• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಿರುಪತಿಯಲ್ಲಿನ ‘ಕರ್ನಾಟಕ ರಾಜ್ಯ ಛತ್ರ’ದತ್ತ ಕಣ್ಣುಬಿಟ್ಟ ತಿಮ್ಮಪ್ಪ

By Staff
|

ಬೆಂಗಳೂರು : ರಾಜ್ಯದಿಂದ ತೆರಳುವ ಭಕ್ತರಿಗೆಂದು ತಿರುಪತಿ ತಿರುಮಲದಲ್ಲಿ ರಾಜ್ಯ ಸರ್ಕಾರದ ‘ಕರ್ನಾಟಕ ರಾಜ್ಯ ಛತ್ರ’ ಎಂಬುದೊಂದಿದೆ ಗೊತ್ತೇ ?

ಕರೆಂಟಿದ್ದರೆ ನೀರು ಬರೊಲ್ಲ, ನೀರು ತೊಟತೊಟ ಅಂದರೆ ಫ್ಯಾನು ತಿರುಗೊಲ್ಲ . ಟಾಯ್ಲೆಟ್‌ ಕಡೆ ಮುಖ ಹಾಕಲು ಧೈರ್ಯವಾಗೊಲ್ಲ. ಇಂತಿಪ್ಪ ಛತ್ರಕ್ಕೆ ನೀವೇನಾದರೂ ಭೇಟಿ ಕೊಟ್ಟು, ದುರಾದೃಷ್ಟವಶಾತ್‌ ಅಲ್ಲಿ ತಂಗಿದ್ದರೆ ರಾಜ್ಯ ಸರ್ಕಾರಕ್ಕೆ ಎಷ್ಟು ಶಾಪ ಹಾಕಿರುತ್ತೀರೋ... ! ಆ ಶಾಪದ ಬಿಸಿ ಸರ್ಕಾರಕ್ಕೆ ತಟ್ಟಿರುವಂತಿದೆ. ಛತ್ರದಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಪರಿಶೀಲಿಸಿ ಸರಿಪಡಿಸಲು ಸರ್ಕಾರ ಮುಂದಾಗಿದೆ.

ಛತ್ರದಲ್ಲಿ ಎರಡು ಕೊಠಡಿಗಳನ್ನು ಅತಿಕ್ರಮಣ ಮಾಡಲಾಗಿದೆ. ಕೊಠಡಿಗಳನ್ನು ಅತಿಕ್ರಮಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಹೊರ ಹಾಕಲಾಗುವುದು. ಛತ್ರದಲ್ಲಿನ ಅವ್ಯವಹಾರಗಳನ್ನು ನಿಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೋಮವಾರ ವಿಧಾನಸಭೆಗೆ ಭರವಸೆ ನೀಡಿದರು.

ಶಾಸಕ ಸಂಪಂಗಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ತಿರುಪತಿಯಲ್ಲಿನ ರಾಜ್ಯದ ಛತ್ರದ ಅವ್ಯವಹಾರ-ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಛತ್ರದಲ್ಲಿನ ಅವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ಅರಿವಿದ್ದು , ಯಾತ್ರಾರ್ಥಿಗಳಿಗೆ ಉತ್ತರ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಈಗಿರುವ ಛತ್ರವನ್ನು ಸರಿಪಡಿಸುವುದು ಮಾತ್ರವಲ್ಲದೆ ಇನ್ನೊಂದು ಛತ್ರವನ್ನು ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕೃಷ್ಣ ವಿಧಾನಸಭೆಗೆ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X