ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುದ್ಧಭೀತಿಯಿಂದ ದೀರ್ಘಾವಧಿ ಲೆಕ್ಕಾಚಾರ ತಲೆಕೆಳಗು : ಇನ್ಫೋಸಿಸ್‌

By Staff
|
Google Oneindia Kannada News

ಬೆಂಗಳೂರು : ಭಾರತ- ಪಾಕಿಸ್ತಾನದ ನಡುವಿನ ಯುದ್ಧ ಭೀತಿಯಿಂದ ನಮ್ಮ ಕಂಪನಿಯ ಮೇಲೆ ಹಠಾತ್‌ ವ್ಯತಿರಿಕ್ತ ಪರಿಣಾಮವೇನೂ ಉಂಟಾಗುವುದಿಲ್ಲ. ಆದರೆ, ದೀರ್ಘಾವಧಿ ಲೆಕ್ಕಾಚಾರಗಳಲ್ಲಿ ಭಾರೀ ಏರುಪೇರಾಗುವ ಆತಂಕವಂತೂ ಇದೆ ಎಂದು ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್‌ನ ಅಧಿಕಾರಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಡನೆ ಮಾತಾಡಿದ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿ ಎಸ್‌.ಗೋಪಾಲಕೃಷ್ಣನ್‌ ಈ ವಿಷಯ ತಿಳಿಸಿದರು. ಅಮೆರಿಕ ಹಾಗೂ ಬ್ರಿಟನ್‌ನಂಥಾ ಪ್ರಮುಖ ದೇಶಗಳು ತಮ್ಮ ನಾಗರಿಕರನ್ನು ಭಾರತವನ್ನು ಬಿಟ್ಟು ವಾಪಸ್ಸು ಬರುವಂತೆ ಬುಲಾವು ಕೊಟ್ಟಿರುವುದರಿಂದ ಕೆಲವು ಕಂಪನಿ ಅಧಿಕಾರಿಗಳ ಭೇಟಿ ರದ್ದಾಗಿದೆ ಅಥವಾ ಮುಂದಕ್ಕೆ ಹೋಗಿದೆ. ಆದರೆ ಸದ್ಯದ ನಮ್ಮ ವಹಿವಾಟಿಗೇನೂ ತೊಂದರೆಯಾಗಿಲ್ಲ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಷೇರುದಾರರು ಭಾಗವಹಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಗೋಪಾಲಕೃಷ್ಣನ್‌ ಹೇಳಿದರು.

ಇನ್ಫೋಸಿಸ್‌ನ ಪ್ರತಿಸ್ಪರ್ಧಿ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ಮತ್ತು ವಿಪ್ರೋ ಕಂಪನಿಗಳಿಗೆ ಇತ್ತೀಚೆಗೆ ಭೇಟಿ ಕೊಡಬೇಕಿದ್ದ ಅನೇಕ ವಿದೇಶೀ ಉದ್ದಿಮೆಗಳ ಪ್ರತಿನಿಧಿಗಳು ಕಾರ್ಯಕ್ರಮ ಬದಲಿಸಿದ್ದಾರೆ. ಯಾವುದೇ ಕ್ಷಣದಲ್ಲಿ ಯುದ್ಧ ಸ್ಫೋಟಗೊಳ್ಳುವ ಆತಂಕವಿರುವುದರಿಂದ ಭಾರತಕ್ಕೆ ಬರಲು ಅನೇಕ ವಿದೇಶೀಯರು ಹಿಂಜರಿಯುತ್ತಿದ್ದಾರೆ. ಇದು ಹೀಗೇ ಮುಂದುವರೆದಲ್ಲಿ ಸಿಲಿಕಾನ್‌ ಕಣಿವೆ ಬೆಂಗಳೂರನ್ನು ಮೂಸು ನೋಡುವವರೂ ಇಲ್ಲದಂತಾಗುತ್ತದೆ ಎಂಬ ಸಾಧ್ಯತೆಯನ್ನು ಕೆಲವು ಉದ್ದಿಮೆ ಪಂಡಿತರು ವ್ಯಕ್ತಪಡಿಸಿದ್ದಾರೆ.

ಹಾಗೇನೂ ಆಗುವುದಿಲ್ಲ. ನಮ್ಮ ಮಾರುಕಟ್ಟೆ ಸಾಗರದಾಚೆ ಇದೆಯೆನ್ನುವುದು ನಿಜ. ನಮ್ಮ ವಿದೇಶೀ ಗ್ರಾಹಕರೊಡನೆ ಮುಖತಃ ಭೇಟಿ ಸಾಧ್ಯವಿಲ್ಲದಿದ್ದರೂ, ಸಂಪರ್ಕವನ್ನೇನೂ ಕಡಿದುಕೊಂಡಿಲ್ಲ. ಆದರೆ ದೀರ್ಘಾವಧಿಯ ಲೆಕ್ಕಾಚಾರಗಳು ತಲೆಕೆಳಗಾಗಲಿವೆ ಎಂದು ಗೋಪಾಲಕೃಷ್ಣನ್‌ ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X