• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮ್ಮು-ಕಾಶ್ಮೀರ ಮಹಿಳೆಯರಿಗೆ ಆರೆಸ್ಸಸ್‌ನಿಂದ ಬಂದೂಕು ತರಬೇತಿ

By Staff
|

An RSS Woman Volunteer during Combat Trainingಶ್ರೀನಗರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳಾ ವಿಭಾಗ ರಾಷ್ಟ್ರ ಸೇವಿಕಾ ಸಮಿತಿಯು ಜಮ್ಮು- ಕಾಶ್ಮೀರದಲ್ಲಿ ವಾಸಿಸುವ ಮಹಿಳೆಯರಿಗೆ ಆತ್ಮ ರಕ್ಷಣೆಗಾಗಿ ಬಂದೂಕು ಬಳಕೆಯ ಬಗ್ಗೆ ತರಬೇತಿ ನೀಡುತ್ತಿದೆ.

ನಿರಂತರವಾಗಿ ಭಯೋತ್ಪಾದಕರ, ಕಿಡಿಗೇಡಿಗಳ ದಾಳಿಗೆ ಬಲಿಯಾಗುವ, ದೌರ್ಜನ್ಯಕ್ಕೊಳಗಾಗುವ ಮಹಿಳೆಯರು ಆತ್ಮರಕ್ಷಣೆ ಮಾಡಿಕೊಳ್ಳುವಲ್ಲಿ ಸಬಲರಾಗಿದ್ದರೆ ಅನಾಹುತ ಕಡಿಮೆಯಾದೀತು ಎಂಬುದು ಆರ್‌ಎಸ್‌ಎಸ್‌ನ ಲೆಕ್ಕಾಚಾರ. ಪ್ರಸ್ತುತ ಕಾಶ್ಮೀರದಲ್ಲಿ ಬಂದೂಕು ಬಳಕೆ ಹಾಗೂ ಕತ್ತಿ ವರಸೆಯ ಶಿಬಿರಕ್ಕೆ ಹುಡುಗಿಯರು ಧಾವಿಸುತ್ತಿದ್ದಾರೆ. ಮುಖ್ಯವಾಗಿ ದಕ್ಷಿಣ ಕಾಶ್ಮೀರದಲ್ಲಿ ನಡೆದ ಬಂದೂಕು ಚಾಲನೆ ತರಬೇತಿ ಕಾರ್ಯಕ್ರಮ ಯಶಸ್ಸು ಕಂಡಿದೆ.

ನಗರ ಪ್ರದೇಶದಲ್ಲಿ ನಾವು ನಡೆಸಿದ ಬಂದೂಕು ತರಬೇತಿ ಶಿಬಿರಕ್ಕೆ ಬಂದ ಪ್ರತಿಕ್ರಿಯೆಗಿಂತ ಹಳ್ಳಿಗಳ ಹೆಣ್ಮಕ್ಕಳು ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎಂದು ರಾಷ್ಟ್ರ ಸೇವಿಕಾ ಸಮಿತಿ ಕಾಶ್ಮೀರ ಶಾಖೆಯ ಪಂಕಜಾ ಹೇಳುತ್ತಾರೆ. ಜಮ್ಮುವಿನ ನಗರ ಪ್ರದೇಶದಲ್ಲಿ ವಾಸಿಸುವ ಹಿಂದೂ ಹೆಂಗಸರು ಬಂದೂಕು ತರಬೇತಿಯ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿಲ್ಲ.

ಈಗಾಗಲೇ ಸುಮಾರು 300 ಮಂದಿ ಯುವತಿಯರಿಗೆ ತರಬೇತಿ ನೀಡಲಾಗಿದೆ. ಅವರು ಕತ್ತಿ ವರಸೆ, ಈಟಿ ಬಳಕೆ, ಗುಂಡು ಹಾರಿಸುವುದನ್ನು ಕಲಿತುಕೊಂಡಿದ್ದಾರೆ. ಜಮ್ಮು ಪ್ರದೇಶದಲ್ಲಿಯೇ ಸುಮಾರು 30 ಮಂದಿ ಮಹಿಳೆಯರು ಹಾಗೂ ಮಕ್ಕಳು ಭಯೋತ್ಪಾದಕರ ದೌರ್ಜನ್ಯಕ್ಕೊಳಗಾಗಿದ್ದಾರೆ. ಇದರಿಂದ ಆತ್ಮರಕ್ಷಣೆಯ ಕಲೆ ಅಗತ್ಯ ಎಂಬುದು ಇಲ್ಲಿನ ಮಹಿಳೆಯರಿಗೆ ಅರಿವಾಗಿದೆ.

ಆರ್‌. ಎಸ್‌.ಪುರ, ಸಾಂಬಾ, ಬಿಷ್ನ್ಹಾ , ರಾಮ್‌ಘರ್‌ನಲ್ಲಿ ಕ್ಯಾಂಪ್‌ಗಳನ್ನು ನಡೆಸಲು ಆರ್‌ಎಸ್‌ಎಸ್‌ ಆಯೋಜಿಸಿದೆ. ಪೂಂಚ್‌, ದೋಡಾ ಹಾಗೂ ರಾಜೌರಿಯಲ್ಲಿಯೂ ತರಬೇತಿ ಶಿಬಿರಗಳನ್ನು ನಡೆಸಲು ತಯಾರಿ ನಡೆಸಲಾಗಿದೆ.

ಭಯೋತ್ಪಾದಕರ ಬಗ್ಗೆ ಹೆಜ್ಜೆ ಹೆಜ್ಜೆಗೂ ಹೆದರಿ ನಡೆಯುವುದಕ್ಕಿಂತ , ಇಂತಹ ಆತ್ಮರಕ್ಷಣಾ ಕಲೆಗಳನ್ನು ಕಲಿಯುವುದರಿಂದ ಆತ್ಮವಿಶ್ವಾಸ ಮೂಡಿದೆ. ಸರಕಾರವೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತರಬೇತಿಗೊಂಡ ಹುಡುಗಿಯರು ಪ್ರತಿಕ್ರಿಯಿಸಿದ್ದಾರೆ.

ಗಡಿ ನಿಯಂತ್ರಣಾ ರೇಖೆಯಲ್ಲಿ ವಾಸಿಸುವ ಕುಟುಂಬದ ಹುಡುಗಿಯರಿಗೂ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ ಎಂದು ಪಂಕಜಾ ತಿಳಿಸಿದರು. ಆತ್ಮರಕ್ಷಣೆಯ ವಿಧಾನ ಗೊತ್ತಿದ್ದರೆ ಭಾರತೀಯ ಸೇನಾ ಪಡೆಗೂ ಸಣ್ಣ ಪುಟ್ಟ ಸುಳಿವು ನೀಡುವ ಸಹಾಯವನ್ನಾದರೂ ಮಾಡಬಹುದಲ್ಲವೇ. ಯಾಕೆಂದರೆ ಭಯೋತ್ಪಾದಕರು ಮೊದಲು ಹಳ್ಳಿಯಾಳಗೆ ಕಾಲಿಟ್ಟು , ತಳವೂರಿದ ನಂತರ ಮುಂದಿನ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ಎಂದು ಪಂಕಜಾ ಹೇಳುತ್ತಾರೆ.

(ಇನ್ಫೋ ವಾರ್ತೆ)

ಹರಿಹರೇಶ್ವರರ ಕಣ್ಣಲ್ಲಿ ಕಾಶ್ಮೀರ

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X