• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿಯ ‘ವಂಡರ್‌ ಕಣ್ಣಿ’ನ ಗಣಿತ ಪರಿಣತ ಹುಡುಗ ಬಸವರಾಜ

By Staff
|

ಬೆಳಗಾವಿ:2004ನೇ ಇಸವಿಯ ಏಪ್ರಿಲ್‌ ತಿಂಗಳ ಭಾನುವಾರಗಳ ತಾರೀಖುಗಳು ಬೇಕೆ? 58.48 ಕೋಟಿಯನ್ನು 23.84 ಲಕ್ಷದಿಂದ ಗುಣಿಸಿದಾಗ ಬರುವ ಉತ್ತರ ಎಷ್ಟು ?- ಹೀಗೆ ಸಾಮಾನ್ಯರಿಗೆ ಬಿಡಿಸಲು ನಿಮಿಷಗಟ್ಟಲೆ ಬೇಕಾಗುವ ಗಣಿತದ ಸಮಸ್ಯೆಗಳಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಉತ್ತರ ಹೇಳುತ್ತಾನೆ ಬಸವರಾಜ ಉಮಾರಾಣಿ.

ಮೂರನೇ ಇಯತ್ತೆಯ ಈ ಹುಡುಗ ಬೆಳಗಾವಿಯ ‘ವಂಡರ್‌ ಬಾಯ್‌’. ವಯಸ್ಸು ಎಂಟೇ ವರ್ಷ. ಓದುತ್ತಿರುವುದು ಮಹೇಶ್ವರ ಶಾಲೆಯಲ್ಲಿ. ಅಥಣಿಯ ಜಮೀನುದಾರ ಶಂಕರ್‌ ಉಮಾರಾಣಿ ಎಂಬುವರ ಮಗನೀತ. ನಾಲ್ಕು ವರ್ಷದವರೆಗೆ ಬಸವರಾಜ ಹಳ್ಳಿ ಮಣ್ಣಲ್ಲೆ ಬೆಳೆದ. ಆಗಲೇ ಇವನ ಗಣಿತ ಪರಿಣತಿ ಪುಂಖಾನುಪುಂಖ ಹೊರಗೆ ಬೀಳತೊಡಗಿತ್ತು. ಅಪ್ಪ ಬೆರಳು ಬಿಚ್ಚಿ ಲೆಕ್ಕ ಹಾಕಲು ಶುರು ಮಾಡುವ ಮೊದಲೇ ಪುಟ್ಟ ಮಗ ಫಟ್ಟಂತ ಉತ್ತರ ಕೊಡುತ್ತಿದ್ದ. ಅದಕ್ಕೇ ಬಸವರಾಜನನ್ನು ಸಿಟಿ ಶಾಲೆಗೆ ಸೇರಿಸಿದರು.

ನಾನು ಏನೂ ಹೇಳಿಕೊಟ್ಟಿರಲಿಲ್ಲ. ಅ, ಆ, ಇ, ಈ... 1,2,3...ಇದನ್ನೇನೋ ಕಲಿಸಬಹುದು. ಆದರೆ ನಾಲ್ಕನೇ ವಯಸ್ಸಲ್ಲೇ ಬಸವರಾಜನ ಲೆಕ್ಕದಲ್ಲಿನ ಚುರುಕುತನ ಕಂಡು ದಂಗಾದೆ. ಅವನಲ್ಲಿ ಆ ಶಕ್ತಿ ಅದು ಹೇಗೆ ಬಂದಿದೆಯೋ ದೇವರೇ ಬಲ್ಲ ಎನ್ನುತ್ತಾರೆ ಶಂಕರ್‌.

ಅಂದಹಾಗೆ, ಇನ್ಫೋಸಿಸ್‌ ಸುಧಾಮೂರ್ತಿ, ಲೋಕಾಯುಕ್ತ ವೆಂಕಟಾಚಲ ಸೇರಿದಂತೆ ಅನೇಕ ಮುಖಂಡರು ಬಸವರಾಜನ ಬುದ್ಧಿಮತ್ತೆಯನ್ನು ಒರೆಗೆ ಹಚ್ಚಿ ನೋಡಿ, ಭೇಷ್‌ ಅಂದಿದ್ದಾರೆ.

ಮೊನ್ನೆ ಬ್ಯಾಂಕೊಂದರ ಕ್ಯಾಷಿಯರ್‌ ಒಬ್ಬರು ಮೂರು ದೊಡ್ಡ ನೋಟುಗಳ ಕಟ್ಟುಗಳನ್ನು ಬಸವರಾಜನ ಕೈಗಿತ್ತು ಎಣಿಸುವಂತೆ ಹೇಳಿದರು. ಬಸವರಾಜ ದುಡ್ಡು ಎಣಿಸಿದ ವೇಗವನ್ನು ಕಂಡು ಕ್ಯಾಷಿಯರ್‌ ಸುಸ್ತು. ಅದೂ ಎಣಿಕೆ ಪಕ್ಕಾ ಆಗಿತ್ತು.

ಇಷ್ಟೆಲ್ಲಾ ಪ್ರತಿಭೆಯಿರುವ ಹುಡುಗನಿಗೆ ಕಣ್ಣು ಕಾಣದು! ಅಪ್ಪ ಶಂಕರ್‌ ಮಗನಿಗೆ ಕಣ್ಣು ಕೊಡಿಸಲು ಅಲೆದಾಡುತ್ತಿದ್ದಾರೆ. ಮಗನ ಓದಿಗೆ ಹಣ ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X