ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ಸರ್ಜರಿ : ನಫೀಸಾ--ಮಾಲಕರೆಡ್ಡಿ ಬಚಾವು, ಜಯಚಂದ್ರ ಕೆಳಕ್ಕೆ

By Staff
|
Google Oneindia Kannada News

ಬೆಂಗಳೂರು : ಐವರು ಸಚಿವರಿಗೆ ಖೊಕ್‌ ಕೊಟ್ಟು , 9 ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ನೇತೃತ್ವದ ಸಚಿವ ಸಂಪುಟಕ್ಕೆ ದೊಡ್ಡ ಸರ್ಜರಿ ನಡೆದಿದೆ. ನಫೀಸಾ ಫಸಲ್‌ ಹಾಗೂ ಮಾಲಕರೆಡ್ಡಿ ಬಚಾವಾಗಿದ್ದಾರೆ.

ಹುದ್ದೆ ಕಳಕೊಂಡವರು- ಬಿ.ಬಿ.ಚಿಮ್ಮನ ಕಟ್ಟಿ, ಎ.ಎಂ.ಹಿಂಡಸಗೇರಿ, ಟಿ.ಬಿ.ಜಯಚಂದ್ರ ಮತ್ತು ಕಾಶಪ್ಪನವರ್‌ (ಕ್ಯಾಬಿನೆಟ್‌ ದರ್ಜೆ) ಹಾಗೂ ವೀರಕುಮಾರ್‌ ಪಾಟೀಲ್‌ (ರಾಜ್ಯ ಸಚಿವ).

ಸಚಿವ ಸಂಪುಟದಲ್ಲಿ ಗಾದಿ ಗಿಟ್ಟಿಸಿಕೊಂಡವರು- ವಿ.ಎಸ್‌.ಕೌಜಲಗಿ, ಎಚ್‌.ಎಂ.ರೇವಣ್ಣ ಮತ್ತು ರಾಮಲಿಂಗಾರೆಡ್ಡಿ (ಎಲ್ಲರೂ ಕ್ಯಾಬಿನೆಟ್‌ ದರ್ಜೆ) ಹಾಗೂ ಬಸವರಾಜ ಪಾಟೀಲ್‌, ವಸಂತ್‌ ಸಾಲಿಯಾನ್‌, ಎಂ.ಎಲ್‌.ಉಸ್ತಾದ್‌, ಕೆ.ಎನ್‌.ಗಡ್ಡಿ, ರಾಜುಗೌಡ ಮತ್ತು ಕೆ.ಬಿ.ಕೋಳಿವಾಡ (ಎಲ್ಲರೂ ರಾಜ್ಯ ಸಚಿವರು).
ಕ್ಯಾಬಿನೆಟ್‌ ದರ್ಜೆಗೆ ಬಡ್ತಿ ಪಡೆದಿರುವ ಏಕೈಕ ರಾಜ್ಯ ಸಚಿವ ಪರಮೇಶ್ವರ್‌.

ಹೊಸದಾಗಿ ನಿರ್ಮಿಸಲಾಗಿರುವ ರಾಜಭವನದ ಗಾಜಿನ ಮನೆಯಲ್ಲಿ ಎಲ್ಲಾ ಸಚಿವರಿಗೂ ರಮಾದೇವಿ ಬುಧವಾರ ಪ್ರಮಾಣ ವಚನ ಬೋಧಿಸಿದರು. ಈ ಸಂಪುಟ ಸರ್ಜರಿಯಿಂದ ಮುಖ್ಯಮಂತ್ರಿಗಳ ಹುದ್ದರಿಯೂ ಸೇರಿದಂತೆ ಸಂಪುಟದ ಬಲ 43ರಿಂದ 48ಕ್ಕೇರಿದೆ.

ಸಂಪುಟದಲ್ಲಿ ಪ್ರತಾನಿಧಿತ್ವ ಪಡೆಯದ ಜಿಲ್ಲೆಗಳತ್ತ ಕೃಷ್ಣ ಒಲವು ಹರಿಸಿದ್ದು, ಉಡುಪಿ, ಚಾಮರಾಜನಗರ, ಹಾವೇರಿ ಮತ್ತು ಬೀದರ್‌ನ ಪ್ರತಿನಿಧಿಗಳಿಗೆ ಸಂಪುಟದಲ್ಲಿ ಸ್ಥಾನ ಲಭಿಸಿದೆ.

(ಪಿಟಿಐ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X