• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಬಿಕಾ ಫೈನಾನ್ಸ್‌ನ ಆರ್ಥಿಕ ಸ್ಥಿತಿ ಚೆನ್ನಾಗಿದೆ -ಸಾಮೆತ್ತಡ್ಕ ಭಟ್‌

By Staff
|

*ಸದಾಶಿವ ಕೆ.

ಪುತ್ತೂರು: ಅಂಬಿಕಾ ನಿಧಿ ಮತ್ತು ಮೂಕಾಂಬಿಕಾ ಫೈನಾನ್ಸ್‌ ಸಂಸ್ಥೆಗಳು ಸುರಕ್ಷಿತವಾಗಿವೆ ಎಂದು ಸಂಸ್ಥೆಗಳ ಅಧ್ಯಕ್ಷ ಸಾಮೆತ್ತಡ್ಕ ಕೆ. ಗೋಪಾಲ ಕೃಷ್ಣ ಭಟ್‌ ಹೇಳಿದ್ದಾರೆ.

ಅವರು ಶನಿವಾರ ನಗರದಲ್ಲಿ ತುರ್ತಾಗಿ ಕರೆದಿದ್ದ ಗ್ರಾಹಕರ ಮತ್ತು ಸದಸ್ಯರ ಸಭೆಯಲ್ಲಿ ಮಾತನಾಡುತ್ತಿದ್ದರು. ಏಪ್ರಿಲ್‌17ರಿಂದ ನಂತರದ ಆರ್ಥಿಕ ಜಗತ್ತಿನ ವಿದ್ಯಮಾನಗಳು ಸಾರ್ವಜನಿಕರಲ್ಲಿ ಖಾಸಗಿ ಆರ್ಥಿಕ ಸಂಸ್ಥೆಗಳಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿವೆ ಎಂದು ಮಣಿಪಾಲ್‌ ಸಮೂಹ ಸಂಸ್ಥೆಗಳ ಹೆಸರನ್ನು ಉಲ್ಲೇಖಿಸದೆ ಗೋಪಾಲಕೃಷ್ಣ ಭಟ್‌ ಹೇಳಿದರು.

1984ರಲ್ಲಿ ಆರಂಭಗೊಂಡ ಮೂಕಾಂಬಿಕಾ ಫೈನಾನ್ಸ್‌ ಮತ್ತು 1989ರಲ್ಲಿ ವ್ಯವಹಾರಕ್ಕಿಳಿದ ಅಂಬಿಕಾ ನಿಧಿ ಯೋಜನೆ ಸುರಕ್ಷಿತವಾಗಿದೆ. 1993-94ರ ಆರ್ಥಿಕ ವರ್ಷದಿಂದ ಸದಸ್ಯರಿಗೆ ಶೇ 25ರವರೆಗೆ ಡಿವಿಡೆಂಟ್‌ ನೀಡುತ್ತಾ ಬಂದಿದೆ. ಸುಗಮ ಆಡಳಿತಕ್ಕೋಸ್ಕರ ಸಂಸ್ಥೆಯ ಶಾಖೆಯನ್ನು ವಿಸ್ತರಿಸಲಾಗಿಲ್ಲ. ಬೆಂಗಳೂರು ಹಾಗೂ ಕರಾವಳಿಯ ಜಿಲ್ಲೆಗಳಲ್ಲಿ ಬ್ಯಾಂಕ್‌ನ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಸದಸ್ಯರನ್ನು ಮತ್ತು ಗ್ರಾಹಕರನ್ನು ವಂಚಿಸುವ ಉದ್ದೇಶ ಸಂಸ್ಥೆಗಿದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು. ಒಂದು ವೇಳೆ ಅಂತಹ ಉದ್ದೇಶವಿದ್ದರೆ ಇಂದಿನ ಸಭೆಯನ್ನು ಏರ್ಪಡಿಸುವ ಅಗತ್ಯವೇ ಇರಲಿಲ್ಲ ಎಂದು ಭಟ್‌ ವದಂತಿಗಳನ್ನು ನಿರಾಕರಿಸಿದರು.

ಸಂಸ್ಥೆಯ ಆರ್ಥಿಕ ವಿವರಗಳನ್ನೂ ಸಭೆಯಲ್ಲಿ ಮಂಡಿಸಲಾಯಿತು. ಸಂಸ್ಥೆಯಲ್ಲಿ 35 ಸಾವಿರ ಸದಸ್ಯರಿದ್ದಾರೆ. ಅಂಬಿಕಾ ನಿಧಿ 16 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. 57 ಲಕ್ಷ ರೂಪಾಯಿ ಭಾರತೀಯ ರಿಸರ್ವ್‌ ಬ್ಯಾಂಕಿನ ನಿಯಮದ ಅನ್ವಯ ಠೇವಣಿ ಇಡಲಾಗಿದೆ. 30 ಲಕ್ಷ ರೂಪಾಯಿ ನೋ ಪೇಮೆಂಟ್‌ ಸ್ಥಿತಿಯಲ್ಲಿದೆ.

ಮೂಕಾಂಬಿಕಾ ಫೈನಾನ್ಸ್‌ 8.9 ಕೋಟಿ ರೂಪಾಯಿ ಠೇವಣಿ ಇದ್ದು, 1 ಕೋಟಿ ರೂಪಾಯಿ ಸಾಲ ನೀಡಲಾಗಿದೆ. 107 ಲಕ್ಷ ರೂಪಾಯಿ ಠೇವಣಿ ಇರಿಸಲಾಗಿದೆ. ಈವರೆಗೆ ಠೇವಣಿದಾರರು ಅವಧಿ ಮುಗಿದ ಠೇವಣಿಗಳನ್ನು ಮನವಿಯ ಮೇರೆಗೆ ಠೇವಣಿ ಮುಂದುವರೆಸಿಕೊಂಡು ಹೋಗಿದ್ದಾರೆ.

ವಿಟ್ಲ ಶಾಖೆಯ ಬಗ್ಗೆ ದೂರು - ವಿಟ್ಲ ಶಾಖೆಯಲ್ಲಿ ಠೇವಣಿ ದಾರರ ಹಣ ಸರಿಯಾದ ಸಮಯದಲ್ಲಿ ಹಿಂತಿರುಗಿಸಲಾಗುತ್ತಿಲ್ಲ ಮತ್ತು ಪಿಗ್ಮಿ ಸಂಗ್ರಹಣೆ ಬಗ್ಗೆ ಸಂಶಯ ಬಂದಿದೆ ಎಂದು ವಿಟ್ಲ ಶಾಖೆಯಲ್ಲಿ ವ್ಯವಹರಿಸುತ್ತಿರುವ ಗ್ರಾಹಕರು ಆಕ್ಷೇಪಿಸಿದರು. ಈ ಆಪಾದನೆಗಳನ್ನು ನಿರಾಕರಿಸಿದ ನಿರ್ದೇಶಕ ಸತ್ಯ ಶಂಕರ ಭಟ್‌ ಪಿಗ್ಮಿ ಸಂಗ್ರಹಕಾರ ಸ್ವಲ್ಪ ದಿನಗಳ ಕಾಲ ರಜೆಯಲ್ಲಿ ಇದ್ದುದರಿಂದ ಹೀಗಾಗಿದೆ ಎಂದರು.

ಠೇವಣಿಗಳನ್ನು ಹಿಂತೆಗೆಯದೆ ಸಂಸ್ಥೆಯ ಉಳಿವಿಗೆ ನೆರವಾಗಬೇಕೆಂದು ಗೋಪಾಲ ಕಷ್ಣ ಭಟ್‌ ಸದಸ್ಯರ ಬಳಿ ಮನವಿ ಮಾಡಿಕೊಂಡರು. ಅಲ್ಲದೆ ಸಾಲ ವಸೂಲಿಯ ಕ್ರಮವನ್ನು ಕಟ್ಟು ನಿಟ್ಟಾಗಿ ಅನುಸರಿಲಾಗುತ್ತಿದೆ ಎಂದೂ ಸದಸ್ಯರಿಗೆ ಭರವಸೆ ನೀಡಿದರು.

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more