• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಳಿದಿರಾ ಕೇಳಿದಿರಾ....ಗಂಡಸರಿಗೆ ವರದಕ್ಷಿಣೆ ಕಿರುಕುಳ !

By Super
|

ಗಂಡಸರಿಗೆ ವರದಕ್ಷಿಣೆ ಕಾಟ. ಸೀಮೆಎಣ್ಣೆ ಸುಟ್ಟು ಹೆಂಗಸನ್ನು ಕೊಂದರೆಂದು ಬೊಬ್ಬೆ ಹೊಡೆಯುವ ಹೆಂಗಸರಿಗೆ ಗಂಡಸರ ನರಕ ಯಾತನೆ ಗೊತ್ತಾಗುತ್ತಿಲ್ಲ. ಗೊತ್ತಾಗೋದೂ ಇಲ್ಲ. ಸಾಲದ್ದಕ್ಕೆ ಅವರಿಗೆ ಕಾನೂನಿನ ಬೇಲಿಯ ರಕ್ಷಣೆ ಬೇರೆ.

ಇವತ್ತು ವರದಕ್ಷಿಣೆ ನಿಷೇಧ ಕಾನೂನು ಸರಿಯಾಗಿ ಕೆಲಸ ಮಾಡುತ್ತಿದೆಯೇ ಅಥವಾ ಅದು ದುರುಪಯೋಗವಾಗುತ್ತಿದೆಯೇ ಅಂತ ಪರಿಶೀಲನೆ ಮಾಡುವ ಗೊಡವೆಗೆ ಸರ್ಕಾರ ಹೋಗಿದೆಯಾ? ಖಂಡಿತ ಇಲ್ಲ. ನಮ್ಮ ಜನರಿಗೋ ವರದಕ್ಷಿಣೆ ಪಿಡುಗಿನ ಒಂದು ಮುಖ ಮಾತ್ರ ಕಾಣುತ್ತಿದೆ : ಅದು ಕೇವಲ ಹೆಂಗಸರ ಮೇಲೆ ನಡೆಯುತ್ತಿಯುವ ಶೋಷಣೆ. ಆದರೆ, ವಾಸ್ತವ ಅನೇಕರಿಗೆ ನಿಲುಕದ್ದು. ಒಂದು ಶೈಕ್ಷಣಿಕ ವರ್ಗ ಇದೇ ವರದಕ್ಷಿಣೆ ನಿಷೇಧ ಕಾನೂನನ್ನು ದುರುಪಯೋಗಪಡಿಸಿಕೊಂಡು, ಗಂಡಸರನ್ನು ಗೋಳು ಹೊಯ್ದುಕೊಳ್ಳುತ್ತಿರುವುದು ನಿಮಗೆ ಗೊತ್ತೆ?

ಗಂಡಸರ ವಿರುದ್ಧ ವರದಕ್ಷಿಣೆಯ ಕೇಸು ಬುಕ್ಕಾದರೆ ಜೈಲು ವಾಸ ಗ್ಯಾರಂಟಿ ಅನ್ನೋದು ಶಿಕ್ಷಿತ ವರ್ಗಕ್ಕೆ ಚೆನ್ನಾಗಿ ಗೊತ್ತು. ಕೆಲವು ಮಾಡರ್ನ್‌ ಹುಡುಗಿಯರಿಗೆ ಇದೇ ವರವಾಗಿದ್ದು, ಅವರ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಹುಡುಗರಿಗೆ ಶಾಪವಾಗಿದೆ. ವರದಕ್ಷಿಣೆ ಕಾನೂನಿನಿಂದ ಶೋಷಣೆಗೆ ಸಿಲುಕಿದ ಗಂಡಸರೆಷ್ಟೋ. ನಾನು ಕಂಡ ಕೆಲವು ಸ್ಯಾಂಪಲ್ಲುಗಳು ಇವು...

  • ಐಐಟಿಯಲ್ಲಿ ಎಂಟೆಕ್‌ ಪದವೀಧರನೊಬ್ಬ ನನ್ನ ಗೆಳೆಯ. ಆತ ಮದುವೆಯಾದ ಹುಡುಗಿ ಆಡಿದ ವರದಕ್ಷಿಣೆ ನಾಟಕದಿಂದ ಈತನ ಮನೆಯವರು ಜೈಲು ವಾಸ ಅನುಭವಿಸಬೇಕಾಯಿತು. ತಪ್ಪು ತಮ್ಮದಲ್ಲ ಎಂಬುದನ್ನು ರುಜುವಾತು ಮಾಡಲು ಈ ಗೆಳೆಯನ ಮನೆಯವರಿಗೆ ಏಳು ವರ್ಷ ಬೇಕಾಯಿತು. ಆದರೆ ಈಗ ತುಂಬಾ ತಡವಾಗಿದೆ. ಒಂದು ಕಾಲದಲ್ಲಿ ಜಗಜ್ಜಾಣನಾಗಿದ್ದ ನೊಂದ ನನ್ನ ಗೆಳೆಯ ಈಗ ಡ್ರಗ್‌ ಬಲಿಪಶು. ಮನೆಯವರ ಬಲವಂತಕ್ಕೆ ಮದುವೆಯಾಗಿದ್ದ ಹುಡುಗಿಗೆ ನನ್ನ ಗೆಳೆಯ ಬೇಡವಾಗಿದ್ದ ಎಂಬ ಏಕೈಕ ಕಾರಣಕ್ಕೆ ಅವನ ಮೇಲೆ ಹೆಂಡತಿ, ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಳು.
  • ಕಳೆದ ವರ್ಷ ಇಂಥದೇ ಇನ್ನೊಂದು ಪ್ರಕರಣ ಕಿವಿಗೆ ಬಿತ್ತು. ನನ್ನ ಗೆಳೆಯನ ನೆಂಟ ಮದುವೆಯಾದ ಮರು ದಿನವೇ ಅವನ ಹೆಂಡತಿ, 'ನೀನು ನನಗಿಷ್ಟವಿಲ್ಲ. ನಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ" ಅಂದಳು. ಅವನು ಎಷ್ಟೆಷ್ಟೋ ತಿಳಿ ಹೇಳಿ, ಹೊಂದಿಕೊಂಡು ಹೋಗಲು ಯತ್ನಿಸಿದ. ಹುಡುಗಿಯ ಮನೆಯವರಿಗೆ ಅವನು ಎನ್‌ಆರ್‌ಐ ಆದ್ದರಿಂದ, ಅವನ ದುಡ್ಡಿನ ಮೇಲೂ ಮೋಹವಿತ್ತು. ಎಲ್ಲಾ ಸೇರಿ ನಾಟಕವಾಡಿ, ವರದಕ್ಷಿಣೆ ಕಿರುಕುಳದ ಕೇಸ್‌ ಬುಕ್‌ ಮಾಡಿದರು. ಗೆಳೆಯ ಇನ್ನೂ ಕೋರ್ಟಿಗೆ ಎಡತಾಕುತ್ತಿದ್ದಾನೆ !
  • ನಮ್ಮ ದೂರದ ಸಂಬಂಧಿಯಾಬ್ಬನದ್ದು ವಿಚಿತ್ರ ಗೋಳು. ಅಮೆರಿಕಾ ಸಹವಾಸ ಸಾಕು, ಭಾರತದಲ್ಲೇ ಸೆಟ್ಲಾಗೋಣ ಅಂದದ್ದು ಹೆಂಡತಿಗೆ ಸರಿ ಬೀಳಲಿಲ್ಲ. ಅವಳ ತಲೆಗೆ ಹೊಳೆದ ಐಡಿಯಾ ಕೂಡ ವರದಕ್ಷಿಣೆ ಕಿರುಕುಳದ್ದೇ. ಸಾವಿರಾರು ರುಪಾಯಿ ಹಣವನ್ನು ನನ್ನ ಬಂಧು ಕೋರ್ಟಿಗಾಗೇ ಖರ್ಚುಮಾಡಿದ್ದಾನೆ. ಆದರೆ ಅವನ ಅಳಲನ್ನು ಯಾರೂ ನಂಬುತ್ತಿಲ್ಲ.

ಇವೆಲ್ಲಾ ನಮೂನೆಗಳಷ್ಟೆ. ಈ ರೀತಿ ಹುಡುಗಿಯರ ವರದಕ್ಷಿಣೆ ಕಿರುಕುಳದ ಬಾಣಕ್ಕೆ ಗುರಿಯಾಗಿರುವ ಪುರುಷ ಮಿಕಗಳೆಷ್ಟೋ. ದೆಹಲಿಯಲ್ಲೇ ಇಂತಹ ನೂರಾರು ಪ್ರಕಣಗಳು ವರದಿಯಾಗಿವೆ. ಆದರೆ ಕಾನೂನು ಪುರುಷನಿಗೆ ರಕ್ಷಣೆ ಕೊಡುವಂತಿಲ್ಲ. ಹಾಗಾದರೆ ಮುಗ್ಧ ಗಂಡಸರು ಏನು ಮಾಡಬೇಕು

English summary
A Browser pens an extrordinary stuff : Dowry Harassment of Men !
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X