ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಪನ್ನಿಟಾಗೆ ‘ಅಲ್‌ರಿkುೕಮರ್ಸ್‌’ ಪೀಡಿತರಿಗೆ ಸೂರಾಗುವ ಆಸೆ!

By Staff
|
Google Oneindia Kannada News

ಬೆಂಗಳೂರು: ನಾನು ಅಪ್ಪನ ಪಕ್ಕ ಕೂತಿದ್ದೆ. ಕೊರಡಿನಂತಿದ್ದ ಅವರ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದು ಅಲವತ್ತುಕೊಂಡೆ- ಅಪ್ಪಾ, ಒಂದೇ ಒಂದು ಸಲ ಯಾವುದಾದರೂ ಹೆಸರು ಹಿಡಿದು ನನ್ನ ಕೂಗಪ್ಪಾ. ದುರುಗುಟ್ಟಿ ನೋಡಿದ ಅಪ್ಪ ಎಂದಿನಂತೆ ನನ್ನನ್ನು ಜೋರಾಗಿ ನೂಕಿ ದರದರನೆ ಓಡಲು ಮುಂದಾದರು. ನಾನು ಪಟ್ಟು ಬಿಡಲಿಲ್ಲ. ಬಿಗಿಯಾಗಿ ಹಿಡಿದಿದ್ದೆ. ಓಡಬೇಡಪ್ಪಾ, ನಾನು ನಿನ್ನ ಮಗಳು. ಪ್ಲೀಸ್‌ ಅಪ್ಪ, ಒಂದೇ ಒಂದು ಸಲ ನನ್ನ ಕೂಗು’!
- ಡಿಪನ್ನಿಟ ಬೋಸ್‌ ಅವರ ‘ಎ ಟ್ರಿಬ್ಯೂಟ್‌ ಟು ಮೈ ಫಾದರ್‌’ ಎಂಬ ಕೃತಿಯ ಸಾಲುಗಳಿವು.

Alzheimersಎಂಬ ವಿಚಿತ್ರ ಕಾಯಿಲೆ ವಿರುದ್ಧ ಡಿಪಾನ್ನಿಟ ಬೋಸ್‌ ಹೋರಾಟ ಇದೀಗ ಶುರುವಾಗಿದೆ. ಇದೇ ಜ್ವರದ ಕಾರಣ 2000ನೇ ಇಸವಿ ಡಿಸೆಂಬರ್‌ನಲ್ಲಿ ಡಿಪನ್ನಿಟ ತನ್ನ ತಂದೆಯನ್ನು ಕಳಕೊಂಡರು. ಅಲ್‌ರಿkುೕಮರ್ಸ್‌ ಅಂಡ್‌ ರಿಲೇಟೆಡ್‌ ಡಿಸಾರ್ಡರ್‌ ಸೊಸೈಟಿ ಆಫ್‌ ಇಂಡಿಯಾ(Ardsi) ದಬೆಂಗಳೂರು ಘಟಕ ತೆಗೆಯಲು ಡಿಪನ್ನಿಟ ಹಟ ತೊಟ್ಟದ್ದೇ ಆಗ.

ಮದ್ದೇ ಇಲ್ಲದ ಈ ರೋಗ ಕೋಪ, ಹತಾಶೆಯ ಪರಾಕಾಷ್ಠೆ. ನನ್ನ ಅಪ್ಪ ಇಂಥಾ ಒಂದು ರೋಗದ ಕಬಂಧಬಾಹುಗಳಿಗೆ ಸಿಕ್ಕಾಗ ನಾನು ಪಟ್ಟ ಪಡಪಾಟಲು ಅಷ್ಟಿಷ್ಟಲ್ಲ. ಅದರ ವಿರುದ್ಧ ಹೋರಾಡುವುದು ಹೇಗೆ ಅಂತ ದಿಕ್ಕೇ ತೋಚುತ್ತಿರಲಿಲ್ಲ. ನಾಲ್ಕು ವರ್ಷ ನಾನು ನಡೆಸಿದ ಹೆಣಗಾಟ ನನಗೇ ಗೊತ್ತು ಅನ್ನುತ್ತಾರೆ ಡಿಪಾನ್ನಿಟ.

ಅಲ್‌ರಿkುೕಮರ್ಸ್‌ ಕಾಯಿಲೆ, ಏನಿದು?
ಇದೊಂದು ನರ ಸಂಬಂಧೀ ಕಾಯಿಲೆ. ಸಾಮಾನ್ಯವಾಗಿ ನಲವತ್ತು ದಾಟಿದ ಮಧ್ಯ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತದೆ. ಜ್ಞಾಪಕ ಶಕ್ತಿ ಕುಂದುತ್ತದೆ, ಮಾತು ತೊದಲುತ್ತದೆ, ಗೊತ್ತಾಗದ ಭಾಷೆ ಹೊಮ್ಮುತ್ತದೆ, ಯೋಚನೆ, ಕಲಿಕಾ ಸಾಮರ್ಥ್ಯ ಎಲ್ಲಾ ಕಳೆದುಹೋಗುತ್ತದೆ. ದಿನೇದಿನೇ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ರೋಗ ಪೀಡಿತರಿಗೆ ನಾವು ಹೇಳೋದು ತಲೆಗೆ ಹೋಗೋಲ್ಲ. ಅವರ ಬುದ್ಧಿ ಸ್ಥಿಮಿತದಲ್ಲಿ ಇರೋಲ್ಲ. ಯಾವ ಕ್ಷಣ ಏನು ಮಾಡುತ್ತಾರೋ ಗೊತ್ತೇ ಆಗದು. ಅವರ ನಿತ್ಯಕರ್ಮಗಳೂ ಕುಂತಲ್ಲೇ ಆಗಲು ಶುರುವಾಗುತ್ತವೆ. ರಾತ್ರಿ ಹೊತ್ತು ನಿದ್ದೆ ಮಾಡದಿರುವುದು, ದಿಕ್ಕೆಟ್ಟು ಓಡುವುದು, ಏನೋ ಅರ್ಥವಾಗದ್ದನ್ನು ಚೀರುವುದು ಕೂಡ ಉಂಟು.

ಈಗ ಡಿಪನ್ನಿಟ ಟೊಂಕ ಕಟ್ಟಿರುವುದು ಇಂತಹ ರೋಗಕ್ಕೆ ಬಲಿಯಾದವರನ್ನು ನೋಡಿಕೊಳ್ಳುವ ಮಹಾ ಯೋಜನೆಗೆ. ಅದಕ್ಕಾಗಿ 15 ಹೆಂಗಸರಿಗೆ ತರಪೇತಿಯನ್ನೂ ಕೊಡಲು ಈಕೆ ಚಿಂತಿಸುತ್ತಿದ್ದಾರೆ. ಬೆಂಗಳೂರಲ್ಲಿ ಇಂಥಾ ರೋಗ ಪೀಡಿತರ ಕೇರ್‌ ತೆಗೆದುಕೊಳ್ಳಲು ಒಂದು ಕೇಂದ್ರ ತೆರೆಯುವ ಹಾದಿಯಲ್ಲಿ ಈಕೆ ತುಳಿದದ್ದು ಮುಳ್ಳುಗಳನ್ನೇ. ರೋಗಿಗಗಳನ್ನು ನೋಡಿಕೊಳ್ಳುವವರು ಸಮಾನ ಮನಸ್ಕರಾಗಿರಬೇಕು. ಭೂಮಿಯಂಥಾ ಸಹಿಷ್ಣುತೆ ಬೇಕು. ಸೆಪ್ಟೆಂಬರ್‌ ಹೊತ್ತಿಗೆ ಕನಸು ನನಸಾಗುತ್ತದೆ ಎಂಬ ಭರವಸೆ ನನ್ನದೆನ್ನುವ ಡಿಪನ್ನಿಟ ಹೊರಲಿರುವ ನೊಗಕ್ಕೆ ನೀವೂ ಹೆಗಲು ಕೊಡುವಿರಾ? ಹಾಗಿದ್ದರೆ, (080) 5216528ಗೆ ಫೋನಾಯಿಸಿ ಅಥವಾ[email protected]ಗೆ ಇ- ಮೇಲ್‌ ಕಳಿಸಿ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X