• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್‌ಜಿಇಎಫ್‌ : ಕರೆಯುವ ಹಸು ಹುಬ್ಬಳ್ಳಿ ಘಟಕ ಮುಚ್ಚೋದ್ಯಾಕೆ?

By Staff
|

ಹುಬ್ಬಳ್ಳಿ : ಒಂದೇ ಕಂಪನಿಯ ಎರಡು ಘಟಕಗಳು. ಒಂದು ಬೆಂಗಳೂರಲ್ಲಿ. ಇನ್ನೊಂದು ಅವಳಿ ನಗರದಲ್ಲಿ. ಬೆಂಗಳೂರಿನ ಘಟಕ ಲಾಸೋ ಲಾಸು. ಅವಳಿ ನಗರದ ಘಟಕದಲ್ಲಿ ಝಣಝಣ ಲಾಭ. ‘ಬೆಂಗ ೂ್ಳರಿನ ಘಟಕ ಲಾಸು ಅಂತ ಸರ್ಕಾರ ನಮ್ಮ ಫ್ಯಾಕ್ಟರೀನೂ ಮುಚ್ಚಾಕ ಹೊಂಟದ. ಇದು ಸರಿಯಿಲ್ಲಪ್ಪಾ’ ಅಂತಿದಾರೆ ಅವಳಿ ನಗರದ ಕೆಲಸಗಾರರು.

ಇದು ಎನ್‌ಜಿಇಎಫ್‌ ಕೈಗಾರಿಕೆಯ ವ್ಯಥೆಯ ಕತೆ. ಮಹಾದೇವ್‌ ಜವಳಿ ಮಿಲ್ಲಿನ ನಂತರ ಸರ್ಕಾರ ಬಾಗಿಲು ಮುಚ್ಚಲು ಸಿದ್ಧವಾಗಿರುವ ದೊಡ್ಡ ಕಂಪನಿಯಿದು. ಒಂದು ಘಟಕ ಲಾಸು ಅಂತ ಹೇಳಿ ಲಾಭ ಮಾಡುತ್ತಿರುವ ಘಟಕವನ್ನೂ ಮುಚ್ಚುವುದು ಸರಿಯೇ? ಸಚಿವ ಸಂಪುಟ ಈ ಕುರಿತು ಚರ್ಚೆ ನಡೆಸಿದೆಯೇ? ಈವರೆಗೆ ಕಷ್ಟ ಪಟ್ಟು ಕಂಪನಿ ಬೆಳೆಸಿದ ಉತ್ತರ ಕರ್ನಾಟಕದ ನೌಕರರ ಗತಿಯೇನು?

ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡದೆಯೇ ಹಠಾತ್ತನೆ ಬಾಗಿಲು ಮುಚ್ಚುವ ನಿರ್ಧಾರ ಕೈಗೊಂಡಿರುವುದು ಅವಳಿ ನಗರದ ಎನ್‌ಜಿಇಎಫ್‌ ಇಲೆಕ್ಟ್ರಿಕ್‌ ಕಾರ್ಖಾನೆ ಉದ್ಯೋಗಿಗಳಿಗೆ ದೊಡ್ಡ ಶಾಕ್‌. ಅದಕ್ಕೆ ಕಾರಣವೂ ಇದೆ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಘಟಕ ಲುಕಸಾನು ಅನುಭವಿಸುತ್ತಿದ್ದರೆ, ಅವಳಿ ನಗರದ ಇಲೆಕ್ಟ್ರಿಕ್‌ ಕಾರ್ಖಾನೆ ಪ್ರತಿ ವರ್ಷ ಕಡಿಮೆಯೆಂದರೂ 1 ಕೋಟಿ ರುಪಾಯಿ ಲಾಭ ಮಾಡುತ್ತಿದೆ. 1984ರಲ್ಲಿ ಶುರುವಾದ ಈ ಘಟಕದ ಮೇಲೆ ಆಗ ಹೂಡಿದ್ದ ಬಂಡವಾಳ ಕೇವಲ 50 ಲಕ್ಷ ರುಪಾಯಿ. ನೌಕರರ ದಕ್ಷತೆಯ ಕಾರಣ ಇವತ್ತು ನಿವ್ವಳ ವಹಿವಾಟು 15 ಕೋಟಿ ರುಪಾಯಿ ಇದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಅಳವಡಿಸುವ ಇಲೆಕ್ಟ್ರಿಕ್‌ ಮೋಟಾರುಗಳನ್ನು ಈ ಘಟಕ ತಯಾರಿಸುತ್ತಿದೆ.

ಈ ಹಿಂದೆಯೇ ಎನ್‌ಜಿಇಎಫ್‌ ಮುಚ್ಚುವ ಸುದ್ದಿ ಸರ್ಕಾರದ ಪಡಸಾಲೆಯಿಂದ ಬಿದ್ದಾಗ, ನೌಕರರು ಧರಣಿ ಕೂತಿದ್ದರು. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಜಲಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌, ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಮತ್ತು ಮಾಜಿ ಸಚಿವ ಎ.ಎಂ.ಹಿಂಡಸಗೇರಿ- ಇವರೆಲ್ಲರಿಗೂ ಘಟಕದ ವಹಿವಾಟಿನ ವಿವರ ಒಪ್ಪಿಸಲಾಗಿತ್ತು. ಘಟಕಗಳನ್ನು ವಿಭಜಿಸಿ, ಲಾಭ ಮಾಡುತ್ತಿರುವ ಅವಳಿ ನಗರದ ಘಟಕವನ್ನು ಮುಚ್ಚಬಾರದು ಎಂದು ಕೋರಲಾಗಿತ್ತು.

ಕರ್ನಾಟಕವಷ್ಟೇ ಅಲ್ಲದೆ ನವ ದೆಹಲಿ, ಮುಂಬಯಿ ಮತ್ತು ಕೊಲ್ಕತಾಗಳಲ್ಲಿ ಎನ್‌ಜಿಇಎಫ್‌ನ ಅವಳಿ ನಗರದ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ. ಬಹು ರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳ ಜೊತೆ ಹೋರಾಡಬೇಕಾದ ಇವತ್ತಿನ ಪರಿಸ್ಥಿತಿಯಲ್ಲೂ ವರ್ಷಕ್ಕೆ ಒಂದು ಕೋಟಿ ಲಾಭ ಮಾಡುವುದು ಸಾಧನೆಯೇ ಸರಿ. ಹೀಗಿದ್ದೂ ಘಟಕಕ್ಕೆ ಬಾಗಿಲು ವಕ್ಷ್ಚಿುುಚಲು ಹೊರಟಿರುವ ಸರ್ಕಾರದ ನಿಲುವು ಸರಿಯಿಲ್ಲ ಎನ್ನುತ್ತಾರೆ ಎನ್‌ಜಿಇಎಫ್‌ ನೌಕರರ ಒಕ್ಕೂಟದ ಅಧ್ಯಕ್ಷ ಮಹಾದೇವನ್‌.

ಈಗ ಸರ್ಕಾರ ಈ ನೌಕರರನ್ನು ವಿಆರ್‌ಎಸ್‌ ಯೋಜನೆ ಮೂಲಕ ಮನೆಗೆ ಕಳಿಸುವ ಸಿದ್ಧತೆಯಲ್ಲಿದೆ. ವರ್ಷಗಳ ಕಾಲ ಹರಿಸಿದ ಬೆವರಿಗೆ ಇದೇನಾ ಬೆಲೆ ಎಂದು ಅವಳಿ ನಗರದ ಎನ್‌ಜಿಇಎಫ್‌ ನೌಕರ ಕಣ್ಣೀರಿಡುತ್ತಿದ್ದಾನೆ. ಅವನ ಅಳಲು ನಮ್ಮ ಮುಖ್ಯಮಂತ್ರಿ ಕೃಷ್ಣ ಅವರ ಕಣ್ಣು ತೆರೆಸುತ್ತದಾ?

(ಇನ್ಫೋ ವಾರ್ತೆ)

ವಾರ್ತಾ ಸಂಚಯ

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more