ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌: ಮುಂದಿನ 3 ತಿಂಗಳಲ್ಲಿ 1000 ಮಂದಿಗೆ ಉದ್ಯೋಗ

By Staff
|
Google Oneindia Kannada News

ಬೆಂಗಳೂರು : ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ತನ್ನ ಯಶಸ್ಸಿನ ನಾಗಾಲೋಟ ಮುಂದುವರೆಸಿರುವ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ 2002 ನೇ ಇಸವಿಯ ಜುಲೈ- ಸೆಪ್ಟಂಬರ್‌ ತ್ರೆೃಮಾಸಿಕದಲ್ಲಿ 1000 ಮಂದಿಯನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.

144 ಮಂದಿ ಎರವಲು ಸೇವೆ ಸೇರಿದಂತೆ 772 ಮಂದಿ ಏಪ್ರಿಲ್‌-ಜೂನ್‌ ತ್ರೆೃಮಾಸಿಕದಲ್ಲಿ ಇನ್ಫೋಸಿಸ್‌ ಬಳಗಕ್ಕೆ ಸೇರ್ಪಡೆಯಾಗಿದ್ದು , ಜೂನ್‌ 30 ಕ್ಕೆ ಕಂಪನಿಯ ಒಟ್ಟು ನೌಕರರ ಸಂಖ್ಯೆ 11,304 ಆಗಿದೆ ಎಂದು ಇನ್ಫೋಸಿಸ್‌ನ ಹೆಡ್‌ ಕಸ್ಟಮರ್‌ ಡೆಲಿವರಿ, ಡಿ.ಶಿಬುಲಾಲ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜುಲೈ 1 ರಿಂದ ವೈಯಕ್ತಿಕ ಸಾಧನೆಗೆ ಪ್ರಾಧಾನ್ಯತೆ ನೀಡುವ ನೀತಿಯನ್ನು ಇನ್ಫೋಸಿಸ್‌ ಅನುಸರಿಸುತ್ತಿದೆ. ಉತ್ತಮ ಸಾಧನೆ ತೋರಿದವರಿಗೆ ಉತ್ತಮ ಪ್ರೋತ್ಸಾಹವೂ ದೊರೆಯಲಿದೆ ಎಂದು ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಕೆ.ದಿನೇಶ್‌ ತಿಳಿಸಿದರು.

ಸೆಪ್ಟಂಬರ್‌ 11 ರ ನಂತರ ಜಾಗತಿಕ ವಿತ್ತ ಕ್ಷೇತ್ರದಲ್ಲಿ ಉಂಟಾದ ಅಲ್ಲಕಲ್ಲೋಲ ಇನ್ಫೋಸಿಸ್‌ ಕಂಪನಿಯನ್ನೂ ಬಾಧಿಸಿದ್ದು , ಕೆಲಕಾಲ ಕಂಪನಿಯಲ್ಲಿ ಹೊಸ ನೇಮಕಾತಿಗಳು ಸ್ಥಗಿತಗೊಂಡಿದ್ದವು. ಆದರೆ, ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ತಮ ಸಾಧನೆ ಮುಂದುವರಿದಂತೆ ಇನ್ಫೋಸಿಸ್‌ ಹೊಸ ನೇಮಕಾತಿಗಳನ್ನು ಪ್ರಾರಂಭಿಸಿದೆ.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X