ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹೆಗಡೆ ಒಪ್ಪಲಿ ಬಿಡಲಿ, ದಳಗಳ ಒಂದಾಗಿಸುವ ಕೆಲಸ ನಿಲ್ಲದು’

By Staff
|
Google Oneindia Kannada News

ಮೈಸೂರು : ರಾಮಕೃಷ್ಣ ಹೆಗಡೆ ಒಪ್ಪಿಲ, ಬಿಡಲಿ. ಆಗಸ್ಟ್‌ 15ರೊಳಗೆ ಜನತಾ ದಳದ ಉಭಯ ಬಣಗಳು ಕರ್ನಾಟಕದಲ್ಲಿ ಒಂದಾಗೋದು ಗ್ಯಾರಂಟಿ. ಆಗಸ್ಟ್‌ 15ರೊಳಗೆ ಹೊಸ ಪಕ್ಷ ಕಟ್ಟುವ ಬಗ್ಗೆ ಕೊನೇ ನಿರ್ಧಾ ತೆಗೆದುಕೊಳ್ಳಲಾಗುವುದು ಎಂದು ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಎಚ್‌.ಎಸ್‌.ಮಹದೇವ ಪ್ರಸಾದ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ವಿಷಯ ತಿಳಿಸಿದರು. ಜೊತೆಯಲ್ಲಿ ಸಂಯುಕ್ತ ದಳದ ಮತ್ತೊಬ್ಬ ಶಾಸಕ ಎ.ಆರ್‌.ಕೃಷ್ಣಮೂರ್ತಿ ಇದ್ದರು. ಜುಲೈ 16ನೇ ತಾರೀಖು ಪಕ್ಷದ 19 ಶಾಸಕರು, ಮುಖಂಡರು ಹೆಗಡೆ ಅವರ ಬಳಿಗೆ ಹೋಗಿ ವಿಲೀನ ಪ್ರಕ್ರಿಯೆ ಕುರಿತು ಮಾತನಾಡಲಿದ್ದಾರೆ. ಹೆಗಡೆ ಸಮ್ಮತಿ ಸೂಚಿಸುವುದು ಒಳ್ಳೆಯದು. ಒಂದು ವೇಳೆ ಅವರು ಒಪ್ಪಿಗೆ ಕೊಡದಿದ್ದರೂ ವಿಲೀನ ಪ್ರಕ್ರಿಯೆ ಮೊಟಕಾಗದು. ಬದಲಿಗೆ ಇನ್ನೂ ಚುರುಕಾಗುವುದು ಎಂದರು.

ಆದರೆ, ಸಂಯುಕ್ತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್‌ ಮೊನ್ನೆ ತಾನೇ ಬೆಂಗಳೂರಲ್ಲಿ ದಳಗಳ ವಿಲೀನದ ಪ್ರಶ್ನೆಯೇ ಇಲ್ಲ ಅಂತ ಹೇಳಿದ್ದಾರೆ. ಒಂದೇ ದಳದವರಲ್ಲೇ ಇಂಥಾ ವಿರೋಧಾಭಾಸ ಇರುವಾಗ ವಿಲೀನದ ಬಗೆಗೆ ನಂಬಿಕೆ ಬರುವುದಾದರೂ ಹೇಗೆ ಎಂದು ಮಹದೇವ ಪ್ರಸಾದ್‌ ಅವರನ್ನು ಕಿಚಾಯಿಸಿದಾಗ,
ಶರದ್‌ ಯಾದವ್‌ ಹೇಳಿರುವುದು ಸರಿಯಲ್ಲ. ರಾಜ್ಯ ಘಟಕ ವಿಲೀನದ ಬಗ್ಗೆ ಯಾವುದೇ ನಿರ್ಣಯವನ್ನು ಈವರೆಗೆ ಸೂಚಿಸಿಲ್ಲ ಎಂದಿದ್ದಾರೆ. ಕಾಗವಾಡ ಮತ್ತು ಕನಕಪುರ ಚುನಾವಣೆ ಹಾಗೂ ಇತ್ತೀಚಿನ ವಿಧಾನ ಪರಿಷತ್‌ ಚುನಾವಣೆಯಲ್ಲಿ ಉಭಯ ದಳಗಳು ಒಟ್ಟಾಗಿ ಕೆಲಸ ಮಾಡಿದವು. ಅದರ ಫಲಶೃತಿ ಉತ್ತಮವಾಗಿಯೇ ಇದೆ. ರಾಜ್ಯದ ಜನತೆ ಕೂಡ ಉಭಯ ದಳಗಳು ವಿಲೀನವಾಗಲಿ ಅಂತ ಬಯಸುತ್ತಿದ್ದಾರೆ. ವಿಲೀನ ಪ್ರಕ್ರಿಯೆಯನ್ನು ಮುಂದುವರೆಸುವುದು ಖಂಡಿತ ಎಂದು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X