ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯಲಾರ್‌ ರವಿ ಬೆಂಗಳೂರು ಭೇಟಿ ಮುಂದಕ್ಕೆ : ಕೃಷ್ಣಗಾರುಡಿಯಾ?

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಉಸ್ತುವಾರಿ ವಹಿಸಿಕೊಂಡಿರುವ ದೆಲ್ಲಿ ಧುರೀಣ ವಯಲಾರ್‌ ರವಿ ಏಕಾಏಕಿ ತಮ್ಮ ಬೆಂಗಳೂರು ಭೇಟಿಯನ್ನು ಮುಂದಕ್ಕೆ ಹಾಕಿದ್ದಾರೆ.

ವಿಧಾನ ಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ರವಿ ಅವರು ಜುಲೈ 12 ರಿಂದ ಎರಡು ದಿನಗಳ ಕಾಲ ಬೆಂಗಳೂರು ಭೇಟಿ ಕೈಗೊಳ್ಳಲು ಉದ್ದೇಶಿಸಿದ್ದರು. ಆದರೆ, ಅವರ ಭೇಟಿ ಮುಂದಕ್ಕೆ ಹೋಗಿದ್ದು ಪಕ್ಷದ ಶಾಸಕರು ಸದನಕ್ಕೆ ಬಿಡುವಿರುವ ವಾರಾಂತ್ಯದಲ್ಲಿ ತಂತಮ್ಮ ಕ್ಷೇತ್ರಗಳಿಗೆ ವಾಪಸ್ಸಾಗುವರು ಎಂದು ಕೆಪಿಸಿಸಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಪುಟ ಪುನರ್ರಚನೆಯಿಂದ ಉಂಟಾಗಿರುವ ಅತೃಪ್ತಿಯನ್ನು ಸರಿಪಡಿಸುವ ಉದ್ದೇಶದಿಂದ ವಯಲಾರ್‌ ರವಿ ಬೆಂಗಳೂರು ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಎನ್ನುವ ವರದಿಗಳನ್ನು ಮತ್ತೊಮ್ಮೆ ನಿರಾಕರಿಸಿದ ಅಲ್ಲಂ ವೀರಭದ್ರಪ್ಪ - ಈ ಭೇಟಿ ಪೂರ್ವ ನಿಶ್ಚಿತವಾಗಿತ್ತು . ಕರ್ನಾಟಕದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲು ಯೋಜಿಸಲಾಗಿತ್ತು ಎಂದರು.

ಸಂಸದ ಜಾಫರ್‌ ಷರೀಫ್‌ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವುದಕ್ಕೂ, ಸಂಪುಟ ಪುನರ್ರಚನೆ ಅತೃಪ್ತಿಗೂ ಸಂಬಂಧವಿಲ್ಲ ಎಂದು ಅಲ್ಲಂ ಸ್ಪಷ್ಟಪಡಿಸಿದರು. ಈ ನಡುವೆ, ಮೊದಲ ಬಾರಿ ವಿಧಾನಸಭೆಗೆ ಆರಿಸಿಬಂದಿರುವ ಶಾಸಕರು ತಮಗೂ ಸಂಪುಟದಲ್ಲಿ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಕೃಷ್ಣ ಅವರನ್ನು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಇತರ ರಾಜ್ಯಗಳಲ್ಲಿ ಮೊದಲ ಬಾರಿಗೆ ಶಾಸಕರಾದವರು ಸಚಿವರಾಗಬಹುದಾದರೆ ಅದು ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ ಎನ್ನುವುದು ಅವರ ಪ್ರಶ್ನೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X