ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯುವ ನೀರಿನ ಫ್ಲೋರಿನ್‌ ಸೋಸಲು ರಾಜ್ಯದಲ್ಲಿ 100 ಘಟಕ

By Staff
|
Google Oneindia Kannada News

ಬೆಂಗಳೂರು : ನೀರಿನ ಹೆಚ್ಚು ಫ್ಲೋರಿನ್‌ ಪ್ರಮಾಣ ತೆಗೆಯಲು ಏನು ಮಾಡೋದು?
ಸಂಯುಕ್ತ ಜನತಾ ದಳದ ಕೋಲಾರ ನಾಯಕರಾದ ಕೆ.ಶ್ರೀನಿವಾಸ್‌ ಮತ್ತು ಸಿ.ಭೈರೇಗೌಡ ವಿಧಾನಸಭೆಯಲ್ಲಿ ಬುಧವಾರ ಎಸೆದ ಈ ಪ್ರಶ್ನೆಗೆ ನೀರು ಪೂರೈಕೆ ಸಚಿವ ಕೆ.ಬಿ.ಕೋಳಿವಾಡ್‌ ಕೊಟ್ಟ ಉತ್ತರ- ‘ನೀರಿನ ಫ್ಲೋರಿನ್‌ ಹೀರುವ 100 ಘಟಕಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ಪೈಕಿ 13 ಕೋಲಾರಕ್ಕೆ ಮೀಸಲು’.

ರಾಜ್ಯದಲ್ಲಿ 56 ಸಾವಿರದ 800 ಹಳ್ಳಿಗಳಿವೆ. ಇವುಗಳಲ್ಲಿ 21 ಸಾವಿರ ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅದರಲ್ಲೂ ಕೋಲಾರ ಜಿಲ್ಲೆಯ 253 ಹಳ್ಳಿಗರು ಕುಡಿಯುವ ನೀರಿನಲ್ಲಿ ಫ್ಲೋರಿನ್‌ ಪ್ರಮಾಣ ಅಧಿಕವಾಗಿದೆ. ನೀರಾವರಿಗಾಗಿ ಮೀಸಲಿರುವ 12 ಟ್ಯಾಂಕುಗಳ ನೀರನ್ನು ಕುಡಿಯಲು ಬಿಡಬೇಕೆಂದು ಸರ್ಕಾರ ಯೋಚಿಸಿತ್ತು. ಆದರೆ ಹಾಗೆ ಮಾಡಿದರೆ ಪ್ರತಿಭಟನೆ ನಡೆಸುವುದಾಗಿ ರೈತರು ಬೆದರಿಕೆ ಹಾಕಿದರು. ಆ ಕಾರಣಕ್ಕೇ ಆ ಯೋಜನೆಯ ನಿರ್ಧಾರವನ್ನು ಕೈಬಿಡಬೇಕಾಯಿತು ಎಂದು ಕೋಳಿವಾಡ್‌ ಹೇಳಿದರು.

ಪೀಯೂಸಿ, ಡಿಗ್ರಿಗೂ ಪ್ರವೇಶ ಪರೀಕ್ಷೆ : ದೇಣಿಗೆ ಪಿಡುಗನ್ನು ಮಟ್ಟ ಹಾಕಲು ಪೀಯುಸಿ ಮತ್ತು ಡಿಗ್ರಿ ಕಾಲೇಜುಗಳ ಪ್ರವೇಶಕ್ಕೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಪರಮೇಶ್ವರ, ಬಿಜೆಪಿಯ ಅರಗ ಜ್ಞಾನೇಂದ್ರ ಅವರ ಪ್ರಶ್ನೆಗೆ ಉತ್ತರಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X