• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಜಾನೆ ಖಾಲಿ, ರಾಜೀನಾಮೆ ಕೊಡಿ - ಪ್ರತಿಪಕ್ಷ ;ಎಲ್ಲ ಸುಳ್ಳು - ಕೃಷ್ಣ

By Staff
|

ಬೆಂಗಳೂರು : ಯಾವುದೇ ಖಜಾನೆ ಪಾವತಿಗಳನ್ನು ನೀಡದಂತೆ ಸರ್ಕಾರ ಸೂಚನೆ ನೀಡಿದೆ ಎನ್ನುವ ಪ್ರತಿಪಕ್ಷದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ರಾಜ್ಯದ ಬೊಕ್ಕಸದ ಆರೋಗ್ಯ ಚೆನ್ನಾಗಿದೆ ಎಂದು ಪುನರುಚ್ಚರಿಸಿದ್ದಾರೆ.

ಖಜಾನೆ ಪಾವತಿಗಳ ಮೇಲೆ ಯಾವುದೇ ನಿಷೇಧ ಹೇರಿಲ್ಲ . ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನೂ ಸ್ಥಗಿತಗೊಳಿಸಿಲ್ಲ ಎಂದು ಗುರುವಾರ ವಿಧಾನಸಭೆಯಲ್ಲಿ ಕೃಷ್ಣ ಖಾರವಾಗಿ ನುಡಿದರು. ಹಣಕಾಸಿನ ಕೊರತೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತಡೆಯುಂಟಾಗಿದೆ ಎನ್ನುವ ಪ್ರತಿಪಕ್ಷದ ಆರೋಪಗಳನ್ನು ಅವರು ನಿರಾಕರಿಸಿದರು.

ಜುಲೈ 15 ರವರೆಗೆ ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಹೇಳಿಕೆಯಾಂದನ್ನು ನೀಡುವುದಾಗಿ ಸ್ವತಃ ಹಣಕಾಸು ಖಾತೆಯನ್ನು ಹೊಂದಿರುವ ಕೃಷ್ಣ ಪ್ರಕಟಿಸಿದರು.

ಇದಕ್ಕೂ ಮುನ್ನ ಪ್ರತಿಪಕ್ಷದ ನಾಯಕರಾದ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಹಾಗೂ ಸಂಯುಕ್ತ ಜನತಾದಳದ ಪಿಜಿಆರ್‌ ಸಿಂಧ್ಯಾ ಅವರು ಅಭಿವೃದ್ಧಿ ಕಾರ್ಯಗಳಿಗೆ ವಿಳಂಬ ಹಣ ಪಾವತಿಯ ಕುರಿತು ಗುತ್ತಿಗೆದಾರರು ವ್ಯಕ್ತಪಡಿಸಿರುವ ಪ್ರತಿಭಟನೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು.

ಖಜಾನೆ ಪಾವತಿಗಳಿಗೆ ಸರ್ಕಾರ ತಡೆಯಾಡ್ಡಿದೆ. ಹಣಕಾಸು ಬಿಕ್ಕಟ್ಟಿನ ನೈತಿಕ ಜವಾಬ್ದಾರಿ ಹೊತ್ತು ಮುಖ್ಯಮಂತ್ರಿ ಕೃಷ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿಂಧ್ಯಾ ಒತ್ತಾಯಿಸಿದರು.
(ಪಿಟಿಐ)

ಮುಖಪುಟ / ಕೃಷ್ಣ ಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more