ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಂ ಕೃಷ್ಣ ನೇತೃತ್ವದಲ್ಲಿ ಕಾಫಿ ಸಂತ್ರಸ್ತರ ನಿಯೋಗ ದೆಹಲಿಗೆ ..

By Staff
|
Google Oneindia Kannada News

ಬೆಂಗಳೂರು : ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತರಲು ಸ್ವತಃ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ಸದ್ಯದಲ್ಲೇ ನಿಯೋಗವೊಂದನ್ನು ಕರೆದುಕೊಂಡು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಭೇಟಿಯಾಗಲಿದ್ದಾರೆ.

ಕಾಫಿ ಬೆಳೆಗಾರರ ಮತ್ತು ಕಾಫಿ ಮಾರುಕಟ್ಟೆಯ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದು ನೆರವಿಗಾಗಿ ಆಗ್ರಹಿಸಲು ದೆಹಲಿಗೆ ತೆರಳುವ ನಿಯೋಗದಲ್ಲಿ ಜವಳಿ ಖಾತೆ ಸಚಿವ ವಿ. ಧನಂಜಯ್‌ ಕುಮಾರ್‌ ಸೇರಿದಂತೆ ಕಾಫಿ ಮಾರುಕಟ್ಟೆಯ ಮುಖ್ಯಸ್ಥರು, ಕಾಫಿ ಬೆಳೆಯುವ ಪ್ರದೇಶದಲ್ಲಿನ ಜನಪ್ರತಿನಿಧಿಗಳು ಸೇರಿರುತ್ತಾರೆ.

ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ. ಚಂದ್ರೇಗೌಡ ಕಾಫಿ ಬೆಳೆಗಾರರ ಸಭೆಯಲ್ಲಿ ಭಾಗವಹಿಸಿದ ನಂತರ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು. ಮುಖ್ಯಮಂತ್ರಿ ನೇತೃತ್ವದಲ್ಲಿ ತೆರಳುವ ನಿಯೋಗವು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹ ಹಾಗೂ ವಾಣಿಜ್ಯ ಸಚಿವ ಮುರಸೋಳಿ ಮಾರನ್‌ ಅವರನ್ನೂ ಭೇಟಿಯಾಗಿ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹಾಗೂ ಕಾಫಿ ಬೆಲೆ ಕುಸಿತದ ಕುರಿತು ಸಚಿವದ್ವಯರಿಗೆ ಮನವರಿಕೆ ಮಾಡಿಕೊಡಲಿದೆ.

ಕಾಫಿ ಬೆಳೆಗಾರರು ಪಡೆದಿರುವ ಸಾಲವನ್ನು ಹಿಂದಿರುಗಿಸಲು ಇನ್ನಷ್ಟು ಹೆಚ್ಚು ಅವಧಿ ಒದಗಿಸಬೇಕು. ಅಲ್ಲದೆ ಇನ್ನು ಮೂರು ವರ್ಷಗಳ ಕಾಲ ಸಾಲದ ಬಡ್ಡಿಗೆ ರಜೆ ಘೋಷಿಸಬೇಕು ಎಂದು ನಿಯೋಗವು ಕೇಂದ್ರವನ್ನು ಆಗ್ರಹಿಸಲಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X