ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪೆ ಮತ್ತು ಗೋವಾ ನಡುವೆ ಹಾರಲಿದೆ ಡೆಕ್ಕನ್‌ ಏವಿಯೇಷನ್‌ ವಿಮಾನ

By Staff
|
Google Oneindia Kannada News

ಬೆಂಗಳೂರು: ನಗರದಿಂದ ಹಂಪೆ ಮತ್ತು ಗೋವಾಕ್ಕೆ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲು ಡೆಕ್ಕನ್‌ ಏವಿಯೇಷನ್‌ ಸಂಸ್ಥೆ ಮುಂದೆ ಬಂದಿದೆ.

ಕರ್ನಾಟಕ ಪ್ರವಾಸೋದ್ಯಮದಲ್ಲಿ ಖಾಸಗಿ ಸಂಸ್ಥೆಗಳ ಪಾತ್ರ ಕುರಿತ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರವಾಸೋದ್ಯಮ ಖಾತೆ ಸಚಿವ ರೋಷನ್‌ ಬೇಗ್‌ ಶುಕ್ರವಾರ ಈ ವಿಷಯವನ್ನು ತಿಳಿಸಿದರು . ಗೋವಾ ಹಾಗೂ ಹಂಪೆಗೆ ಭೇಟಿ ನೀಡಲು ವಿದೇಶೀ ಪ್ರವಾಸಿಗರು ಹಿಂಜರಿಯುತ್ತಿದ್ದಾರೆ. ಸರಿಯಾದ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಲ್ಲಿ ಈ ಎರಡೂ ಪ್ರವಾಸೀ ತಾಣಗಳಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಬರುವುದರಲ್ಲಿ ಸಂದೇಹವಿಲ್ಲ ಎಂದು ರೋಷನ್‌ ಬೇಗ್‌ ಅಭಿಪ್ರಾಯಪಟ್ಟಿದ್ದಾರೆ.

ಹಂಪೆ ಮತ್ತು ಗೋವಾದಲ್ಲಿ ರೆಸಾರ್ಟ್‌, ಅತ್ಯುತ್ತಮ ಹೋಟೆಲ್‌ಗಳು, ಮನರಂಜನಾ ಪಾರ್ಕ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯಸರಕಾರ ಇತ್ತೀಚೆಗೆ ಪ್ರಕಟಿಸಿದ ಪ್ರವಾಸೋದ್ಯಮ ನೀತಿಯಲ್ಲಿಯೂ ಈ ಯೋಜನೆಗಳನ್ನು ಉಲ್ಲೇಖಿಸಲಾಗಿದೆ ಎಂದು ರೋಷನ್‌ ಬೇಗ್‌ ಹೇಳಿದರು.

(ಇನ್ಫೋ ವಾರ್ತೆ)

ಹಂಪಿಯ ಸುತ್ತ...
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X