ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಧಾರಣೆ ಏರುಮುಖ : ಬೆಳೆಗಾರರ ಮೊಗದಲ್ಲಿ ನಗು

By Staff
|
Google Oneindia Kannada News

ಶಿವಮೊಗ್ಗ : ಬೆಲೆಕುಸಿತದಿಂದ ನೆಲಕಚ್ಚಿದ ಅಡಿಕೆ ಧಾರಣೆ ಈಗ ಮೇಲ್ಮುಖವಾಗಿದೆ. ಅಡಿಕೆ ಮಾರುಕಟ್ಟೆಯ ಹಿಂದೆ ಏನೇನು ನಡೆಯುತ್ತಿದೆ ಎಂಬ ಬಗ್ಗೆ ರೈತರು ಆಶ್ಚರ್ಯಚಕಿತರಾಗಿದ್ದರೂ ಅಡಿಕೆ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಬೆಳೆಗಾರರ ಮುಖದಲ್ಲಿ ಭರವಸೆ ಮೂಡಿದೆ.

ಸೋಮವಾರ ಶಿವಮೊಗ್ಗ ಅಡಿಕೆ ಮಾರುಕಟ್ಟೆ ಆಶಾದಾಯಕವಾಗಿ ವಾರದ ವಹಿವಾಟನ್ನು ಆರಂಭಿಸಿತು. ಕಳೆದ ವಾರವೇ ಅಡಿಕೆ ಬೆಲೆಯಲ್ಲಿ ಸಣ್ಣ ಮಟ್ಟದ ಚೇತರಿಕೆ ಕಂಡು ಬಂದಿದ್ದರೂ ಅಡಿಕೆ ರೈತರಿಗೆ ಈ ಬೆಲೆ ಏರಿಕೆಯಿಂದ ಅಂತಹ ಸಂತೋಷವಾಗಿರಲಿಲ್ಲ. ಮತ್ತೆ ಧಾರಣೆ ಕುಸಿಯಬಹುದು ಎಂಬ ನಿರೀಕ್ಷೆ ಸುಳ್ಳಾಗಿದ್ದು ಈ ವಾರವೂ ಅಡಿಕೆ ಧಾರಣೆ ಏರುಮುಖವಾಗಿರುವುದು ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.

ಕಳೆದ ವಾರಕ್ಕಿಂತ ಈ ವಾರ ಅಪಿ ಅಡಿಕೆ ಹೊರತು ಪಡಿಸಿ ಉಳಿದ ನಾಲ್ಕು ಮಾದರಿಯ ಅಡಿಕೆಯ ಧಾರಣೆಯಲ್ಲಿ ಹೆಚ್ಚಳವಾಗಿದೆ. ಸರಕು ಹಾಗೂ ಗೊರಬಲು ಅಡಿಕೆ ಸುಮಾರು 400 ರೂಪಾಯಿಯಷ್ಟು ಹೆಚ್ಚಾಗಿದ್ದರೆ ಬೆಟ್ಟೆ ಅಡಿಕೆ ಧಾರಣೆ 500 ರೂಪಾಯಿ ಹಾಗೂ ಇಡಿ ಧಾರಣೆ 300 ರೂಪಾಯಿಯಷ್ಟು ಹೆಚ್ಚಳವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X