ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಬಿಡಬ್ಲ್ಯುತೀರ್ಪಿಗೆ ಅಂಪೈರ್‌ಗಳು ರೀಪ್ಲೆ ಕೇಳಬಹುದು : ಐಸಿಸಿ

By Staff
|
Google Oneindia Kannada News

ಲಂಡನ್‌ : ಕ್ರಿಕೆಟ್‌ ಆಟದಲ್ಲಿ ಲೆಗ್‌ ಬಿಫೋರ್‌ ವಿಕೆಟ್‌ (ಎಲ್‌ಬಿಡಬ್ಲ್ಯು) ಔಟ್‌ ತೀರ್ಪು ಕೊಡುವ ವಿಷಯದಲ್ಲಿ ಅನುಮಾನ ಬಂದಲ್ಲಿ ಟೀವಿ ಮರುಪ್ರಸಾರವನ್ನು ಅಂಪೈರ್‌ಗಳು ಪರಿಶೀಲಿಸಬಹುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಂಪೈರ್‌ಗಳು ಟಿವಿ ಪ್ರಸಾರವನ್ನು ಸದುಪಯೋಗಪಡಿಸಿಕೊಳ್ಳಬಹುದು. ಎಲ್‌ಬಿಡಬ್ಲ್ಯು ನಿರ್ಣಯಗಳಲ್ಲಿ ಅಂಪೈರ್‌ಗಳು ಎಡವುತ್ತಿರುವುದು ಹೆಚ್ಚಾಗುತ್ತಿದೆ. ಟೀವಿ ಪ್ರಸಾರವನ್ನು ಅವರು ಯಾಕೆ ತೀರ್ಪು ಕೊಡುವ ಮುನ್ನ ಬಳಸಿಕೊಳ್ಳಬಾರದು ಎಂಬ ಪ್ರಸ್ತಾವನೆ ಇಟ್ಟಿದ್ದು ಐಸಿಸಿ ಮ್ಯಾನೇಜರ್‌ ಡೇವ್‌ ರಿಚರ್ಡ್ಸನ್‌; ಸೋಮವಾರ ನಡೆದ ಮಾಜಿ ಕ್ರಿಕೆಟಿಗರ ಸಭೆಯಲ್ಲಿ.

ದಕ್ಷಿಣ ಆಫ್ರಿಕದ ಮಾಜಿ ವಿಕೆಟ್‌ ಕೀಪರ್‌ ಕೂಡ ಈ ಪ್ರಸ್ತಾವನೆಗೆ ಸ್ಪಂದಿಸಿದರು. ಆದರೆ, ಎಲ್ಲಾ ಎಲ್‌ಬಿಡಬ್ಲ್ಯು ತೀರ್ಪುಗಳಿಗೆ ಟೀವಿ ರೀಪ್ಲೇ ನೋಡಕೂಡದು. ಬ್ಯಾಟಿನ ಅಂಚಿಗೆ ಚೆಂಡು ಬಡಿದಿದೆಯಾ ಅಥವಾ ಲೆಗ್‌ ಸ್ಟಂಪ್‌ನ ಮುಂದೆ ಚೆಂಡು ಪುಟಿದಿದೆಯಾ ಎಂಬ ಅನುಮಾನ ಇದ್ದಲ್ಲಿ ಮಾತ್ರ ರೀಪ್ಲೇಗೆ ಮನವಿ ಮಾಡಬೇಕು ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X