ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿ.ವಿ. ಪಿಹೆಚ್‌. ಡಿ. ಅಭ್ಯಥಿ-ರ್-ಗ-ಳಿ-ಗೆ ಪ್ರವೇ-ಶ ಪರೀಕ್ಷೆ

By Staff
|
Google Oneindia Kannada News

ಬೆಂಗಳೂರು : ಪಿಹೆಚ್‌. ಡಿ. ಅಧ್ಯಯನ ಕೈಗೊಳ್ಳ ಬಯಸುವ ಅಭ್ಯರ್ಥಿಗಳು ಇನ್ನು ಮುಂದೆ ನೋಂದಾವಣಿಗೆ ಮುನ್ನ ಪ್ರವೇಶ ಪರೀಕ್ಷೆ ಬರೆಯುವುದನ್ನು ಬೆಂಗಳೂರು ವಿಶ್ವ ವಿದ್ಯಾಲಯ ಕಡ್ಡಾಯಗೊಳಿಸಿದೆ.

2003-04ನೇ ಇಸವಿಯಿಂದ ಅಧ್ಯಯನ ಕೈಗೊಳ್ಳ ಬಯಸುವ ಅಭ್ಯರ್ಥಿಗಳಿಗೆ ಈ ಹೊಸ ನಿಯಮ ಅನ್ವಯವಾಗುತ್ತದೆ. ಅಭ್ಯರ್ಥಿಯು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ 55ರಷ್ಟು ಸರಾಸರಿ ಅಂಕಗಳನ್ನು ಪಡೆದಿರಬೇಕು. ಪ್ರತಿವರ್ಷ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ಈ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗುವುದು. ಮೂರು ಗಂಟೆಯ ಅವಧಿಯಲ್ಲಿ ಸಾಮಾನ್ಯ ಜ್ಞಾನ ಮತ್ತು ಅಧ್ಯಯನಕ್ಕೆ ಆಯ್ದುಕೊಂಡಿರುವ ವಿಷಯದ ಬಗ್ಗೆ ಪ್ರವೇಶ ಪರೀಕ್ಷೆ ನಡೆಯುತ್ತದೆ.

ವಿಭಾಗೀಯ ಅಧ್ಯಯನ ನಿಯಂತ್ರಣ ಸಮಿತಿಯು ಪ್ರತಿ ಅರ್ಧ ವರ್ಷದಲ್ಲಿ ಅಭ್ಯರ್ಥಿಗಳ ಅಭಿವೃದ್ಧಿ ವರದಿಯನ್ನು ಪರಿಶೀಲಿಸುತ್ತದೆ. ವಿಭಾಗದ ಡೀನ್‌, ವಿಭಾಗ ಪ್ರಮುಖ ಮತ್ತು ಬೇರೆ ವಿವಿಯ ಇಬ್ಬರು ವಿಷಯ ತಜ್ಞರನ್ನೊಳಗೊಂಡ ಇನ್ನೊಂದು ಪರಿಣತ ಸಮಿತಿ (doctoral committee)ಯು ಅಭ್ಯರ್ಥಿಗಳ ನಾಮಪತ್ರವನ್ನು ಪರಿಶೀಲಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X