ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕ್‌ನ ಶಾಖೆ ಆರಂಭ

By Staff
|
Google Oneindia Kannada News

ಬೆಂಗಳೂರು : ಭಾರತದಲ್ಲಿ ತನ್ನ ಬಿಳಲುಗಳನ್ನು ನಿಧಾನವಾಗಿ ವಿಸ್ತರಿಸಿಕೊಳ್ಳುತ್ತಿರುವ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕ್‌ ಭಾರತದಲ್ಲಿನ ತನ್ನ ಐದನೆ ಶಾಖೆಯನ್ನು ಬೆಂಗಳೂರಿನಲ್ಲಿ ತೆರೆದಿದೆ.

ಈಗಾಗಲೇ ನಾಲ್ಕು ಮೆಟ್ರೋ ಸಿಟಿಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕ್‌, ಬೆಂಗಳೂರು ಶಾಖೆಯನ್ನು ಆರಂಭಿಸುವುದರೊಂದಿಗೆ ತನ್ನ ಐದನೇ ಶಾಖೆಯನ್ನು ಭಾರತದಲ್ಲಿ ಹೊಂದಿದಂತಾಗಿದೆ. 1992 ರಲ್ಲಿ ಬ್ಯಾಂಕ್‌ ತನ್ನ ನಾಲ್ಕನೇ ಶಾಖೆಯನ್ನು ಚೆನ್ನೈನಲ್ಲಿ ಪ್ರಾರಂಭಿಸಿತ್ತು .

ಪ್ರಸ್ತುತ, ಕನ್‌ಸ್ಯೂಮರ್‌ ಮತ್ತು ಕಾರ್ಪೊರೇಟ್‌ ಕಾರ್ಡುಗಳು, ಟ್ರಾವೆಲ್ಲರ್‌ ಚೆಕ್‌ಗಳು, ಬಿಜಿನೆಸ್‌ ಟ್ರಾವೆಲ್‌ ಸೇವೆಗಳನ್ನು ಬೆಂಗಳೂರಿನಲ್ಲಿನ ಶಾಖೆ ಒದಗಿಸುತ್ತಿದೆ. ಗ್ರಾಹಕರಿಗೆ ಸಾಲ ಸೌಲಭ್ಯವೂ ಇದೆ ಎಂದು ಅಮೆರಿಕನ್‌ ಎಕ್ಸ್‌ಪ್ರೆಸ್‌ ಟ್ರಾವೆಲ್‌ ಲಿಮಿಟೆಡ್‌ನ ಕೆ.ಎಲ್‌.ಮುರಳೀಧರ ಬ್ಯಾಂಕ್‌ ಆರಂಭದ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಬ್ಯಾಂಕ್‌ನ ಬೆಂಗಳೂರು ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂದನ್‌ ನೀಲೇಕಣಿ, ಇನ್ಫೋಸಿಸ್‌ ಕೂಡ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬ್ಯಾಂಕ್‌ನೊಂದಿಗೆ ವಹಿವಾಟು ಹೊಂದಿದ್ದು ಬ್ಯಾಂಕ್‌ ಸೇವೆಗಳ ಬಗ್ಗೆ ತೃಪ್ತಿ ಹೊಂದಿದೆ ಎಂದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X