ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಲ್ಲಿ ಸಾಫ್ಟ್‌ವೇರ್‌ ಕೇಂದ್ರ ಸ್ಥಾಪನೆಗೆ ಮುಂದಾದ ಇನ್ಫೋಸಿಸ್‌

By Staff
|
Google Oneindia Kannada News

ಬೆಂಗಳೂರು : ಏಷ್ಯಾದ ಹಾರ್ಡ್‌ವೇರ್‌ ದೈತ್ಯ ಚೀನಾದಲ್ಲಿ ತನ್ನ ಸಾಫ್ಟ್‌ವೇರ್‌ ಚಟುವಟಿಕೆಗಳನ್ನು ಪ್ರಾರಂಭಿಸಲು ಭಾರತದ ಸಿಲಿಕಾನ್‌ ವ್ಯಾಲಿಯ ಮುಕುಟ ಇನ್ಫೋಸಿಸ್‌ ಉದ್ದೇಶಿಸಿದೆ.

ಚೀನಾದಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಇನ್ಫೋಸಿಸ್‌ ಯೋಚಿಸುತ್ತಿದೆ. ಇದೇ ವೇಳೆಯಲ್ಲಿ ಇತರ ಅವಕಾಶ- ಸಾಧ್ಯತೆಗಳನ್ನೂ ಇನ್ಫೋಸಿಸ್‌ ಪರಿಶೀಲಿಸುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಇನ್ಫೋಸಿಸ್‌ ಸಾಗರೋತ್ತರ ಚಟುವಟಿಕೆಗಳ ಬಗ್ಗೆ ಇತರ ವಿವರಗಳನ್ನು ನೀಡಲು ಅವರು ನಿರಾಕರಿಸಿದರು.

ಚೀನಾದ ಷಾಂಘಾಯ್‌ನಲ್ಲಿ ಸಾಫ್ಟ್‌ವೇರ್‌ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸುವ ಇರಾದೆ ಇನ್ಫೋಸಿಸ್‌ಗಿದ್ದು , ಈ ಪ್ರಸ್ತಾವನೆಗೆ ಚೀನಾದ ಪ್ರಧಾನಿ ತಮ್ಮ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಸ್ಥಳದಲ್ಲಿಯೇ ಹಸಿರು ನಿಶಾನೆ ತೋರಿದ್ದರು.
(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X