ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದ ವಿರುದ್ಧ ಈಜಿಯೂ ಇನ್ಫೋಸಿಸ್‌ಗೆ 216 ಕೋಟಿ ಲಾಭ

By Staff
|
Google Oneindia Kannada News

ಬೆಂಗಳೂರು : ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್‌ ಕಂಪನಿ ಇನ್ಫೋಸಿಸ್‌ ಲಿಮಿಟೆಡ್‌ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ 216 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

ಕಂಪನಿಯ ಸಿಇಓ ನಂದನ್‌ ನೀಲೇಕಣಿ ಬುಧವಾರ ಮಾಧ್ಯಮಗಳಿಗೆ ಏಪ್ರಿಲ್‌ನಿಂದ ಜೂನ್‌ ಮಾಹೆವರೆಗಿನ ವಿತ್ತ ವರದಿ ಕುರಿತು ವಿವ-ರ-ಗ-ಳ-ನ್ನು ನೀಡಿದರು. ನಿವ್ವಳ ಲಾಭದಲ್ಲಿ 14.11 ಪ್ರತಿಶತ ಹೆಚ್ಚಳ ಕಂಡು ಬಂದಿದ್ದು, ಒಟ್ಟು ವಹಿವಾಟಿನಲ್ಲಿ ಶೇ.24.83ರಷ್ಟು ಏರಿಕೆಯಾಗಿದೆ. ಪ್ರವಾಸೋದ್ಯಮ ಸಲಹೆಗಾರರ ಪ್ರತಿಕೂಲ ಧೋರಣೆಯಿಂದ ನಮ್ಮಲ್ಲಿಗೆ ವಿದೇಶೀ ಗ್ರಾಹಕರು ಬರುವುದು ವಿಳಂಬವಾಗುತ್ತಿದೆ. ಪ್ರವಾಹದ ವಿರುದ್ಧ ಈಜುತ್ತಿರುವ ಈ ಹೊತ್ತಲ್ಲೂ ಕಂಪನಿ ಸಾಕಷ್ಟು ವಹಿವಾಟು ನಡೆಸುತ್ತಿರುವುದು ಅದರ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.

ವಿತ್ತ ವರದಿ ಹೊರ ಬಿದ್ದ ನಂತರ ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಇನ್ಫೋಸಿಸ್‌ ಷೇರುಗಳ ಮೌಲ್ಯ 1.1. ಪ್ರತಿಶತದಷ್ಟು ತೇಜಿಯಾಯಿತು.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X