ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಕಾರಿ ಮಾರ್ಕೆಟ್‌ನಲ್ಲಿ ಕೋಟಿ ರು. ಹಾವು-ಉಡದ ಚರ್ಮ

By Staff
|
Google Oneindia Kannada News

40 ಸಾವಿರ ಹಾವಿನ ಚರ್ಮ +30 ಸಾವಿರ ಉಡದ ಚರ್ಮ = 1 ಕೋಟಿ ರುಪಾಯಿ ಮೌಲ್ಯ !
ಬೆಂಗಳೂರಿನ ಆರ್‌.ಎಂ.ಸಿ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದಿದ್ದ ಲಾರಿಯಲ್ಲಿ ಇದಿಷ್ಟು ಮಾಲನ್ನು ವಶಪಡಿಸಿಕೊಂಡ ನಂದಿನಿ ಬಡಾವಣೆ ಪೊಲೀಸರಿಗೆ ಚಣಕಾಲ ಕಕ್ಕಾಬಿಕ್ಕಿ. ಈ ಪಾಟಿ ಹಾವು-ಉಡಗಳ ಚರ್ಮ ತಂದವನು ಆಂಧ್ರಪ್ರದೇಶದ ಮದನಪಲ್ಲಿಯ ಕಂದಕೂರ್‌ ವಾಸಿ ಸೈಫುಲ್ಲಾ (27). ಈಗಾತ ಪೊಲೀಸರ ಬಂಧಿ.

ಚರ್ಮಗಳನ್ನು ಚೆನ್ನೈಗೆ ಸಾಗಿಸುವುದು, ಅಲ್ಲಿಂದ ಸಿಂಗಪುರ ಮತ್ತು ಪ್ಯಾರಿಸ್‌ಗೆ ಸಾಗಿಸುವುದು ಆರೋಪಿಯ ಉದ್ದೇಶವಾಗಿತ್ತು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಬೆಲ್ಟ್‌ , ವ್ಯಾನಿಟಿ ಬ್ಯಾಗ್‌, ಚಪ್ಪಲಿ ಹಾಗೂ ಪರ್ಸು ತಯಾರಿಕೆಗೆ ಈ ಚರ್ಮ ಬಳಸಲಾಗುತ್ತದೆ.

ಸೈಫುಲ್ಲಾ ಬಂಧನದೊಂದಿಗೆ ವನ್ಯ ಪ್ರಾಣಿಗಳ ಚರ್ಮ ಮಾರಾಟದ ಬೃಹತ್‌ ಜಾಲದ ವಾಸನೆ ಪೊಲೀಸರಿಗೆ ಬಡಿದಿದ್ದು , ಮದನಪಲ್ಲಿಯ ನವಾಬ್‌ ಮತ್ತು ಚೆನ್ನೈನ ಸಲೀಂ ಎಂಬುವರನ್ನು ಹುಡುಕಲಾಗುತ್ತಿದೆ.

ಆಂಧ್ರಪ್ರದೇಶದ ಕದಿರಿ, ಗೋರಂಟ್ಲ , ಪೆನಗೊಂಡ, ಮದನಪಲ್ಲಿ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ ಮೂಲಕ ಈ ಆರೋಪಿಗಳು ಹಾವು ಉಡದ ಚರ್ಮ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. (ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X