• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಗೀರ್‌ ತಲೆ ನೇವರಿಸಿದ ಕೃಷ್ಣ, ರಾಜೀನಾಮೆ ಬೆದರಿಕೆ ಹಿಂದಕ್ಕೆ

By Staff
|

ಬೆಂಗಳೂರು : ಶುಕ್ರವಾರ ಹಲ್ಲು ಮಸೆಯುತ್ತಾ ಮುಖ್ಯಮಂತ್ರಿ ಕೃಷ್ಣ ಜೊತೆ ಮಾತಿಗೆ ಹೊರಟ ಸಗೀರ್‌ ಅಹಮದ್‌ ವಾಪ್ಸಸಾದಾಗ ಮೊಗದಲ್ಲಿ ಮಂದಹಾಸದ ಸಣ್ಣ ಗೆರೆಯಿತ್ತು. ಈ ಮೂಲಕ ಭಿನ್ನಮತೀಯರ ದನಿಯ ತಣ್ಣಗಾಗಿಸುವ ಕೃಷ್ಣ ಚಾಕಚಕ್ಯತೆ ವ್ಯಕ್ತವಾಗಿದೆ.

ಖಮರುಲ್‌ ಇಸ್ಲಾಂ ಅಂಥಾ ಜೂನಿಯರ್‌ಗೆ ಕೊಟ್ಟಿದ್ದ ವಸತಿ ಖಾತೆಯನ್ನು ಕೊಟ್ಟು, ತಮ್ಮನ್ನು ಮೂರು ಮೆಟ್ಟಿಲು ಕೆಳಗಿಸಿದಂತಾಗಿದೆ ಎಂದು ಸಗೀರ್‌ ಕೆಂಡಾಮಂಡಲಾಗಿದ್ದರು. ಸಾರಿಗೆ ಖಾತೆ ಕಸಿದುಕೊಂಡಿದ್ದು ಯಾಕೆ ಎಂಬ ಪ್ರಶ್ನೆಯಾಂದಿಗೆ ಮಾತಿಗಿಳಿದ ಸಗೀರ್‌ ಅವರ ತಲೆಯನ್ನು ಕೃಷ್ಣ ಚೆನ್ನಾಗಿ ನೇವರಿಸಿ ಕಳುಹಿಸಿದ್ದಾರೆ ಎಂಬುದೇ ವಿಧಾನಸೌಧದ ಮೊಗಸಾಲೆಯ ಪ್ರತಿಧ್ವನಿ.

ಕೃಷ್ಣ ಮತ್ತು ಸಗೀರ್‌ ನಡುವೆ ಒಂದು ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ. ಸಾರಿಗೆ ಇಲಾಖೆಯ ಕಮಿಷನರ್‌ ಉದ್ಧಟತನದಿಂದ ವರ್ತಿಸಿದ್ದನ್ನು ಸಗೀರ್‌ ಹೇಳಿಕೊಂಡಿದ್ದಾರೆ. ರಾಜೀನಾಮೆ ಕೊಡುವ ತಮ್ಮ ಇರಾದೆಯನ್ನೂ ವ್ಯಕ್ತಪಡಿಸಿದ್ದಾರೆ ಎಂದು ಆಪ್ತ ವಲಯ ಹೇಳತ್ತಿದೆ.

ಸಗೀರ್‌ ತಲೆಯನ್ನು ಮುಖ್ಯಮಂತ್ರಿ ಕೃಷ್ಣ ನೇವರಿಸಿರುವುದು ಹೀಗೆ-
ಸಾರಿಗೆ ಸಚಿವರಾಗಿ ನೀವು ಕೆಲಸ ಮಾಡಲಿಲ್ಲ ಅಂತ ವಸತಿ ಖಾತೆಗೆ ವರ್ಗಾಯಿಸಿಲ್ಲ. ಗೌಹಾತಿಯಲ್ಲಿ ನಡೆದ ಕಾಂಗ್ರೆಸ್‌ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕದ ವಸತಿ ಯೋಜನೆಗಳನ್ನು ಕೇಳಿ ಸೋನಿಯಾ ಗಾಂಧಿ ಭೇಷ್‌ ಅಂದಿದ್ದರು. ನಿರಾಶ್ರಿತರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಶಾಸಕರೊಡನೆ ಸಮನ್ವಯ ಸಾಧಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಅದಕ್ಕೆ ಬೇಕಾದಂತಹ ಜಾಣ್ಮೆ, ಅನುಭವ ತಮ್ಮಲ್ಲಿರುವುದರಿಂದ ವಸತಿ ಖಾತೆಯ ಜವಾಬ್ದಾರಿ ವಹಿಸಿದ್ದೇನೆ. ಅನ್ಯಥಾ ಭಾವಿಸಬೇಡಿ.

ಎಂಬಲ್ಲಿಗೆ ಸಗೀರ್‌ ರಾಜೀನಾಮೆ ಕೊಡ್ತಾರಂತೆ ಅನ್ನುವ ವಿಷಯಕ್ಕೆ ತೆರೆ ಬಿದ್ದಂತಾಗಿದೆ ಎನ್ನುತ್ತಿದೆ ಕಾಂಗ್ರೆಸ್‌ ಬಳಗ. ಆದರೆ, ಈ ಬಗ್ಗೆ ಸಗೀರ್‌ ಏನೂ ಹೇಳಲಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X