ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್‌ ಟೆಲಿಕಾಂ ಸಂಸ್ಥೆಯಿಂದ ಕನ್ನಡ ಎಸ್‌ಎಂಎಸ್‌ ಸೌಲಭ್ಯ

By Staff
|
Google Oneindia Kannada News

ಬೆಂಗಳೂರು: ಮೊಬೈಲ್‌ ದೂರವಾಣಿ ಸೇವಾ ವಲಯದ ಪ್ರಮುಖ ಸಂಸ್ಥೆಯಾದ ಸ್ಪೈಸ್‌ ಟೆಲಿಕಾಂ ಗ್ರಾಹಕರಿಗಾಗಿ ‘ನಮ್ಮ ಕನ್ನಡ ಎಸ್‌ಎಂಎಸ್‌’ ಎಂಬ ಕನ್ನಡ ಎಸ್‌ಎಂಎಸ್‌ ಸೌಲಭ್ಯವನ್ನು ಆರಂಭಿಸಿದೆ.

ಸ್ಪೈಸ್‌ ಗ್ರಾಹಕರು ಈಗ ಕನ್ನಡದಲ್ಲಿ ಸಂದೇಶವನ್ನು ಕಳುಹಿಸುವ ಅವಕಾಶವಿದೆ ಎಂದು ಕಂಪೆನಿಯ ಪ್ರಕಟಣೆ ಮಂಗಳವಾರ ತಿಳಿಸಿದೆ. ಕನ್ನಡದಲ್ಲಿ ಸಂದೇಶ ಕಳುಹಿಸಲು ಇಚ್ಛಿಸುವವರು ಮೊದಲು ಇಂಗ್ಲಿಷ್‌ ಅಕ್ಷರಗಳಲ್ಲಿ ಬರೆದ ಕನ್ನಡ ಸಂದೇಶವನ್ನು ಕಳುಹಿಸಬೇಕು. ನಂತರ ತಮ್ಮ ಮೊಬೈಲ್‌ನಲ್ಲಿ ‘ಮೆಸೇಜ್‌’ನ್ನು ಆಯ್ಕೆಮಾಡಿ ಅಲ್ಲಿ ಫೋನ್‌ ಸಂಖ್ಯೆ ಹಾಗೂ ಸಂದೇಶವನ್ನು ಪ್ರಕಟಿಸಬೇಕು. ಬಳಿಕ 555 ಸಂಖ್ಯೆಗೆ ಸಂದೇಶವನ್ನು ರವಾನಿಸಬೇಕು. ಸಂದೇಶ ತಲುಪಬೇಕಾದವರಿಗೆ ಕನ್ನಡದಲ್ಲೇ ತಲುಪುತ್ತದೆ. ಉದಾ : ‘ AN98440xxxx namma kannada esemes send to 555

ಪ್ರಾದೇಶಿಕ ಮಾರುಕಟ್ಟೆಗೆ ಒತ್ತು ನೀಡುವ ಸ್ಪೈಸ್‌ ಟೆಲಿಕಾಂ ಸಂಸ್ಥೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವತ್ತ ಹೆಚ್ಚು ಗಮನ ಹರಿಸುತ್ತದೆ ಎಂದು ಸಂಸ್ಥೆಯ ಕರ್ನಾಟಕ ವಲಯ ಜನರಲ್‌ ಮ್ಯಾನೇಜರ್‌ ಕನ್ವರ್‌ಬಿರ್‌ ಸಿಂಗ್‌ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X