ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ಅಂತರರಾಷ್ಟ್ರೀಯ ಐಟಿ ಸೇವೆಗಳಿಗೆ ಕಾರ್ಡಿಫ್‌ ಸುರಕ್ಷೆ

By Staff
|
Google Oneindia Kannada News

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಪ್ಪಂದ ಸಾಧಿಸುವಲ್ಲಿಯೂ ಎತ್ತಿದ ಗೈ ಎನ್ನಿಸಿರುವ ಇನ್ಫೋಸಿಸ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಈ ಬಾರಿ ವಿಶ್ವ ಪ್ರಸಿದ್ಧ ವಿಮಾ ಕಂಪನಿ ಕಾರ್ಡಿಫ್‌ನೊಂದಿಗೆ ಒಪ್ಪಂದ ಸಾಧಿಸಿದೆ.

ತನ್ನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ನೀತಿಯನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯಿಂದ ಬಿಎನ್‌ಪಿ-ಪ್ಯಾರಿಬಸ್‌ ಸಹಯೋಗಿಯಾದ ಕಾರ್ಡಿಫ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಇನ್ಫೋಸಿಸ್‌ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದೆ.

ಗುಣಮಟ್ಟದ ಬಗೆಗಿನ ಕಾಳಜಿಯಿಂದಾಗಿ ಕಾರ್ಡಿಫ್‌ನೊಂದಿಗೆ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದದಿಂದಾಗಿ 26 ರಾಷ್ಟ್ರಗಳಲ್ಲಿ ಕಂಪನಿಯ ಮಾಹಿತಿ ತಂತ್ರಜ್ಞಾನ ಸೇವೆಗಳಿಗೆ, ಕಾರ್ಡಿಫ್‌ ಹಾಜರಿ ಇರುವೆಲ್ಲೆಡೆ ಬ್ಯಾಂಕ್‌ ಖಾತರಿ ದೊರೆಯಲಿದೆ ಎಂದು ಪ್ರಕಟಣೆ ಬಣ್ಣಿಸಿದೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X