ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೋಬ್ರಾ’ ಬಂದಿದೆ, ಬೀದಿ ಕಾಮಣ್ಣಗಳೇ ಹುಷಾರ್‌ !

By Staff
|
Google Oneindia Kannada News

ಬೆಂಗಳೂರು: ಇನ್ನು ಮೇಲೆ ಬೀದಿ ಕಾಮಣ್ಣರು ಹೆಂಗಸರ ಕೈಯಿಂದ ಬಚಾವ್‌ ಆಗುವಂತಿಲ್ಲ. ಸಾಮಾನ್ಯವಾಗಿ ಕಪಾಳ ಮೋಕ್ಷ ಮಾಡಲು ಹಿಂಜರಿಯುವ ಹೆಣ್ಣು ಮಕ್ಕಳಿಗಾಗಿಯೇ ಅಕ್ಸ್‌ ಗ್ಲೋಬಲ್‌ ಸಂಸ್ಥೆ ವಿಶೇಷವಾದ ‘ಕೋಬ್ರಾ’ ಪುಡಿ ತಯಾರಿಸಿದೆ.

ಕೋಬ್ರಾ ಪುಡಿಯನ್ನು ಸರಳವಾಗಿ ವಿವರಿಸಬೇಕೆಂದರೆ ಅದು ಪರಿಣಾಮಕಾರಿಯಾದ ಮೆಣಸಿನ ಪುಡಿ. ದೇಶದಲ್ಲಿ ದಿನೇ ದಿನೇ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗುತ್ತಿರುವುದರಿಂದ ಈ ಸಂಸ್ಥೆಯು ಹೆಂಗಸರ ಒಳಿತಿನ ದೃಷ್ಟಿಯಿಂದ ಕೋಬ್ರಾ ಅನ್ನು ತಯಾರಿಸಿದೆ.

ಸದ್ಯದಲ್ಲೇ, 70 ಎಂ.ಎಲ್‌ ಕೋಬ್ರಾ ಸ್ಪ್ರೇ ಬಾಟಲ್‌ ಅಂಗಡಿಗಳಲ್ಲಿ ಲಭ್ಯವಾಗಲಿದೆ. ಕೋಬ್ರಾ ಪುಡಿಯಿಂದ ಚೇತರಿಸಿಕೊಳ್ಳಲು ಒಬ್ಬ ವ್ಯಕ್ತಿಗೆ ಕನಿಷ್ಠ 15 ನಿಮಿಷವಾದರೂ ಬೇಕು.

ಅಶ್ರು ವಾಯುವಿಗಿಂತಲೂ ಪ್ರಬಲವಾಗಿರುವ ಕೋಬ್ರಾ ಪುಡಿ, ದೊಂಬಿ ಮತ್ತು ಗಲಭೆ ನಡೆದಾಗ ಗುಂಪನ್ನು ಚದುರಿಸಲು ಪೊಲೀಸರಿಗೂ ನೆರವಾಗಲಿದೆ. ಸದ್ಯಕ್ಕೆ ಕೋಬ್ರಾದ ದುರ್ಬಳಕೆಯನ್ನು ತಡೆಗಟ್ಟಲು, ಈ ಪುಡಿಯನ್ನು ಕ್ರೆಡಿಟ್‌ ಕಾರ್ಡ್‌ ಮತ್ತು ಆನ್‌ ಲೈನ್‌ ಮೂಲಕ, ಗ್ರಾಹಕನ ಹೆಸರು, ಉದ್ದೇಶ ಮತ್ತು ವಿಳಾಸಗಳನ್ನು ಪಡೆದುಕೊಂಡು ಮಾರಾಟ ಮಾಡಲಾಗುತ್ತಿದೆ ಎಂದು ಅಕ್ಸ್‌ ಗ್ಲೋಬಲ್‌ ಸಂಸ್ಥೆಯ ರಾಣಾ ಸಿಂಗ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X