ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶೀ ಐಟಿ ಅಂಗಳದಲ್ಲಿ ತಂಗಾಳಿ ;02-03ರಲ್ಲಿ 1ಲಕ್ಷ ಉದ್ಯೋಗ

By Staff
|
Google Oneindia Kannada News

ಮುಂಬಯಿ : ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರ 2002-03 ನೇ ಸಾಲಿನಲ್ಲಿ 1 ಲಕ್ಷ ಮಂದಿಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಬಹು ವರ್ಷಗಳ ಜಾಗತಿಕ ಒಪ್ಪಂದಗಳು ಹಾಗೂ ವಿದೇಶಿ ಯೋಜನೆಗಳಿಂದ ಈ ಉದ್ಯೋಗ ಹೆಚ್ಚಳ ಸಾಧ್ಯವಾಗಲಿದೆ ಎಂದು ನಾಸ್‌ಕಾಮ್‌ ನಿರೀಕ್ಷಿಸಿದೆ.

ಮಾರ್ಚ್‌ 2002 ಕ್ಕೆ ಕೊನೆಗೊಂಡ ವರ್ಷದಲ್ಲಿ 5.22 ಲಕ್ಷ ಇದ್ದ ಐಟಿ ಉದ್ಯೋಗಿಗಳ ಸಂಖ್ಯೆ 2002-03 ರ ಅಂತ್ಯದಲ್ಲಿ 6.25 ಲಕ್ಷ ಮುಟ್ಟುವ ಸಾಧ್ಯತೆಯಿದೆ. ಅದೇ ಅವಧಿಯಲ್ಲಿ ಸಾಗರೋತ್ತರ ಯೋಜನೆಗಳು ಶೇ.70 ರಷ್ಟು ಹೆಚ್ಚಾಗಲಿವೆ ಎಂದೂ ನಾಸ್‌ಕಾಮ್‌ ಹೇಳಿದೆ.

ಬಹುರಾಷ್ಟ್ರೀಯ ಕಂಪನಿಗಳು ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲಿದ್ದು , ಹೊಸ ಉದ್ಯೋಗಾವಕಾಶ ರೂಪುಗೊಳ್ಳಲಿವೆ. ಸಾಫ್ಟ್‌ವೇರ್‌ ರಫ್ತು ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ.

ನಾಸ್‌ಕಾಮ್‌ ನಿರೀಕ್ಷೆಗೆ ಉದಾಹರಣೆಯಾಗಿ Patni ಕಂಪ್ಯೂಟರ್‌ ಸಿಸ್ಟಂಸ್‌ನ ಹಿರಿಯ ಉಪಾಧ್ಯಕ್ಷ ಸತೀಶ್‌ ಎಂ.ಜೋಶಿ ಹೇಳುವುದನ್ನು ಕೇಳಿ- ಕಂಪನಿಯು ಹೆಲ್ತ್‌ಕೇರ್‌, ಬಿಪಿಒ ಸ್ಪೇಸ್‌ ಮುಂತಾದ ಹೊಸ ಕ್ಷೇತ್ರಗಳನ್ನು ಪ್ರವೇಶಿಸಲಿದ್ದು , ಇದರಿಂದ ಹೆಚ್ಚುವರಿ ಸಿಬ್ಬಂದಿಯನ್ನು ಹೊಂದುವುದು ಅನಿವಾರ್ಯವಾಗಿದೆ. 02-03 ನೇ ಸಾಲಿನಲ್ಲಿ 400 ಮಂದಿಯನ್ನು ನೇರವಾಗಿ ಕ್ಯಾಂಪಸ್‌ನಿಂದ ಹಾಗೂ 350 ಮಂದಿಯನ್ನು ಮಾರ್ಕೆಟ್‌ನಿಂದ ನೇಮಕ ಮಾಡಿಕೊಳ್ಳಲು ಕಂಪನಿ ಉದ್ದೇಶಿಸಿದೆ.

ಐಸಿಐಸಿಐ ಇನ್ಫೋಟೆಕ್‌ ಕೂಡ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ. ಕಂಪನಿಯ ಸಿಇಒ ವಿ.ಶ್ರೀನಿವಾಸನ್‌ ಹೇಳುವಂತೆ- ಪ್ರಸ್ತುತ 1500 ಮಂದಿ ಉದ್ಯೋಗಿಗಳನ್ನು ಹೊಂದಿರುವ ಕಂಪನಿ 2002-03 ರ ಅವಧಿಯಲ್ಲಿ ಇನ್ನೂ 300 ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ.

ಮೇಲಿನ ಉದಾಹರಣೆಗಳು ಭಾರತದ ಐಟಿ ಕ್ಷೇತ್ರ ಮತ್ತೆ ರಂಗು ಕೂಡಿಸಿಕೊಳ್ಳುವುದರ ದಿಕ್ಸೂಚಿಯಾ? ಹೌದೆನ್ನುತ್ತಾರೆ ಅನೇಕ ಐಟಿ ಪರಿಣತರು. ಕಳೆದ ವರ್ಷ ಐಟಿ ವಲಯ ಸಾಕಷ್ಟು ಗಂಡಾಂತರ ಎದುರಿಸಿತು. ಆದರೆ, ಕೆಲವು ತಿಂಗಳಿಂದ ಪರಿಸ್ಥಿತಿ ಬದಲಾಗುತ್ತಿದೆ. ಸೆಪ್ಟಂಬರ್‌ 11 ರ ಘಟನೆ ಪಾಠ ಕಲಿಸಿದೆ ಎನ್ನುತ್ತಾರೆ ಆಝ್‌ಟೆಕ್‌ ಸಾಫ್ಟ್‌ವೇರ್‌ ಮತ್ತು ತಂತ್ರಜ್ಞಾನ ಲಿ.ನ ಹಿರಿಯ ಉಪಾಧ್ಯಕ್ಷ ಚಿನ್ನಿಕೃಷ್ಣ ಕೊಮ್ಮಿ . ಅಂದಹಾಗೆ, ಆಝ್‌ಟೆಕ್‌ ಕೂಡ ಹೊಸ ನೇಮಕಾತಿಗಳನ್ನು ಇಷ್ಟರಲ್ಲೇ ಪ್ರಾರಂಭಿಸಲಿದೆ.
ಶುಭವಾಗಲಿ !
(ಏಜೆನ್ಸೀಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X