ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಹಂಸ ಲೇಟಾದರೆ ಪ್ರಯಾಣಿಕರಿಗೆ ಶೇ.10 ಹಣ ವಾಪಾಸ್‌ !

By Staff
|
Google Oneindia Kannada News

ಗುಲ್ಬರ್ಗ: ರಾಜಹಂಸ ಬಸ್‌ ತಡವಾಗಿ ಆಗಮಿಸಿದಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ದರದ ಶೇ 10ರಷ್ಟು ಹಣವನ್ನು ವಾಪಾಸು ಮಾಡುವುದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ದೇವರಾಜ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯನ್ನು ತಿಳಿಸಿದ ಅವರು ಸಾರಿಗೆ ಸಂಸ್ಥೆಯಲ್ಲಿ ಶಿಸ್ತು ತರುವುದೇ ಈ ಕ್ರಮದ ಮೂಲ ಉದ್ದೇಶ ಎಂದರು. ಸಾರಿಗೆ ಸಂಸ್ಥೆಯಲ್ಲಿ ಸಾಕಷ್ಟು ಶಿಸ್ತು ಬಂದಿದೆ. ಸಂಸ್ಥೆ ಕೂಡ ಲಾಭ ಗಳಿಸುತ್ತಿದೆ. ಆದರೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಇನ್ನಷ್ಟು ಶಿಸ್ತು ಮೂಡಿಸಬೇಕಾಗಿದೆ ಅಲ್ಲದೆ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯಾದ್ಯಂತ ಸುಮಾರು 30 ಹೊಸ ವೋಲ್ವೋ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಹಳೆಯ ವೋಲ್ವೋ ಬಸ್‌ಗಳನ್ನು ಸೇವೆಯಿಂದ ವಾಪಾಸ್‌ ತೆಗೆದುಕೊಳ್ಳಲಾಗುವುದು ಎಂದು ದೇವರಾಜ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X