ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಭಾರತದಲ್ಲಿ ಬಿಳಿ-ಕರಿಯರ ವ್ಯಾಜ್ಯಕ್ಕಾ ಈ ನೇರ ವಿದೇಶೀ ಬಂಡವಾಳ?’

By Staff
|
Google Oneindia Kannada News

ಬೆಂಗಳೂರು : ಮುದ್ರಣ ಮಾಧ್ಯಮದಲ್ಲಿ ಪ್ರತಿಶತ 26 ಹಾಗೂ ಟೀ ಬೆಳೆಯಲ್ಲಿ ಪ್ರತಿಶತ 100 ನೇರ ವಿದೇಶೀ ಬಂಡವಾಳ ಹೂಡಿಕೆಗೆ ಅನುಮತಿ ಕೊಟ್ಟಿರುವ ಎನ್‌ಡಿಎ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರದ ನಿರ್ಧಾರದ ಬಗ್ಗೆ ದೇವೇಗೌಡರು ಮಾತಿನ ಕತ್ತಿ ಝಳಪಿಸಿದ್ದು ಹೀಗೆ-
‘ಆತುರಗಾರನಿಗೆ ಬುದ್ಧಿ ಮಟ್ಟ ಎಂಬ ಮಾತು ಎನ್‌ಡಿಎ ಸರ್ಕಾರಕ್ಕೆ ಹೇಳಿ ಮಾಡಿಸಿದಂತಿದೆ. ವಿದೇಶೀ ಬಂಡವಾಳವನ್ನು ಮುದ್ರಣ ಮಾಧ್ಯಮ ಲೋಕಕ್ಕೆ ಹರಿಯಬಿಟ್ಟರೆ, ನಾಳೆ ದಿನ ವಿದೇಶೀಯರು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಪ್ರಜಾಪ್ರಭುತ್ವದ ಬಲವಾದ ಎಳೆಯಾದ ಮುದ್ರಣ ಮಾಧ್ಯಮದ ಸಂಪಾದಕೀಯದ ಮೇಲೂ ವಿದೀಶೀಯರು ತಲೆತೂರಿಸುತ್ತಾರೆ. ಇದರಿಂದ ಆಂತರಿಕ ರಾಜಕೀಯದ ಗತಿ ಹದಗೆಡುತ್ತದೆ. ಸರ್ಕಾರದ ಈ ನಿರ್ಧಾರ ಒಂದು ದೊಡ್ಡ ಹೊಡೆತ.

ಸಾಲದ್ದಕ್ಕೆ ಟೀ ಬೆಳೆಯಲು ಪೂರ್ತಿ ವಿದೇಶೀ ನೇರ ಬಂಡವಾಳಕ್ಕೆ ಅನುಮತಿ ಕೊಟ್ಟಿದೆ ಈ ನಮ್ಮ ಸರ್ಕಾರ. ಇದು ಯಾರ ಉದ್ಧಾರಕ್ಕೋ ಗೊತ್ತಾಗುತ್ತಿಲ್ಲ. ಟೀ ಬೆಳೆಯನ್ನೂ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸುವ ಹಪಾಹಪಿ ಇದ್ದಿರಬೇಕು. ಇವತ್ತು ಟೀ. ನಾಳೆ ರಬ್ಬರ್ರು, ನಾಡಿದ್ದು ಕಾಫಿ- ಹೀಗೆ ವಿದೇಶೀಯರಿಗೆ ಚಾಪೆ ಹಾಸುತ್ತಾ ಹೋಗುತ್ತದೆ. ಭಾರತ, ಕೀನ್ಯಾ ಮತ್ತು ಶ್ರೀಲಂಕಾ ಜಗತ್ತಿನ ಟೀ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿವೆ. ಇನ್ನು ತಾಂತ್ರಿಕವಾಗಿ ಏನು ವಿದೇಶೀ ನೆರವು ದೊರೆಯಬೇಕೋ ಗೊತ್ತಿಲ್ಲ. ದಕ್ಷಿಣ ಆಫ್ರಿಕದ ಬಿಳಿಯರು ಮತ್ತು ಕರಿಯ ಕೃಷಿಕರಲ್ಲಿ ಭೂ ಒಡೆತನಕ್ಕೆ ಜಗಳ ನಡೆಯುತ್ತಿತ್ತು. ನಮ್ಮ ದೇಶದಲ್ಲೂ ಅಂಥಾ ಪರಿಸ್ಥಿತಿಯನ್ನೇ ಸೃಷ್ಟಿಸಲು ಸರ್ಕಾರ ಹೀಗೆಲ್ಲಾ ಮಾಡುತ್ತಿದೆಯೇ?

ವಿದೇಶೀ ಮಟ್ಟದಲ್ಲೂ ಏನೂ ಕಮ್ಮಿಯಿಲ್ಲ ಎಂಬಂತಿರುವ ನಮ್ಮ ಮುದ್ರಣ ಮಾಧ್ಯಮಕ್ಕೆ ನೇರ ವಿದೇಶೀ ಬಂಡವಾಳದಿಂದ ಅದೇನು ತಾಂತ್ರಿಕ ಸಹಾಯ ದೊರೆಯುವುದೋ ದೇವರೇ ಬಲ್ಲ’.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X