• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತಷ್ಟು ಸಾಲಕ್ಕೆ ಕೈ ಚಾಚಿರುವ ಮೈಸೂರು ವಿಶ್ವ ವಿದ್ಯಾಲಯ !

By Staff
|

ಬೆಂಗಳೂರು:ಆರ್ಥಿಕವಾಗಿ ಕುಸಿಯುತ್ತಿರುವ ಮೈಸೂರು ವಿಶ್ವ ವಿದ್ಯಾಲಯ ಮತ್ತೆ ಸಾಲಕ್ಕಾಗಿ ಕೈ ಚಾಚಿದೆ.

50 ಲಕ್ಷ ರೂಪಾಯಿ ಸಾಲ ಪಡೆಯಲು ಸಿಂಡಿಕೇಟ್‌ನ ಅಂಗೀಕಾರಕ್ಕಾಗಿ ವಿಶ್ವ ವಿದ್ಯಾಲಯ ಕಾಯುತ್ತಿದ್ದು, ಸಿಂಡಿಕೇಟ್‌ ಸಭೆಯಲ್ಲಿ ಸಾಲ ಪಡೆಯುವ ಬಗ್ಗೆ ಅಂತಿಮ ನಿರ್ಣಯವಾಗಲಿದೆ. ಮಾನಸ ಗಂಗೋತ್ರಿಯ ಆನ್ವಯಿಕ ಸಸ್ಯ ಶಾಸ್ತ್ರ ವಿಭಾಗದ ಪ್ರಯೋಗಾಲಯ ವಿಸ್ತರಣೆಗೆ 50 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ. ವಿವಿಯ ಕುಲಪತಿ ಪ್ರೊ. ಎಸ್‌. ಎನ್‌. ಹೆಗ್ಡೆ ಸಾಲ ಮಂಜೂರು ಮಾಡಿಸಲು ಓಡಾಡುತ್ತಿದ್ದಾರೆ.

ಆದರೆ ಕಳೆದ ಸಿಂಡಿಕೇಟ್‌ ಸಭೆಯಲ್ಲೂ ಸಾಲದ ಬಗ್ಗೆ ಮಾತುಕತೆಗಳು ನಡೆದಿತ್ತು. ಸಾಲ ಹಿಂತಿರುಗಿಸಲು ಯಾವುದೇ ಮಾರ್ಗಗಳಿಲ್ಲ. ಹಾಗಿರುವಾಗ ಸಾಲ ಪಡೆಯುವುದು ಸಲ್ಲ ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂದಿದ್ದವು.

ಈಗ ಪಡೆಯಲಿರುವ 50 ಲಕ್ಷ ರೂಪಾಯಿ ಸಾಲವನ್ನು ಹಿಂತಿರುಗಿಸಲು 8 ವರ್ಷಗಳು ಬೇಕಾಗುತ್ತವೆ. ಒಟ್ಟು 36 ಲಕ್ಷ ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ನೀಡಬೇಕಾಗುತ್ತದೆ. ಆನ್ವಯಿಕ ಸಸ್ಯ ಶಾಸ್ತ್ರ ವಿಭಾಗಕ್ಕೆ ನೋಂದಣಿ ಶುಲ್ಕ ಹಾಗೂ ಇತರೆ ಮೂಲಗಳಿಂದ ಹಣ ಸಂಗ್ರಹಿಸಿ ವಿವಿಗೆ ಹಿಂತಿರುಗಿಸುವುದು ಕಷ್ಟ ಸಾಧ್ಯ. ಈಗಾಗಲೇ ಓವರ್‌ ಡ್ರಾಫ್ಟ್‌ ಹಣಕ್ಕೆ ಲಕ್ಷಗಟ್ಟಲೆ ಬಡ್ಡಿ ಕಟ್ಟಲಾಗುತ್ತಿದೆ. ಅಲ್ಲದೆ ಕಳೆದ ವರ್ಷ ವಿವಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವುದೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಜೂನ್‌ 25ರಂದು ನಡೆಯುವ ಸಿಂಡಿಕೇಟ್‌ ಸಭೆಯಲ್ಲಿ ಸಾಲ ಪಡೆಯುವ ವಿಷಯಕ್ಕೆ ವಿರೋಧ ವ್ಯಕ್ತವಾಗುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more