ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ವಿವಿಧ ವಿಧಾನಮಂಡಲ ಅಧ್ಯಕ್ಷರ ಸಮಾವೇಶ ಪ್ರಾರಂಭ

By Staff
|
Google Oneindia Kannada News

ಬೆಂಗಳೂರು: ಸಂಸತ್‌ ಭವನದ ಮೇಲೆ ನಡೆದ ಉಗ್ರರ ದಾಳಿ ಹಾಗೂ ವಿವಿಧ ರಾಜ್ಯಗಳ ವಿಧಾನಮಂಡಲ ಕಟ್ಟಡಗಳ ಮೇಲೆ ನಡೆದಿರುವ ಉಗ್ರರ ದಾಳಿ ಪ್ರಯತ್ನಗಳ ಹಿನ್ನೆಲೆಯಲ್ಲಿ , ಇಂಥ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಅಗತ್ಯವಾದ ಮಾರ್ಗೋಪಾಯಗಳನ್ನು ರೂಪಿಸುವ ಉದ್ದೇಶದ 65 ನೇ ಕಾರ್ಯದರ್ಶಿಗಳು ಹಾಗೂ ವಿಧಾನಮಂಡಲ ಅಧ್ಯಕ್ಷರುಗಳ ಸಭೆ ಬೆಂಗಳೂರಿನಲ್ಲಿ ಬುಧವಾರ ಪ್ರಾರಂಭವಾಯಿತು.

ಡಿಸೆಂಬರ್‌ 13 ರ ಸಂಸತ್‌ ಭವನದ ಮೇಲಿನ ದಾಳಿ ಹಾಗೂ ಕಾಶ್ಮೀರ, ಒರಿಸ್ಸಾ ವಿಧಾನಸಭೆಗಳ ಮೇಲೆ ನಡೆದ ದಾಳಿ ಜನತೆಯ ಧೃತಿಗೆಡಿಸುವ ಉದ್ದೇಶ ಹೊಂದಿದ್ದವು. ಆದರೆ, ನಮ್ಮ ರಕ್ಷಣಾ ಪಡೆಗಳು ಈ ದಾಳಿಯನ್ನು ಸಮರ್ಥವಾಗಿ ವಿಫಲವಾಗಿಸಿವೆ ಎಂದು ಸಮಾವೇಶ ಉದ್ಘಾಟಿಸಿದ ಲೋಕಸಭಾ ಕಾರ್ಯದರ್ಶಿ ಜನರಲ್‌ ಜಿ.ಸಿ.ಮಲ್ಹೋತ್ರ ಅಭಿಪ್ರಾಯಪಟ್ಟರು.

ಸಭಾಧ್ಯಕ್ಷರುಗಳ ಸಮಾವೇಶಕ್ಕೆ ಪೂರ್ವ ಪೀಠಿಕೆಯಾಗಿ ಕಾರ್ಯದರ್ಶಿಗಳ ಸಭೆ ಪ್ರಾರಂಭವಾಗಿದ್ದು , ವಿವಿಧ ರಾಜ್ಯಗಳ ಪ್ರೆಸಿಡಿಂಗ್‌ ಆಫೀಸರ್‌ಗಳ ಸಮಾವೇಶವನ್ನು ಲೋಕಸಭಾ ಸ್ಪೀಕರ್‌ ಮನೋಹರ್‌ ಜೋಶಿ ಗುರುವಾರ ಉದ್ಘಾಟಿಸುವರು.

ವಿಧಾನಮಂಡಲ ಕಲಾಪದ ನೇರ ಪ್ರಸಾರ, ಪಕ್ಷಾಂತರ ವಿರೋಧಿ ಕಾಯ್ದೆಯ ವಿಮರ್ಶೆ, ಮುಂದಿನ ದಿನಗಳಲ್ಲಿ ಎದುರಿಸಬೇಕಾದ ವಿವಿಧ ಸನ್ನಿವೇಶಗಳು ಹಾಗೂ ಸಭಾಧ್ಯಕ್ಷರು- ಕಾರ್ಯದರ್ಶಿಗಳ ಸಮಾವೇಶಕ್ಕೆ ನಿಧಿ ಸಂಗ್ರಹಣೆ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ವಿಧಾನಮಂಡಲದ ಸಭಾಧ್ಯಕ್ಷರುಗಳ ಸಮಾವೇಶ ನಾಲ್ಕು ಸಮಿತಿಗಳನ್ನು ರಚಿಸಲಿದೆ ಎಂದು ಮಲ್ಹೋತ್ರ ತಿಳಿಸಿದರು.

ಸಮಾವೇಶಕ್ಕೆ ಸರ್ಪಗಾವಲು
ಲಷ್ಕರ್‌-ಎ-ತೊಯಿಬಾ, ಅಲ್‌ ಖ್ವೆ ೖದಾ ಹಾಗೂ ತಮಿಳು ಉಗ್ರರಿಂದ ಕೆಲವು ರಾಜ್ಯಗಳ ಸಭಾಧ್ಯಕ್ಷರುಗಳಿಗೆ ಪ್ರಾಣ ಭಯವಿರುವುದರಿಂದ, ಸಮಾವೇಶಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಸಮಾವೇಶದ ಸಂಪೂರ್ಣ ಬಂದೋಬಸ್ತ್‌ ಹೊಣೆಗಾರಿಕೆಯನ್ನು ಜಂಟಿ ಪೊಲೀಸ್‌ ಕಮೀಷನರ್‌ ಹಾಗೂ ಇಬ್ಬರು ಡಿಸಿಪಿಗಳಿಗೆ ವಹಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಸುದ್ದಿಗಾರರಿಗೆ ತಿಳಿಸಿದ್ದಾರೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X