆಲುವಿನಿಂದ ನೀವು ಕಂಡ ಹೊಸತೇನು ?
ತಂಡದ ಬಾಲಂಗೋಚಿ ಬಲವಾಗಿದೆ ಅನ್ನೋದು. ಐದು ವಿಕೆಟ್‌ ಉರುಳಿದ್ದಾಗ, ತಂಡ ಗೆಲ್ಲುತ್ತದೆ ಅಂತ ನನಗೆ ಕಿಂಚಿತ್ತೂ ಅನಿಸಿರಲಿಲ್ಲ. ಕೈಫ್‌ ಮತ್ತು ಯುವರಾಜ್‌ ನಿರೀಕ್ಷೆಗಳನ್ನು ಮೀರಿ ಆಡಿದರು. ಬಾಲಂಗೋಚಿಗಳು ಬಲವಾಗಿದ್ದಾರೆ. ತಂಡ ಐವತ್ತು ಓವರ್‌ ಆಡೇ ಆಡುತ್ತದೆ ಎಂಬ ಹುರುಪಿನಿಂದ ಮೆಲ್ಪಂಕ್ತಿ ಆಟಗಾರರು ಆಡಬೇಕಿದೆ.

ಇದು ವಿಶ್ವ ಕಪ್‌ ಗೆಲ್ಲಬಲ್ಲ ತಂಡವೇ?
ಈ ಹೊತ್ತಲ್ಲಿ ಹೌದು. ಆದರೆ ವಿಶ್ವ ಕಪ್‌ಗೆ ಮುಂಚೆ ಆಡುವ ಆಟ ಬಹಳ ಇದೆ. ಸದ್ಯಕ್ಕೆ ಈ ತಂಡವೇ ನ್ಯೂಕ್ಲಿಯಸ್‌.

ಹೊಸ ಪ್ರತಿಭೆಗಳು ಮಿಂಚುತ್ತಿವೆ. ಅವರ ಆಟದ ಬಗ್ಗೆ ನಿಮ್ಮ ಕಾಮೆಂಟ್ಸ್‌...
ಹೊಸ ಪ್ರತಿಭೆಗಳು ಅದ್ಭುತವಾಗಿ ಆಡುತ್ತಿದ್ದಾರೆ ಅಂತ ಹೇಳೋಕಾಗಲ್ಲ. ಸರಿ ಪಡಿಸಿಕೊಳ್ಳಬೇಕಾದ ತಪ್ಪುಗಳು ಸಾಕಷ್ಟಿವೆ. ಮೊದಲಿಗೆ ನಾವು ಮಾಡಬಹುದು ಅನ್ನುವ ಧೋರಣೆಯಿಂದ ಹೊರ ಬಂದು ನಾವು ಮಾಡಲೇಬೇಕು ಅನ್ನುವ ಮನೋಭಾವ ಬೆಳೆಯಬೇಕು. ಅದರ ಹುರುಪನ್ನು ತಂಡದ ಯುವಕರು ಈಗ ಕೊಟ್ಟಿದ್ದಾರೆ.

1983ರಲ್ಲಿ ವಿಶ್ವ ಕಪ್‌ ಗೆದ್ದು ಕೊಟ್ಟ ತಂಡದ ಖದರೇ ಈ ತಂಡಕ್ಕೂ ಇದೆಯಾ?
ಖಂಡಿತ.

ಜುಲೈ 23ಕ್ಕೆ ಲಂಡನ್ನಿನಲ್ಲಿ ಪ್ರಕಟವಾಗುವ ಶತಮಾನದ ಭಾರತೀಯ ಕ್ರಿಕೆಟಿಗ ಯಾರಾಗಬಹುದು?
ಸಚಿನ್‌ ತೆಂಡೂಲ್ಕರ್‌, ಸುನಿಲ್‌ ಗವಾಸ್ಕರ್‌ ಅಥವಾ ಕಪಿಲ್‌ ದೇವ್‌.

ಗುಂಡಪ್ಪ ವಿಶ್ವನಾಥ್‌ ಇಷ್ಟೆಲ್ಲ ಹೇಳಿದ್ದು ಅನೌಪಚಾರಿಕ ಹರಟೆಯಲ್ಲಿ. ಹೇಳಲು ಅವರಲ್ಲಿ ಇನ್ನೂ ಮಾತುಗಳಿವೆ. ಆದರೆ, ಶುಕ್ರವಾರ ಅವರು ಇಂಗ್ಲೆಂಡಿಗೆ ವಿಮಾನ ಹತ್ತಬೇಕು. ಅದರ ಸಿದ್ಧತೆ ನೆನಪಿಗೆ ಬಂದು, ಮಾತು ನಿಲ್ಲಿಸಿ, ಕೆಲಸಕ್ಕೆ ಮುಂದಾದರು. ಅಂದಹಾಗೆ, ಶತಮಾನದ ಭಾರತೀಯ ಕ್ರಿಕೆಟಿಗರ ಟಾಪ್‌-16 ಯಾದಿಯಲ್ಲಿ ಅವರ ಹೆಸರೂ ಇದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X