ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಲಿದೆ ಬರಲಿದೆ! ಆನ್‌ಲೈನ್‌ ಜಾಲಕ್ಕೆ ಆಸ್ತಿ ತೆರಿಗೆ ಪಾವತಿ ಸೌಲಭ್ಯ!

By Staff
|
Google Oneindia Kannada News

ಬೆಂಗಳೂರು: ಆಸ್ತಿ ತೆರಿಗೆ ಸಲ್ಲಿಸುವ ವಿಧಾನ ಇನ್ನಷ್ಟು ಸರಳವಾಗಲಿದೆ!

ಬ್ಯಾಂಕ್‌ ಅಥವಾ ಕಂದಾಯ ಇಲಾಖೆ ಕಚೇರಿಗಳನ್ನು ಹುಡುಕಿಕೊಂಡು ಅಲೆಯಬೇಕಿಲ್ಲ ; ಉದ್ದದ ಸಾಲುಗಳನ್ನು ಬೇಸರದಿಂದ ಸವೆಸಬೇಕಿಲ್ಲ . ಬೆರಳ ತುದಿಯಲ್ಲೇ ಆಸ್ತಿ ತೆರಿಗೆ ಪಾವತಿ. ಅದು ಆನ್‌ಲೈನ್‌ ಮಾಯಾಜಾಲ.

ಬೆಂಗಳೂರು ಮಹಾನಗರ ಪಾಲಿಕೆ ಮುಂದಿನ ವಿತ್ತ ವರ್ಷದಲ್ಲಿ ಆನ್‌ಲೈನ್‌ ಮೂಲಕ ಆಸ್ತಿ ತೆರಿಗೆ ಕಟ್ಟುವ ಸೌಲಭ್ಯವನ್ನು ಕಲ್ಪಿಸಲಿದೆ. ಆಸ್ತಿ ತೆರಿಗೆ ಕಟ್ಟುವ ವಿಧಾನವನ್ನು ಮತ್ತಷ್ಟು ಸರಳಗೊಳಿಸಲು ಪಾಲಿಕೆ ಕೈಗೊಂಡಿರುವ ಕ್ರಮಗಳಲ್ಲಿ ಇದೂ ಒಂದು ಎನ್ನುತ್ತಾರೆ ಪಾಲಿಕೆಯ ಉಪ ಆಯುಕ್ತ (ಕಂದಾಯ) ಎಚ್‌.ಬಿ.ಎಸ್‌.ಆರಾಧ್ಯ.

ಪ್ರತಿಯಾಂದು ಆಸ್ತಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಕಲೆಹಾಕಲಾಗುವುದು. ಆಸ್ತಿ ಗುರುತು ಸಂಖ್ಯೆ, ಬೀದಿ ಹೆಸರು, ಮುನ್ಸಿಪಲ್‌ ನಂಬರ್‌, ಆಸ್ತಿಯ ಯಜಮಾನನ ಹೆಸರು, ಉದ್ಯೋಗ, ಸಂಪರ್ಕ ವಿಳಾಸ, ಈ ಮುಂಚೆ ಪಾವತಿ ಮಾಡಿರುವ ತೆರಿಗೆ, ಮುಂತಾದ ಎಲ್ಲ ವಿವರಗಳನ್ನು ಸಂಗ್ರಹಿಸಿ ಇಂಟರ್ನೆಟ್‌ ಜಾಲಕ್ಕೆ ಅಳವಡಿಸಲಾಗುವುದು.

ಒಮ್ಮೆ ಸಾಫ್ಟ್‌ವೇರ್‌ ಸಿದ್ಧವಾದ ನಂತರ, ತೆರಿಗೆ ಪಾವತಿಸುವವರು ಇಂಟರ್‌ನೆಟ್‌ನಲ್ಲಿ ತಮ್ಮ ಆಸ್ತಿ ಗುರುತು ಸಂಖ್ಯೆಯ ಮೂಲಕ ತೆರಿಗೆ ಪಾವತಿಸಬಹುದು. ಈ ಸೌಲಭ್ಯ ಮುಂದಿನ ವರ್ಷ ಕಾರ್ಯಗತವಾಗುತ್ತದೆ. ಗುರಿ ಸಾಧನೆಗೆ ನಿರ್ದಿಷ್ಟ ದಿನಾಂಕವನ್ನೇನೂ ಗೊತ್ತುಪಡಿಸಲಾಗಿಲ್ಲ ; ಅದು ಸರ್ಕಾರಿ ಕೆಲಸ!
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X