ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಗೆಟಿವ್‌ ಗುಂಪಿನ ರಕ್ತ ಬೇಕಿದೆಯಾ...?ಇಲ್ಲಿದೆ ಆನ್‌ಲೈನ್‌ ನೆರವು

By Staff
|
Google Oneindia Kannada News

ಬೆಂಗಳೂರು : ನೆಗೆಟಿವ್‌ ಗುಂಪಿನ ರಕ್ತದ ದಾನಿಗಳ ಮಾಹಿತಿಯನ್ನು ಒಲಗೊಂಡ ಲೈಫ್‌ ಲೈನ್‌ ಡೈರೆಕ್ಟರಿ ಸದ್ಯದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ.

ಬೆಂಗಳೂರು ನಗರಕ್ಕೆ ಸೀಮಿತವಾಗಿರುವ ಈ ಡೈರೆಕ್ಟರಿಯಲ್ಲಿ ನೆಗೆಟಿವ್‌ ಗುಂಪಿನ ರಕ್ತದ 270 ಮಂದಿಯ ಹೆಸರು ವಿಳಾಸ ಮತ್ತು ಸಂಪರ್ಕ ವಿಧಾನವನ್ನು ವಿವರಿಸಲಾಗಿದೆ. ನಗರದ ಲೇಡೀಸ್‌ ಸರ್ಕಲ್‌ 19 ಸಂಸ್ಥೆ ಈ ಡೈರೆಕ್ಟರಿಯನ್ನು ಪ್ರಕಟಿಸುತ್ತಿದೆ.

ಈ ಡೈರೆಕ್ಟರಿಯ ಜೊತೆಗೆ www.negativedonors.com ಎಂಬ ವೈಬ್‌ಸೈಟನ್ನೂ ಆರಂಭಿಸಲು ನಿರ್ಧರಿಸಲಾಗಿದ್ದು, ರಕ್ತದಾನಿಗಳು ತಮ್ಮ ವಿಳಾಸವನ್ನು ಈ ಆನ್‌ಲೈನ್‌ ಮೂಲಕ ಕಳುಹಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಮೋನಿಕಾ ರಾಜಾರಾಂ ಶುಕ್ರವಾರ ತಿಳಿಸಿದರು.

ಬಿಡುಗಡೆಯಾಗಲಿರುವ ಈ ಡೈರೆಕ್ಟರಿಯನ್ನು ಎಲ್ಲಾ ಆಸ್ಪತ್ರೆಗಳಿಗೆ, ರಕ್ತ ನಿಧಿ ಕೇಂದ್ರಗಳಿಗೂ ವಿತರಿಸಲಾಗುವುದು. ರಕ್ತದ ಅಗತ್ಯವಿದ್ದಲ್ಲಿ ಸಂಸ್ಥೆಯನ್ನು ಅಥವಾ ನೇರವಾಗಿ ನಿರ್ದಿಷ್ಟ ವ್ಯಕ್ತಿಯನ್ನು ಸಂಪರ್ಕಿಸಬಹುದು ಎಂದು ಮೋನಿಕಾ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X