ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರಿ ಜಗನ್ನಾಥ ದೇವಾಲಯಕ್ಕೆ ಜಗತ್ತಿನಲ್ಲಿಯೇ ಅತಿದೊಡ್ಡ ಬೀಗ!

By Staff
|
Google Oneindia Kannada News

ಪುರಿ: ಶತಮಾನದಷ್ಟು ಹಳೆಯದಾದ ಕೊಲ್ಕೊತ್ತಾದ ಹೆಸರಾಂತ ಬೀಗ ತಯಾರಿಕಾ ಕಂಪೆನಿ ‘ಟ್ರಸ್ಟಿ’ ಜಗತ್ತಿನಲ್ಲಿಯೇ ಅತಿ ದೊಡ್ಡದೆನಿಸಿದ 50 ಕಿಲೋ ಭಾರದ ಬೀಗವನ್ನು ತಯಾರಿಸಿ ಪುರಿ ಜಗನ್ನಾಥ ದೇವಾಲಯಕ್ಕೆ ನೀಡಿದೆ.

ಎರಡು ಅಡಿ ಎತ್ತರ, ಒಂದು ಅಡಿ ಅಗಲವಿರುವ ಈ ಬೀಗಕ್ಕೆ 14. 5 ಇಂಚುಗಳ ಮೂರು ಕಂಚಿನ ಬೀಗದ ಕೈಗಳಿವೆ. ಈ ಹಿಂದೆ ದೆಹಲಿಯ ವಿಶ್ವ ವ್ಯಾಪಾರ ಮಳಿಗೆಯ ಪೆವಿಲಿಯನ್‌ ಗೇಟ್‌ಗೆ 80 ಕೆ ಜಿ ಭಾರದ ಬೀಗವನ್ನು 1961ರಲ್ಲಿ ಇದೇ ಟ್ರಸ್ಟ್‌ ತಯಾರಿಸಿತ್ತು.

ಈಗ ಜಗನ್ನಾಥ ದೇವಾಲಯದ ಒಂದು ಟನ್‌ ಭಾರವಿರುವ ಗೇಟ್‌ಗೆ ಈ 50 ಕೆಜಿ ಭಾರದ ಈ ಬೀಗವನ್ನು ತಯಾರಿಸಲಾಗಿದೆ. ಬೀಗ ತಯಾರಿಸಿದ ಟ್ರಸ್ಟ್‌ ಜಗನ್ನಾಥ ದೇವಳ ಆಡಳಿತ ಮಂಡಳಿಯಿಂದ ಚಿಕ್ಕಾಸು ತೆಗೆದುಕೊಂಡಿಲ್ಲ. ಟ್ರಸ್ಟ್‌ನ ಮಾಲಕ ಜೆ. ಪಿ. ಸಿಂಗ್‌ ಅವರದು ವೈಷ್ಣವ ಕುಟುಂಬ. ಜಗನ್ನಾಥ ದೇವರ ಇಚ್ಛೆಯ ಮೇರೆಗೇ ಈ ಬೀಗವನ್ನು ತಯಾರಿಸಿರುವುದಾಗಿ ಜೆ. ಪಿ. ಸಿಂಗ್‌ ಹೇಳಿದ್ದಾರೆ. ದೇವರಿಗೆ ಸೇವೆಯ ರೂಪದಲ್ಲಿ ಬೀಗವನ್ನು ಅರ್ಪಿಸಲಾಗಿದೆ.

ಒಂದು ಟನ್‌ ಭಾರದ ಗೇಟು ಹಾಗೂ ಈ ಹೊಸ ಬೀಗ ಭಕ್ತರು ಸಲ್ಲಿಸಿದ ಅಮೂಲ್ಯ ಕಾಣಿಕೆಗಳನ್ನು ಕಾಯುತ್ತದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X