ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯ ಅಪರಾಧೀಕರಣ ಕುರಿತು ಸಭಾಪತಿಗಳ ಸಮಾವೇಶ ಆತಂಕ

By Staff
|
Google Oneindia Kannada News

ಬೆಂಗಳೂರು: ರಾಜಕೀಯ ಕ್ಷೇತ್ರದ ಅಪರಾಧೀಕರಣ ಸೇರಿದಂತೆ ಚುನಾವಣಾ ವಲಯದ ಪಿಡುಗುಗಳನ್ನು ನಿವಾರಿಸಲು ಸಂಸತ್ತು ಮತ್ತು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ತುರ್ತು ದೇಶದಲ್ಲಿದೆ ಎಂದು ಲೋಕಸಭಾ ಸ್ಪೀಕರ್‌ ಮನೋಹರ್‌ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ವ್ಯವಸ್ಥೆಯಾಳಗೆ ನುಸುಳಿಕೊಂಡು ಬಂದಿರುವ ಕೆಲವು ಬುದ್ಧಿ ಭ್ರಮಣೆಗಳನ್ನು ಹಂತ ಹಂತವಾಗಿ ಸುಧಾರಿಸಬೇಕು. ಸರಕಾರವೇ ಸರಿಯಾದ ಕ್ರಮಗಳನ್ನು ಕೈಗೊಂಡು ಎಲ್ಲ ರೀತಿಯ ಚುನಾವಣಾ ಅಪರಾಧಗಳನ್ನು ತಡೆಗಟ್ಟಬೇಕು ಎಂದು ಮನೋಹರ್‌ ಜೋಶಿ ಹೇಳಿದರು. ಅವರು ಗುರುವಾರ ರಾಷ್ಟ್ರೀಯ ಸ್ಪೀಕರ್‌ಗಳ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರಕಾರ ಮತ್ತು ಸಂಸತ್ತು ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳದೇ ಇದ್ದರೆ, ಈ ಜಾಗವನ್ನು ನ್ಯಾಯಾಂಗ ಆಕ್ರಮಿಸಿಕೊಳ್ಳುತ್ತದೆ. ಚುನಾವಣೆಗಳಲ್ಲಿ ಮತದಾರರ ಸಹಾನುಭೂತಿಯನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾವಂತರು ಮತದಾನ ಪ್ರಕ್ರಿಯೆಯಿಂದ ದೂರ ನಿಂತಿರುತ್ತಾರೆ. ಆಸ್ಟ್ರೇಲಿಯಾ, ಅಜೆಂಟೈನಾ, ಬೆಲ್ಜಿಯಂಗಳಲ್ಲಿ ಮತದಾನ ಕಡ್ಡಾಯವಾಗಿರುತ್ತದೆ. ಹಾಗೆಯೇ ಭಾರತದಲ್ಲಿಯೂ ಮತದಾರರನ್ನು ಮತಗಟ್ಟೆಗೆ ಕರೆತರಲು ಪ್ರಯತ್ನಗಳಾಗಬೇಕು. ಅದರರ್ಥ ಮತದಾನವನ್ನು ಕಡ್ಡಾಯ ಮಾಡಬೇಕೆಂದೇನಲ್ಲ ಎಂದು ಮನೋಹರ್‌ ಜೋಶಿ ಹೇಳಿದರು.

ಚುನಾವಣೆಯಲ್ಲಿನ ಅಪರಾಧೀಕರಣ, ಪ್ರಜಾಪ್ರಭುತ್ವಕ್ಕೆ ಭಾರಿ ಕೊಡಲಿಯೇಟಾಗಿ ಪರಿಣಮಿಸಿರುವುದರ ವಿರುದ್ಧ ಸುಪ್ರಿಂ ಕೋರ್ಟ್‌, ಚುನಾವಣಾ ಆಯೋಗ ಮತ್ತು ಸಂವಿಧಾನದ ಕಾರ್ಯಗತಿಯ ಬಗ್ಗೆ ವಿಮರ್ಶೆ ನಡೆಸುವ ರಾಷ್ಟ್ರೀಯ ಆಯೋಗ ಹಾಗೂ ಸಂಸತ್ತು ತಮ್ಮ ದನಿಯೆತ್ತಿವೆ.

ಸಂಸತ್ತಿನಲ್ಲಿ ಸಚಿವರ ಅಥವಾ ಶಾಸಕರ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಮನೋಹರ್‌ ಸಂಸತ್ತಿನ ಆರಂಭವಾಗಿದ್ದ ಸಂದರ್ಭದಲ್ಲಿ ಇಂತಹ ಸಮಸ್ಯೆಗಳಿರಲಿಲ್ಲ. ಇತ್ತೀಚೆಗೆ ಪರಿಸ್ಥಿತಿ ಮೇರೆ ಮೀರುತ್ತಿದೆ ಎಂದರು.
(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X