ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ-ಗಾ-ಗಿ ಮಣ್ಣಿಂ-ದ ಶವ ತೆರೆ-ದು ಸು-ಡುತ್ತಿ-ರುವ ಚೆನ್ನ-ಗಿ-ರಿ ಗ್ರಾಮಸ್ಥ-ರು

By Staff
|
Google Oneindia Kannada News

ಶಿವಮೊಗ್ಗ : ದಟ್ಟ ಹಸಿರನ್ನು ಮಡಿಲಲ್ಲಿ ಇಟ್ಟುಕೊಂಡ ಶಿವಮೊಗ್ಗಕ್ಕೂ ಕಳೆದ ವರ್ಷ ಬರಗಾಲದ ಬಾಧೆ ತಪ್ಪಲಿಲ್ಲ. ಕುಡಿಯುವ ನೀರಿಗಾಗಿ ಮಹಿಳೆಯರು ಬಿಂದಿಗೆ ಹಿಡಿದುಕೊಂಡು ಮೈಲುಗಟ್ಟಲೆ ನಡೆಯಬೇಕಾಗಿ ಬಂತು.

ಬೃಹತ್‌ ಕೈಗಾರಿಕೆಗಳ ಉಪಟಳವಿಲ್ಲದ, ಸಾಕಷ್ಟು ಮರಗಿಡಗಳ ಗಾಳಿ ಬೀಸುತ್ತಿರುವ ಈ ಊರಿಗೆ ಬರಗಾಲ ಹೇಗೆ ಬಂತಪ್ಪಾ ಎಂದರೆ ಚೆನ್ನಗಿರಿಯ ಗ್ರಾಮಸ್ಥರು ನೀಡುವ ಕಾರಣ - ಲ್ಯೂಕೋಡರ್ಮಾ ಕಾಯಿಲೆ ಇರುವವರನ್ನು ಹೂಳುವುದರಿಂದ.

ಲ್ಯೂಕೋಡರ್ಮಾ ಕಾಯಿಲೆ ಇರುವ ಮನುಷ್ಯ ಮೃತನಾದರೆ ಆತನ ದೇಹವನ್ನು ದಹಿಸುವುದು ಸಂಪ್ರದಾಯ. ಈ ಸಂಪ್ರದಾಯವನ್ನು ಪಾಲಿಸದೇ ಇದ್ದರೆ ಊರಿಗೆ ಮಳೆ ಬರುವುದಿಲ್ಲ ಎಂಬುದು ಪ್ರತೀತಿ.

ಈ ಬಾರಿಯೂ ಮಳೆರಾಯ ಮುನಿಸಿಕೊಳ್ಳದೇ ಇರಲಿ ಎಂದು ಗ್ರಾಮಸ್ಥರು 10 ತಿಂಗಳ ಹಿಂದೆ ಲ್ಯೂಕೋಡರ್ಮಾ ಕಾಯಿಲೆಯಿಂದ ತೀರಿಕೊಂಡಾತನ ದೇಹವನ್ನು ಮಣ್ಣಿನಡಿಯಿಂದ ಹೊರ ತೆಗೆದು ಸೌದೆ ರಾಶಿ ಹಾಕಿ ಬೆಂಕಿ ಹಚ್ಚಿದ್ದಾರೆ. ಈ ಪ್ರಕ್ರಿಯೆ ಮುಂದುವರೆದಿದೆ. ಲ್ಯೂಕೋಡರ್ಮಾ ಕಾಯಿಲೆಯಿಂದ ಬಳಲುತ್ತಿದ್ದವರು ತೀರಿಕೊಂಡಿರುವ ವಿಷಯ ಹಾಗೂ ಮೃತ ದೇಹವನ್ನು ಹೂಳಿರುವ ಜಾಗ ಪತ್ತೆಯಾದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ದಹನ ಕ್ರಿಯೆಗೆ ಏರ್ಪಾಟು ಮಾಡುತ್ತಿದ್ದಾರೆ.

ಹೀಗೆ ಮಾಡುವುದರಿಂದ ಮೃತರ ಕುಟುಂಬಕ್ಕೆ ದುಃಖವುಂಟಾಗುತ್ತದೆ ಎಂದು ಕೆ. ಜಿ. ಮಲ್ಲೇಶಪ್ಪಾ ಎಂಬವರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮಲ್ಲೇಶಪ್ಪಾ ಅವರ ಮೃತ ಸಹೋದರ ಕೆ.ಜಿ. ಕುಮಾರ ಸ್ವಾಮಿ ಅವರ ದೇಹವನ್ನು ಅಗೆದು ತೆಗೆದು ದಹಿಸಲಾಗಿದೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ಎನ್‌. ರುದ್ರಮುನಿ ನೇತೃತ್ವದ ತಂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ತನಿಖೆ ಮುಂದುವರೆದಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X