ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಗೋ ಮೂತ್ರ’ ಕ್ಕೆ ಪೇಟೆಂಟ್‌: ನೀನಾರಿಗಾದೆಯಾ ಎಲೆ ಮಾನವ?

By Staff
|
Google Oneindia Kannada News

ನವದೆಹಲಿ : ಗೋಮೂತ್ರದ ಜೈವಿಕ ವಿಜ್ಞಾನ ಉಪಯೋಗ ಮತ್ತು ಅದರ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ ಭಾರತೀಯ ವಿಜ್ಞಾನಿಗಳಿಗೆ ಅಮೆರಿಕದಿಂದ ಪೇಟೆಂಟ್‌ ದೊರಕಿರುವುದಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮುರಳಿ ಮನೋಹರ್‌ ಜೋಶಿ ತಿಳಿಸಿದ್ದಾರೆ.

ಭಾರತೀಯ ಸಾಂಪ್ರದಾಯಿಕ ಬೌದ್ಧಿಕತೆ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನದಿಂದ ಈ ಪೇಟೆಂಟ್‌ನ್ನು ದಕ್ಕಿಸಿಕೊಳ್ಳುವುದು ಸುಲಭವಾಗಿದೆ. ಜೂನ್‌ 25ರಂದು ಭಾರತೀಯ ವಿಜ್ಞಾನಿಗಳಿಗೆ ಈ ಬಗ್ಗೆ ಪೇಟೆಂಟ್‌(ನಂ. 6, 410,059) ಮಂಜೂರಾಗಿದೆ.

ರೋಗ ನಿರೋಧಕ ಮತ್ತು ಭಟ್ಟಿಯಿಳಿಸಿದ ಗೋಮೂತ್ರದಿಂದ ಆ್ಯಂಟಿ ಮೈಕ್ರೋಬಿಯಲ್‌ ಔಷಧ ಸಂಯುಕ್ತ ತಯಾರಿಸಲಾಗಿದೆ. ಇದು ಆ್ಯಂಟಿ ಬಯೋಟಿಕ್‌ ಮತ್ತು ಆ್ಯಂಟಿ ಫಂಗಲ್‌ಏಜೆಂಟ್‌ಗಳ ರೂಪದಲ್ಲಿ ಪರಿಣಾಮ ಬೀರಬಲ್ಲದು. ಈ ಔಷಧ ಸಂಯುಕ್ತದ ಮೇಲೆ ಪೇಟೆಂಟ್‌ ಲಭ್ಯವಾಗಿದೆ.

ಈ ಸಂಶೋಧನೆಯ ಮೂಲಕ ಗೋಮೂತ್ರವನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನಗಳನ್ನು ಭಾರತೀಯ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಇದರಿಂದ ರೋಗಿಯು ಹೆಚ್ಚು ಹೆಚ್ಚು ಆ್ಯಂಟಿಬಯೋಟಿಕ್‌ ಔಷಧಿಗಳನ್ನು ಸೇವಿಸುವುದು ತಪ್ಪುತ್ತದೆ. ಅಲ್ಲದೆ ಇದರ ಸೇವನೆಯಿಂದ ಅಡ್ಡ ಪರಿಣಾಮಗಳೂ ಕಡಿಮೆಯಾಗಿರುವುದರಿಂದ ಚಿಕಿತ್ಸೆಯ ವೆಚ್ಚವನ್ನೂ ಕಡಿಮೆ ಮಾಡುತ್ತದೆ ಎಂದು ಜೋಶಿ ಹೇಳಿದರು.

ಭಾರತದಲ್ಲಿ ಗೋಮೂತ್ರವನ್ನು ಆ್ಯಂಟಿಬಯೋಟಿಕ್‌ ಆಗಿ ಬಳಸುವ ವಿಧಾನ ತುಂಬಾ ಹಳೆಯ ಕಾಲದ್ದು. ಚಿಕಿತ್ಸೆಯ ಗುಣವಿರುವ ಗೋಮೂತ್ರ ಭಾರತೀಯರಿಗೆ ಹೊಸತಲ್ಲ. ಆದರೆ ಇದರ ವೈಜ್ಞಾನಿಕ ಬಳಕೆಯಾಗಿಲ್ಲ ಎಂದು ಜೋಶಿ ವಿಷಾದಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X