• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗವೇದಿಕೆಯಲ್ಲಿ ಮಹಿಳಾ ಕೈದಿಗಳು,ಜು.31ರಂದು ನಾಟಕ ಪ್ರದರ್ಶನ

By Staff
|

ಬೆಂಗಳೂರು : ಕೇಂದ್ರ ಕಾರಾಗೃಹದ ಮಹಿಳಾ ಕೈದಿಗಳ ಪ್ರತಿಭಾ ಪ್ರದರ್ಶನಕ್ಕೊಂದು ಅವಕಾಶವೊದಗಿದೆ. ಜುಲೈ 31ರಂದು ಅವರು ಬಣ್ಣ ಹಚ್ಚಿ ರಂಗ ವೇದಿಕೆಯೇರಲಿದ್ದಾರೆ.

ಕೈದಿಗಳ ಮನಃಪರಿವರ್ತನೆಗೆ ಮತ್ತು ಪುನರ್ವಸತಿಗಾಗಿ ಈ ಪ್ರಯತ್ನ ಮಾಡಲಾಗುತ್ತಿದೆ. ಮೊತ್ತ ಮೊದಲಬಾರಿಗೆ ಮಹಿಳಾ ಕೈದಿಗಳು ರಂಗಭೂಮಿಯನ್ನು ಪ್ರವೇಶಿಸುತ್ತಿದ್ದು, ಜುಲೈ 31ರಂದು ಭೀಷ್ಮ ಸಾಹ್ನಿ ಅವರ ‘ಮಾಧವಿ’ ನಾಟಕವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಲಾಗುವುದು.

ಹೆಸರಾಂತ ನಿರ್ದೇಶಕ ಹುಲಗಪ್ಪ ಕಟ್ಟಿಮನಿ ನಾಟಕವನ್ನು ನಿರ್ದೇಶಿಸಲಿದ್ದಾರೆ. ಈ ನಾಟಕ ಪ್ರದರ್ಶನದ ಪೂರ್ವಭಾವಿಯಾಗಿ ಬುಧವಾರ ‘ಮಹಿಳೆ, ಸಮಾಜ ಮತ್ತು ಕಾನೂನು ’ ಎಂಬ ವಿಷಯವಾಗಿ ಚರ್ಚೆಯನ್ನೂ ಏರ್ಪಡಿಸಲಾಗಿತ್ತು. ನಾಟಕ ನಿರ್ದೇಶನಕ್ಕೆ ಮುಂಚಿತವಾಗಿ 45 ದಿನಗಳ ಕಾರ್ಯಾಗಾರವನ್ನು ನಿರ್ವಹಿಸಿದ ಕಟ್ಟಿಮನಿ ಅವರು ಯೋಗ, ಮಣ್ಣಿನ ಮಾದರಿ ತಯಾರಿಕೆ, ಚಿತ್ರ ಬರೆಯುವುದು ಸೇರಿದಂತೆ ವಿವಿಧ ಕಲೆಗಳಲ್ಲಿ ಮಹಿಳಾ ಕೈದಿಗಳನ್ನು ತೊಡಗಿಸಿ ನಂತರ ಅವರನ್ನು ನಾಟಕದ ಪಾತ್ರ ವಹಿಸಲು ಅಣಿಗೊಳಿಸಿದ್ದಾರೆ.

ದೆಹಲಿ ಹಾಗೂ ಮೈಸೂರಿನಲ್ಲಿಯೂ ಇದೇ ನಾಟಕದ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಪಿ. ಎನ್‌. ಜಯಸಿಂಹ ತಿಳಿಸಿದ್ದಾರೆ. ನಾಟಕದಲ್ಲಿ ವಿಚಾರಣಾಧೀನ ಕೈದಿಗಳನ್ನು ತೊಡಗಿಸಿಕೊಂಡಿಲ್ಲ. ಶಿಕ್ಷೆಗೊಳಗಾದ ಕೈದಿಗಳು ಮಾತ್ರ ಪಾತ್ರಧಾರಿಗಳಾಗಿ ರಂಗದ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more