ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಮ್ಯಾಗ್ನೆಟ್‌ ಲಾಲೂ ಪ್ರಸಾದ್‌ ಯಾದವ್‌ ವಯಸ್ಸೆಷ್ಟು?

By Staff
|
Google Oneindia Kannada News

ಸ್ಕೂಲ್‌ ಎಕ್ಸಾಮಿನೇಷನ್‌ ಬೋರ್ಡ್‌ ಸರ್ಟಿಫಿಕೇಟಿನ ಪ್ರಕಾರ ಜೂನ್‌ 11ಕ್ಕೆ ಸರಿಯಾಗಿ 54 ತುಂಬುತ್ತೆ. ಆದರೆ, ಲಾಲೂ ಪ್ರಸಾದ್‌ ಯಾದವ್‌ ಅವರನ್ನ ಕೇಳಿದರೆ ತಂಬಾಕು ತುಂಬಿದ ಬಾಯಗಲಿಸಿ ನಗುತ್ತಲೇ ಹೇಳುತ್ತಾರೆ- ‘ಇಸ್‌ ಸೆ ಚಾರ್‌ ಸಾಲ್‌ ಝ್ಯಾದಾ ಹೋಂಗೆ ಯಾ ಚಾರ್‌ ಸಾಲ್‌ ಕಮ್‌!’

ಜೂನ್‌ 11ನೇ ತಾರೀಖು ಮಂಗಳವಾರ ಲಾಲೂ ಬರ್ತ್‌ಡೇ. 1, ಆ್ಯನೆ ಮಾರ್ಗ್‌ , ಪಾಟ್ನಾದಲ್ಲಿ . ಮುಬಾರಕ್‌ಗಳ ಸುರಿಮಳೆ. ಝಗಮಗ ಧೋತಿ- ಕುರ್ತಾ ಧರಿಸಿ ಲಾಲೂ ಮಿಂಚುತ್ತಿದ್ದರು. ಮೈನಾರಿಟಿ ಸೆಲ್‌ನ ಮುಖ್ಯಸ್ಥ ಜಾವೆದ್‌ ಮೆಹ್ಮೂದ್‌ ‘ಜಾತ್ಯತೀತ’ ಕೇಕೊಂದನ್ನು ತಂದರು. 30 ಪೌಂಡಿನ ಕೇಕ್‌. ಅದರಲ್ಲಿ ಮಂದಿರ, ಮಸೀದಿ, ಚರ್ಚುಗಳು. ಲಾಲೂ ಥಂಡಾ ಹೊಡೆದು ಹೋದರು. ಕೇಕ್‌ನ ಅಣಿಯಾಗಿಟ್ಟು, ಅದರ ಮೇಲೆ ಎಷ್ಟು ಮೋಂಬತ್ತಿ ಇಡಬೇಕೆಂಬ ಪ್ರಶ್ನೆ ಇದಿರಾಯಿತು. ಜಾವೆದ್‌ ಲಾಲೂ ಅವರನ್ನು ಕೇಳಿದರು- ‘ಎಷ್ಟು ವಯಸ್ಸು? ಐವತ್ತೇಳೋ, ಐವತ್ತೊಂಬತ್ತೋ?’

ಕೊನೆಗೂ ಲಾಲೂ ಉತ್ತರ ಕೊಡಲೇ ಇಲ್ಲ. ಎರಡೇ ಎರಡು ಮೋಂಬತ್ತಿ ಹಚ್ಚಿ, ಉಸಿರು ಹೊರ ಬಿಟ್ಟು ಆರಿಸಿದರು ಲಾಲೂ. ‘ಹ್ಯಾಪಿ ಬರ್ತ್‌ ಡೇ ಟೂ ಯೂ’ ಅಂದವರ ಪೈಕಿ ಲಾಲೂ ದೊಡ್ಡ ಕುಟುಂಬದ ಅಸಂಖ್ಯ ಸದಸ್ಯರೂ ಇದ್ದರು ! ರಾಷ್ಟ್ರೀಯ ಜನತಾ ದಳದವರು ಲಾಲೂ ಹುಟ್ಟುಹಬ್ಬಕ್ಕೆ ‘ಸೌಹಾರ್ದತಾ ದಿನ’ ಎಂಬ ಶೀರ್ಷಿಕೆ ಕೊಟ್ಟರು.

ಬಿಹಾರದ ಆರ್‌ಜೆಡಿ ನಾಯಕ ಪೀತಾಂಬರ ಪಾಸ್ವಾನ್‌ ಲಾಲೂ ಅವರನ್ನು ವಾಚಾಮಗೋಚರ ಹೊಗಳಿದರು. ಕೋಮುವಾದಿಗಳ ವಿರುದ್ಧ ಎದೆ ಸೆಟೆದು ನಿಂತಿರುವ ಏಕೈಕ ವ್ಯಕ್ತಿ ಲಾಲೂ ಅಂದರು.

ಲಾಲೂ ಬರ್ತ್‌ಡೇ ಪಾರ್ಟಿಗೂ ಉದ್ಘಾಟನೆ ಅಂತ ಇತ್ತು. ಅದನ್ನು ನೆರವೇರಿಸಿದ್ದು ಕೃಷಿ ಸಚಿವ ಗುಲಾಂ ಸಾರ್ವರ್‌. ಗಾಂಧಿ, ನರೇಂದ್ರ ದೇವ್‌, ಲೋಹಿಯಾ, ಜೆಪಿ ಈಗ ಬದುಕಿಲ್ಲದಿದ್ದರೂ ನಮ್ಮ ನಡುವೆ ಅವರೆಲ್ಲರ ತತ್ವಗಳ ಹೊತ್ತ ಲಾಲೂ ಇದ್ದಾರೆ. ಕೋಮುವಾದದ ವಿರುದ್ಧದ ಅವರ ದನಿಗೆ ನಾವೆಲ್ಲಾ ದನಿ ಗೂಡಿಸೋಣ ಅಂತ ಸಾರ್ವರ್‌ ಕರೆ ಕೊಟ್ಟಾಗ ಕರತಾಡನ ಮುಗಿಲು ಮುಟ್ಟಿತು.

ಇಷ್ಟೆಲ್ಲಾ ಆಗಿ, ಕೇಕು ತಿಂದು ಮನೆಗೆ ಹೊರಡುವಾಗ ಎಲ್ಲರೂ ಪದೇ ಪದೇ ಕೇಳಿಕೊಂಡ ಪ್ರಶ್ನೆ- ಲಾಲೂ ವಯಸ್ಸೆಷ್ಟು?
ಅದು ಸೀಕ್ರೇಟ್‌ ಅಂತ ಲಾಲೂ ಸಿನಿಮಾ ನಾಯಕಿಯಂತೆ ಬಳಕುತ್ತಿದ್ದರು ಅನ್ನೋದು ಮಾತ್ರ ಕುಹಕ!

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X