ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಗುಂಡು ಪ್ರೇಮ :1100 ಹೊಸ ಮದ್ಯದಂಗಡಿಗಳಿಗೆ ಲೈಸೆನ್ಸ್‌

By Staff
|
Google Oneindia Kannada News

ಬೆಂಗಳೂರು : 1100 ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಶನಿವಾರದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ಈ ಮಹತ್ವದ ನಿರ್ಣಯವನ್ನು ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದರು. ಇಷ್ಟೊಂದು ಹೆಂಡದಂಗಡಿಗಳಿಗೆ ಪರವಾನಿಗೆ ಯಾಕೆ ಅಂತ ಕೇಳಿದರೆ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಂತ ಉತ್ತರ ಕೊಟ್ಟರು ಕಾಗೋಡು.

ಈ ಗುಂಡು ಮಾರಾಟ ಪ್ರೋತ್ಸಾಹದ ವಿವರಗಳು ಇಂತಿವೆ...

  • ನಗರ ಪ್ರದೇಶಗಳಲ್ಲಿ 157 ವೈನ್‌ ಶಾಪ್‌ಗಳನ್ನು ತೆರೆಯಲು ಅನುಮತಿ.
  • ಹಳ್ಳಿಗಾಡಿನಲ್ಲಿ 332 ಹೊಸ ಅಂಗಡಿಗಳಿಗೆ ಪರವಾನಿಗೆ.
  • ರಾಜ್ಯದಲ್ಲಿ ಒಟ್ಟು 618 ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು 489 ಪರವಾನಿಗೆಗಳು.
  • ನಗರದಲ್ಲಿ 295 ಮತ್ತು ಹಳ್ಳಿಗಾಡಿನಲ್ಲಿ 323 ಬಾರ್‌ಗಳಿಗೆ ಅನುಮತಿ.
ಕೆಲವು ವರ್ಷಗಳಿಂದ ಮದ್ಯದಂಗಡಿ ಸ್ಥಾಪನೆಗೆ ಪರವಾನಿಗೆಗಳನ್ನು ಕೊಡುವುದನ್ನೇ ಸರ್ಕಾರ ನಿಲ್ಲಿಸಿತ್ತು. ದಿನಸಿ ಅಂಗಡಿಗಳಲ್ಲೂ ಬೀರು ಮಾರಾಟಕ್ಕೆ ಅನುಮತಿ ಕೊಟ್ಟ ಮುಖ್ಯಮಂತ್ರಿ ಕೃಷ್ಣ ಸಾಕಷ್ಟು ಟೀಕಾ ಪ್ರಹಾರದ ಕಾರಣ ತಮ್ಮ ನಿರ್ಧಾರವನ್ನು ವಾಪ್ಸಸು ಪಡೆಯುವಂತಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ವೈನಾಗಿರುವ ವೈನು ಶಾಪುಗಳಿಗೆ ನಮ್ಮಲ್ಲಿ ಕೊರೆಯಿದೆಯಾ, ಯಾಕೆ ಈ ಪಾಟಿ ಅನುಮತಿ ಎಂಬುದು ನಾಗರಿಕರ ಪ್ರಶ್ನೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X