ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗ, ಆಯುರ್ವೇದ, ಹರ್ಬಲ್‌.. ಮಾರುಕಟ್ಟೆಯಲ್ಲಿ ಏನೇನಿದೆ?

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ಎಷ್ಟೊಂದು ನಮೂನೆಯ ಟೂಥ್‌ಪೇಸ್ಟ್‌ಗಳಿವೆ !
ಆದರೂ ಹೊಸ ಬ್ರಾಂಡ್‌ನ ಟೂಥ್‌ಪೇಸ್ಟ್‌ ಮಾರುಕಟ್ಟೆಗೆ ಧಾಂಗುಡಿಯಿಡುತ್ತದೆ. ತೀರಾ ಹೊಸ ನಮೂನೆಯ ಜಾಹೀರಾತಿನಿಂದ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತದೆ. ಜೆಲ್‌, ತ್ರಿಬಲ್‌ ಫ್ರೆಶ್‌, ಅಲ್ಟ್ರಾ... ಅಲ್ಟ್ರಾಕ್ಕಿಂತ ಮೈಕ್ರೋ ಆಗಿ ಮುಂದುವರೆದು ಹೊಸದೊಂದು ಮಾಲು ಮಾರುಕಟ್ಟೆಗೆ ಬರುವುದಿಲ್ಲ ಎಂದುಕೊಂಡಿರಾ.. ಬಂತು ನೋಡಿ ವೆಜಿಟೆಬಲ್‌ ಟೂಥ್‌ ಪೇಸ್ಟ್‌...

ಇನ್ನೊಂದು ತಂತ್ರವಿದೆ. ‘ಇದು ಹರ್ಬಲ್‌ ಕೇರ್‌’... ಯೋಗ, ಆಯುರ್ವೇದ, ಹರ್ಬಲ್‌ ಎಂಬ ಪದಗಳಿಗೆ ಮಾರುಕಟ್ಟೆಯಲ್ಲಿ ದೀಪಕ್ಕೆ ಮುಗಿಬಿದ್ದ ನೊಣಗಳಂತೆ ಜನ ಮುಗಿ ಬೀಳುತ್ತಾರೆ. ಚ್ಯವನ ಪ್ರಾಶ ಲೇಹ ನೆಲ್ಲಿಕಾಯಿಯಿಂದ ತಯಾರಿಸಿದ್ದು ಎಂಬುದು ನಂಬಿಕೆ. ಆದರೆ ದೇಶದಲ್ಲಿ ಉತ್ಪಾದನೆಯಾಗುವ ಚ್ಯವನ ಪ್ರಾಶಕ್ಕೆ ಬೇಕಾದಷ್ಟು ನೆಲ್ಲಿಕಾಯಿ ಒದಗಿಸಲು ನಮ್ಮಲ್ಲಿ ನೆಲ್ಲಿ ಮರಗಳೇ ಇಲ್ಲ.

ಮುಂದಿನ ಹೋಳಿ ಹುಣ್ಣಮೆಗೆ ತುಂಬಿಕೊಳ್ಳಲಿದೆ ಹರ್ಬಲ್‌ ಬಣ್ಣದ ಪೌಡರಿನ ರಂಗು. ಇದರಿಂದ ನಿಮ್ಮ ಮುಖಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂಬುದು ತಯಾರಕರ ಅಭಿಪ್ರಾಯ.

ಅರಿಶಿಣ, ಹೂವುಗಳಿಂದ ತಯಾರಿಸಿದ ರಂಗಿನ ಪುಡಿ ಮುಂದಿನ ‘ಹೋಳಿ’ಗೆ ರೆಡಿಯಾಗುತ್ತದೆ. ಲಕ್ನೋದ ರಾಷ್ಟ್ರೀಯ ಸಸ್ಯಶಾಸ್ತ್ರ ಅಧ್ಯಯನ ಕೇಂದ್ರ (ಎನ್‌ಬಿಆರ್‌ಐ) ಈ ರಂಗಿನ ಪುಡಿಯನ್ನು ತಯಾರಿಸಿದೆ. ಮಾರುಕಟ್ಟೆಗೆ ಹೋಗಿ ಬಣ್ಣದ ಪುಡಿಯನ್ನು ಖರೀದಿಸಿ ಅದರ ಹಾನಿಯ ಬಗ್ಗೆ ತಿಳಿಯದೇ ಇರುವವರನ್ನು ರಕ್ಷಿಸಲು ಈ ಹರ್ಬಲ್‌ ರಂಗಿನ ಪುಡಿ ತಯಾರಾಗಿದೆ ಎಂದು ಇಂಡಸ್ಟ್ರಿಯಲ್‌ ಟಾಕ್ಸಿಕಾಲಜಿ ಅಧ್ಯಯನ ಕೇಂದ್ರ ಹೇಳಿದೆ.

ಸಿಂಥೆಟಿಕ್‌ನಿಂದ ತಯಾರಿಸಿದ ಪುಡಿಗಳಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಪ್ರಾಕೃತಿಕವಾಗಿ ದೊರೆಯುವ ಹೂವು ಮತ್ತು ಎಲೆಗಳಿಂದ ಎನ್‌ಬಿಆರ್‌ಐ ರಂಗಿನ ಪುಡಿಯನ್ನು ತಯಾರಿಸಿರುವುದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಪುಡಿಗಳನ್ನು ರಂಗೋಲಿಗೂ ಬಳಸಬಹುದು.

ಎನ್‌ಬಿಆರ್‌ಐ ಕಂಡು ಹಿಡಿದ ತಂತ್ರಜ್ಞಾನವನ್ನು ಖಾಸಗಿ ಕಂಪೆನಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ಹೋಳಿಯ ಮುಂಚಿನ ದಿನ ಹರ್ಬಲ್‌ ರಂಗಿನ ಪುಡಿ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ಎನ್‌ಬಿಆರ್‌ಐನ ವಿಜ್ಞಾನಿಗಳಾದ ವಿಪಿ ಕಪೂರ್‌ ಮತ್ತು ಪಿ. ಪುಷ್ಪಾಂಗದನ್‌ ಹೇಳಿದ್ದಾರೆ.

ಈ ಪುಡಿಗೆ ಕಾಸು ಮಾತ್ರ ಸ್ವಲ್ಪ ಜಾಸ್ತಿ. 50ಕ್ಕೂ ಹೆಚ್ಚು ನಮೂನೆಯ ಬಣ್ಣಗಳನ್ನು ತಯಾರಿಸಬಹುದು. ಆದರೆ ಮಾರಾಟಕ್ಕೆ ಕೇವಲ ಮುಖ್ಯ ನಾಲ್ಕು ರೀತಿಯ ಬಣ್ಣಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಈ ಬಣ್ಣಗಳು ಚರ್ಮಕ್ಕೆ ಅಂಟಿಕೊಂಡರೂ ಸೋಪು ಹಾಕಿ ತೊಳೆದ ತಕ್ಷಣ ಸುಲಭವಾಗಿ ತೊಲಗುತ್ತದೆ.

ಆರಾಮೈನ್‌, ಮಲಖೈಟ್‌ನಂತಹ ರಾಸಾಯನಿಕ ಬಣ್ಣಗಳು ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದರೆ ಎನ್‌ಬಿಆರ್‌ಐ, ಗುಲಾಬಿ ಪಕಳೆಗಳು, ಕೇಸರ, ಎಲೆ ಚಿಗುರುಗಳಿಂದ ಬಣ್ಣ ತಯಾರಿಸುತ್ತದೆ. ಎನ್‌ಬಿಆರ್‌ಐಯ ಈ ಹೊಸ ಉತ್ಪಾದನೆಯ ಬಗ್ಗೆ ಇನ್ನಷ್ಟು ವರದಿ ಬೇಕಿದ್ದಲ್ಲಿ ನೀವು ಪತ್ರಿಸಬಹುದು. ವಿಳಾಸ: National Institute of Science Communication, CSIR, New Delhi 110012.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X