ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿನ ಬಾಕಿ ಉಳಿಸಿಕೊಂಡಿಲ್ಲ :ಜಯಾಗೆ ಎಸ್‌.ಎಂ.ಕೃಷ್ಣ ಪತ್ರ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕದಲ್ಲಿ ಮಳೆಯ ಕೊರತೆಯಿದ್ದರೂ ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣದಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರಮುಖೇನ ತಿಳಿಸಿದ್ದಾರೆ.

2001-02 ನೇ ಇಸವಿಯಲ್ಲಿ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಬಿಟ್ಟಿದೆ. ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದಾಗ್ಯೂ ತಮಿಳುನಾಡಿಗೆ ನೀರು ಬಿಡಲಾಗಿದೆ. 2002 ರ ಮೇ ತಿಂಗಳ ವೇಳೆಗೆ ಕರ್ನಾಟಕದ ಜಲಾಶಗಳಲ್ಲಿ 9.17 ಟಿಎಂಸಿ ನೀರಿನ ಸಂಗ್ರಹವಿದ್ದರೆ, ಮೆಟ್ಟೂರು ಜಲಾಶಯದಲ್ಲಿ 11.36 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಕೃಷ್ಣ ಪತ್ರದಲ್ಲಿ ಅಂಕಿ ಅಂಶಗಳನ್ನು ಹೆಕ್ಕಿದ್ದಾರೆ.

2002 ಜೂನ್‌ 1 ರಿಂದ ಜಾರಿಗೆ ಬಂದ ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಕಳೆದ ವರ್ಷದ ಯಾವುದೇ ರೀತಿಯ ನೀರಿನ ಬಾಕಿ ಉಳಿಸಿಕೊಂಡಿಲ್ಲ . ಕರ್ನಾಟಕ ತೀವ್ರ ಬರದ ದವಡೆಗೆ ತುತ್ತಾಗಿದ್ದರೂ, ತಮಿಳುನಾಡಿನಲ್ಲಿನ ಬೆಳೆಗಳಿಗೆ ನೀರಿನ ತೊಂದರೆ ಎದುರಾಗಿಲ್ಲ . ತಮಿಳುನಾಡು ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಪ್ರಸ್ತುತ ಕೂಡ ಮೆಟ್ಟೂರು ಜಲಾಶಯಕ್ಕೆ 59 ಟಿಎಂಸಿ ನೀರು ಹರಿದುಬಂದಿದೆ.

ಕೇರಳ ಜಲಾನಯನ ಪ್ರದೇಶದಲ್ಲಿ ನೀರಿನ ಹರಿವು ಕಡಿಮೆಯಿದ್ದು , ಕರ್ನಾಟಕದ ಜಲಾಶಗಳಿಗೆ 4 ಟಿಎಂಸಿಯಷ್ಟು ನೀರು ಹರಿದುಬಂದಿದೆ. ಅದರಲ್ಲಿ 2.08 ಟಿಎಂಸಿ ನೀರು ಬಿಳಿಗುಂಡ್ಲು ಜಲಾಶಯಕ್ಕೆ ಹರಿದುಬಂದಿದ್ದು , ಅಲ್ಲಿಂದ ಮೆಟ್ಟೂರಿಗೆ ನೀರು ಹರಿದಿದೆ ಎಂದು ಕೃಷ್ಣ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X