ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಚ್‌’ ಹುಚ್ಚಿಗೆ ಸ್ಪೈಸ್‌ ಪೋಟಿ : ಹೆಚ್ಚು ಮಾತು ಕಡಿಮೆ ಬಿಲ್ಲು

By Staff
|
Google Oneindia Kannada News

ಬೆಂಗಳೂರು : ಇದು ಮೊಬೈಲ್‌ ಯುದ್ಧ ; ಸ್ಪೈಸ್‌ ಈಗಾಗಲೇ ಇದಕ್ಕೆ ಸನ್ನದ್ಧ. ಜುಲೈ 15ರಿಂದಲೇ ಸ್ಪೈಸ್‌, ಕರೆಗಳ ದರದಲ್ಲಿ ಕಡಿತ ಜಾರಿಗೆ ತಂದಿದೆ.

ಹಚ್‌ ಎಂಬ ಬಹು ರಾಷ್ಟ್ರೀಯ ಕಂಪನಿಯ ಮೊಬೈಲ್‌ ಸೇವೆಯ ಆಕರ್ಷಕ ಫಲಕಗಳು ನಗರದಲ್ಲಿ ಅಡಿಗಡಿಗೆ ಜೋತುಬಿದ್ದಿರುವ ಈ ಹೊತ್ತು ಏರ್‌ಟೆಲ್‌, ಸ್ಪೈಸ್‌ಗಳಿಗೆ ಬೆವರು. ಜಾಸ್ತಿ ಮಾತಾಡಿದಷ್ಟೂ ಕಡಿಮೆ ದುಡ್ಡು ಎಂಬ ಆಮಿಷ ಹಚ್‌ನದ್ದು. ಹಚ್‌ನ ಜಾಗತಿಕ ಸ್ಪರ್ಧೆಗೆ ಇದೀಗ ಇತರೆ ಮೊಬೈಲ್‌ ಕಂಪನಿಗಳು ಎದೆಗೊಡಬೇಕಾದ ಪರಿಸ್ಥಿತಿ.

ಈ ನಿಟ್ಟಿನಲ್ಲಿ ಸ್ಪೈಸ್‌ ಒಂದು ಹೆಜ್ಜೆ ಮುಂದೆ ಹೋಗಿದೆ. ಫ್ಲೆಕ್ಸಿ 30, ಹಾಟ್‌ 30 ಮತ್ತು ಮಸಾಲ 60 ಎಂಬ ಮೂರು 30 ಮತ್ತು 60 ಸೆಕೆಂಡುಗಳ ಬಿಲ್ಲಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಹಾಟ್‌ 30ರ ಗ್ರಾಹಕರಿಗೆ ಪ್ರತಿ 30 ಸೆಕೆಂಡ್‌ ಬರುವ ಕರೆಗೆ (ಇನ್‌ಕಮಿಂಗ್‌ ಕಾಲ್‌) 38 ಪೈಸೆ. ದಿನವಿಡೀ ಇದೇ ದರವಿರುತ್ತದೆ. ಜೊತೆಗೆ ತಿಂಗಳ ಮಾಮೂಲು ಬಾಡಿಗೆ ಕಟ್ಟಬೇಕು. ಫ್ಲೆಕ್ಸಿ 30 ಯೋಜನೆಯಲ್ಲಿ ಮೊದಲ 25 ನಿಮಿಷ ‘ಬರುವ ಕರೆಗಳು’ ಸಂಪೂರ್ಣ ಉಚಿತ. ಮಸಾಲ 60 ಯೋಜನೆಯ ರೂಪುರೇಷೆಯೂ ಹೀಗೆಯೇ- ಕರೆಗಳು ಹೆಚ್ಚಿದಷ್ಟೂ ದರ ಕಡಿಮೆ. ಅಂದರೆ ತಿಂಗಳಿಗೆ 2000 ರುಪಾಯಿ ಬಿಲ್ಲು ಕಟ್ಟುವವನಿಗೆ ತಗಲುವ ಪ್ರತಿ ಕರೆಯ ದರ ತಿಂಗಳಿಗೆ 1500 ರುಪಾಯಿ ಕಟ್ಟುವವನಿಗಿಂತ ಕಡಿಮೆ ಇರುತ್ತದೆ.

ಮೊಬೈಲ್‌ ಕಂಪನಿಗಳು ಕಾದಾಟಕ್ಕೆ ಇಳಿದಿವೆ. ಗ್ರಾಹಕನಿಗೆ ಸದ್ಯಕ್ಕೆ ನಗುವ ಸಮಯ. ದರ ಸಮರದಲ್ಲಿ, ಬೆಲೆ ಯಾವಾಗ ಹಠಾತ್‌ ಏರುತ್ತದೋ ಗೊತ್ತಿಲ್ಲ.

ಅಂದಹಾಗೆ, ಕನ್ನಡ ಪತ್ರಿಕೋದ್ಯಮದಲ್ಲಿ ಸಂಚಲನೆ ಸೃಷ್ಟಿಸಿದ್ದ ‘ವಿಜಯ ಕರ್ನಾಟಕ’ದ ದರ ಸಮರದಿಂದ ಬೇರೆ ಪತ್ರಿಕೆಗಳೂ ಬೆಲೆ ತಗ್ಗಿಸಬೇಕಾಯಿತು. ಜುಲೈ 15ರಿಂದ ವಿಜಯ ಕರ್ನಾಟಕ ಪತ್ರಿಕೆಯ ಒಂದು ಪ್ರತಿಯ ಬೆಲೆ 2 ರುಪಾಯಿಗೆ ಏರಿದೆ. ಬೇರೆ ಪತ್ರಿಕೆಗಳು ಈಗ ಏನು ಮಾಡುತ್ತವೋ ನೋಡಬೇಕು.
(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X