ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‘ಮಣಿಪಾಲ ಕ್ಲಿನಿಕ್‌’

By Staff
|
Google Oneindia Kannada News

ಬೆಂಗಳೂರು: ನಗರದ ವಿಮಾನ ನಿಲ್ದಾಣದಲ್ಲಿ ಮಣಿಪಾಲ ಆಸ್ಪತ್ರೆ ‘ಮಣಿಪಾಲ ಕ್ಲಿನಿಕ್‌’ ಸ್ಥಾಪಿಸುವುದರೊಂದಿಗೆ ಆಸ್ಪತ್ರೆಯ ಸೌಕರ್ಯ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎನ್ನುವ ಗೌರವಕ್ಕೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಮಣಿಪಾಲ್‌ ಆಸ್ಪತ್ರೆ ತನ್ನ ಕ್ಲಿನಿಕ್‌ ಸ್ಥಾಪಿಸಿದೆ. ನಗರದ ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರ ಅಗತ್ಯಗಳ ಹಿನ್ನೆಲೆಯಲ್ಲಿ ಪ್ರಾರಂಭವಾಗಿರುವ ಈ ಕ್ಲಿನಿಕ್‌ನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಾದೇಶಿಕ ನಿರ್ವಾಹಕ ನಿರ್ದೇಶಕ ಎಸ್‌.ಆರ್‌.ಆರ್‌.ರಾವ್‌ ಸೋಮವಾರ ಉದ್ಘಾಟಿಸಿದರು.

ಆಂಬುಲೆನ್ಸ್‌, ಕೃತಕ ಆಮ್ಲಜನಕ ವ್ಯವಸ್ಥೆ , ಪ್ರಥಮ ಚಿಕಿತ್ಸೆ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಿರುವ ಈ ಕ್ಲಿನಿಕ್‌ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ಬೆಂಗಳೂರಿನಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿಯನ್ನೂ ಕ್ಲಿನಿಕ್‌ ಒದಗಿಸಲಿದೆ ಎಂದು ಕ್ಲಿನಿಕ್‌ ಉದ್ಘಾಟನೆಯ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಮಣಿಪಾಲ್‌ ಆಸ್ಪತ್ರೆಯ ಅಧ್ಯಕ್ಷ ಆರ್‌.ಬಸಿಲ್‌ ಹೇಳಿದರು.

ಪ್ರಾರಂಭದ ಹಂತದಲ್ಲಿ ಕ್ಲಿನಿಕ್‌ನಲ್ಲಿ ಇಬ್ಬರು ವೈದ್ಯರು ಕಾರ್ಯ ನಿರ್ವಹಿಸಲಿದ್ದಾರೆ. ರಕ್ಷಣೆಯ ದೃಷ್ಟಿಯಿಂದ ಹೊರರೋಗಿಗಳಿಗೆ ಚಿಕಿತ್ಸೆಯನ್ನು ನಿಷೇಧಿಸಲಾಗಿದ್ದು , ಪ್ರಯಾಣಿಕರಿಗೆ ಮಾತ್ರ ವೈದ್ಯಕೀಯ ಸೇವೆಗಳನ್ನು ಮೀಸಲಿಡಲಾಗಿದೆ ಎಂದು ಬಸಿಲ್‌ ತಿಳಿಸಿದರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X