ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ತಾಯಿಯಾದ ಸೋನಿಯಾ ಪುತ್ರಿ, ಮಡಿಲಲ್ಲಿ ಹೆಣ್ಣು ಮಗು

By Staff
|
Google Oneindia Kannada News

ನವದೆಹಲಿ:ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ವಾಧ್ರಾ ಸೋಮವಾರ ಮುಂಜಾವು ಹೆಣ್ಣು ಮಗುವಿಗೆ ಜನ್ಮ ನೀಡುವುದರೊಂದಿಗೆ ಎರಡು ಮಕ್ಕಳ ಮಾತೆ ಎನಿಸಿದರು.

ದೆಹಲಿಯ ಪ್ರತಿಷ್ಠಿತ ಸರ್‌ ಗಂಗಾರಾಂ ಆಸ್ಪತ್ರೆಯಲ್ಲಿ ಸೋಮವಾರ (ಜೂ.24) ಮುಂಜಾನೆ 4 ರ ಸುಮಾರಿಗೆ ಪ್ರಿಯಾಂಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪ್ರಿಯಾಂಕ ಅವರ ಪ್ರಸವದ ಕುರಿತು ಕಾಂಗ್ರೆಸ್‌ ಕಾರ್ಯಕರ್ತರು ಅತೀವ ಕುತೂಹಲಿಗಳಾಗಿದ್ದು , ಎರಡನೇ ಮಗುವಿನ ಜನನದ ನಂತರ ಪ್ರಿಯಾಂಕ ಸಕ್ರಿಯ ರಾಜಕಾರಣ ಪ್ರವೇಶಿಸುವರೆಂದು ಪಕ್ಷದ ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಂತೂ ಈ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು , ಸತ್ವ ಕಳಕೊಂಡ ಪಕ್ಷಕ್ಕೆ ಪ್ರಿಯಾಂಕ ಶಕ್ತಿ ತುಂಬುತ್ತಾರೆ ಎಂದೇ ಕಾರ್ಯಕರ್ತರು ನಂಬಿದ್ದಾರೆ.

ರಾಜಕಾರಣದ ಮಾತು ಒತ್ತಟ್ಟಿಗಿರಲಿ, ಗೃಹಿಣಿಯಾಗಂತೂ ಪ್ರಿಯಾಂಕ ಯಶಸ್ವಿಯಾಗಿದ್ದಾರೆ. ಈ ಮುನ್ನ ಗಂಡು ಮಗುವಿನ ತಾಯಿಯಾಗಿದ್ದ ಪ್ರಿಯಾಂಕ ಮಡಿಲಲ್ಲೀಗ ಹೆಣ್ಣು ಮಗು. ಅಲ್ಲಿಗೆ ‘ಆರತಿಗೊಂದು ಕೀರುತಿಗೊಂದು’ ಲೆಕ್ಕಾಚಾರ ಸರಿಯಾಯಿತು. ಅಥವಾ ಪ್ರಿಯಾಂಕ ಇನ್ನೊಂದನ್ನು ಬಯಸುತ್ತಾರಾ... ?
(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X