• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಶಿ ಅಂಚೆಚೀಟಿ ಮೇಲೆ ಧ್ವಜದ ಚಿತ್ರ..ಎಲ್ಲವೂ ಕೃಷ್ಣಯ್ಯರ ಸಂಗ್ರಹ !

By Staff
|

*ಸದಾಶಿವ ಕೆ.

M. K. Krishnayyaಮಂಗಳೂರು : ನಗರದ ಪಾಂಡೇಶ್ವರ ಪ್ರಧಾನ ಅಂಚೆ ಕಚೇರಿಯಲ್ಲಿ ಭಾನುವಾರದಂದು ಧ್ವಜಗಳ ಬಗೆಗಿನ ಅಂಚೆ ಚೀಟಿ ಪ್ರದರ್ಶನ ನಡೆಯಿತು.

ದಕ್ಷಿಣ ಕನ್ನಡ ಅಂಚೆ ಚೀಟಿ ಸಂಗ್ರಹ ಸಂಸ್ಥೆಯ ಅಧ್ಯಕ್ಷ ಎಂ. ಕೆ. ಕೃಷ್ಣಯ್ಯ ಅವರು ಈ ಪ್ರದರ್ಶನವನ್ನು ಆಯೋಜಿಸಿದ್ದರು. ಮಿಲಿಟರಿ, ರ್ಯಾಲಿ, ಅರೆ ಸೇನಾಪಡೆ, ರಾಜಕೀಯ ಸಂಧಾನಗಳು ಮುಂತಾದ ಸಮಯದಲ್ಲಿ ಚಾರಿತ್ರಿಕ ಹಿನ್ನೆಲೆಯುಳ್ಳ ಮತ್ತು ಹಲವು ಸಂದರ್ಭಗಳಲ್ಲಿ ಉಪಯೋಗಿಸಿದ ಧ್ವಜಗಳು ಮತ್ತು ಅವುಗಳ ವಿವರಣೆಯಾಡನೆ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕ್ರಾಂತಿಕಾರಿ ಸಂದರ್ಭದಲ್ಲಿ ಧ್ವಜಗಳ ಉಪಯೋಗದ ಬಗ್ಗೆ ಮಾಹಿತಿ ಮತ್ತು ಅವುಗಳ ಬಗ್ಗೆ ಚುಟುಕಾಗಿ ವಿವರಣೆ ಇದ್ದುದರಿಂದ ನೋಡುಗರಿಗೆ ಧ್ವಜಗಳ ಬಗ್ಗೆ ಸುಲಭವಾಗಿ ಅರ್ಥವಾಗುವಂತಿತ್ತು.

ಕಾರ್ಪೊರೇಷನ್‌ ಬ್ಯಾಂಕಿನ ಉಡುಪಿ ವಲಯ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಎಂ. ಎ. ಕೃಷ್ಣಯ್ಯ ಅವರಿಗೆ ಧ್ವಜಗಳ ಬಗೆಗಿನ ಅಂಚೆ ಚೀಟಿ ಸಂಗ್ರಹಣೆಗಾಗಿ ಇತ್ತೀಚೆಗೆ ಅಖಿಲ ಭಾರತ ಮಟ್ಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು. 1982ರಲ್ಲಿ ಆರಂಭವಾಗಿರುವ ದಕ್ಷಿಣ ಕನ್ನಡ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಕಾರರ ಸಂಸ್ಥೆ ಆರಂಭಿಸುವಲ್ಲಿ ಮುಂಚೂಣಿಯ ಪಾತ್ರವಹಿಸಿದವರು.

ರಾಜ್ಯದ ಮತ್ತು ರಾಷ್ಟ್ರದ ಹಲವು ಕಡೆ ತಮ್ಮ ವಿಶಿಷ್ಟ ಸಂಗ್ರಹಣೆಯನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ತಮ್ಮ ಸಂಸ್ಥೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು www.udupipages.com/postal/kayya.html ಎಂಬ ಹೋಂ ಪೇಜ್‌ನ್ನು ಅಭಿವದ್ಧಿ ಪಡಿಸಿದ್ದಾರೆ. ಅಂಚೆ ಚೀಟಿ ಪ್ರದರ್ಶನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಧ್ವಜದ ಬಗ್ಗೆ ಸಂಗ್ರಹಣೆ ಬಹಳ ಉತ್ಸುಕವಾಗಿತ್ತು. ಪ್ರದರ್ಶನದ ವೇಳೆ ಕೃಷ್ಣಯ್ಯ ಅವರನ್ನು ಮಾತನಾಡಿಸಿದಾಗ, ‘ನಮ್ಮ ದೇಶದಲ್ಲಿ ಉತ್ತಮ ಹವ್ಯಾಸಗಳತ್ತ ಜನರು ಮನಸ್ಸು ಕೊಟ್ಟಿಲ್ಲ. ಆದುದರಿಂದ ಇಂತಹ ಕೆಲಸಗಳಿಗೆ ಸಾರ್ವಜನಿಕರಿಂದ ಪ್ರೋತ್ಸಾಹ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more